ಮನೋರಂಜನೆ

30 ವರ್ಷ..4 ಲವ್ ಫೇಲ್ಯೂರ್…ದೀಪಿಕಾ ಟ್ರ್ಯಾಕ್‌ ರೆಕಾರ್ಡ್‌ನಲ್ಲಿ ಯಾರಾರು?

Pinterest LinkedIn Tumblr

deepika

ದೀಪಿಕಾ ಪಡುಕೋಣೆ..ಎಂದಾಕ್ಷಣ ಇವತ್ತು ಈ ಸುಂದರಿಯ ಜೊತೆಜೊತೆಗೆ ರಣಬೀರ್, ರಣವೀರ್ ಹೆಸರುಗಳು ಕೇಳಿ ಬರಬಹುದು. ಆದ್ರೆ 30ರ ಈ ಗ್ಲಾಮರಸ್ ನಟಿಯ ಲವ್ವಿ, ಡವ್ವಿ ಫ್ಲರ್ಟಿಂಗ್, ಡೇಟಿಂಗ್‌ ವಗೈರೆಗಳು ಈ ಮಗಧೀರರ ಜೊತೆ ತಳಕು ಹಾಕಿಲ್ಲ.

ಮೂವತ್ತು ವಯಸ್ಸಿಗೇ ದೀಪ್ಸ್ ಲೈಫ್‌ನಲ್ಲಿ ಒಂದರ್ಧ ಡಜನ್‌ ಬಾಯ್ಸ್ ಬಂದು ಹೋಗಿದ್ದಾರೆ. ಅವರು ಯಾರು…ಅವರಲ್ಲಿ ಮೊದಲಿಗನಾರು ಎಂಬುದನ್ನು ಇಲ್ಲಿ ನೋಡೋಣ.

ಮಾಡೆಲಿಂಗ್‌ನಿಂದ ಚಿತ್ರರಂಗದತ್ತ ಪಯಣ ಬೆಳೆಸಿದ ದೀಪಿಕಾ ಪಡುಕೋಣೆಯ ಮೊದಲ ಡೇಟಿಂಗ್ ನಡೆಸಿದ್ದು ಉಪೆನ್ ಪಟೇಲ್‌ ಜೊತೆ. ಟಾಪ್‌ ಮಾಡೆಲ್‌ಗಳಾಗಿದ್ದಾಗ ಇವರಿಬ್ಬರ ನಡುವೆ ಬಹಳ ಬಹಳ ನಡೆದಿತ್ತಂತೆ ಆವಾಗಿನ ಆ ಫೋಟೋಗಳೇ ಸಾಕ್ಷಿ. ದೀಪಿಕಾ- ಉಪೇನ್‌ ಒಮ್ಮೆ ಅಲ್ಲ ಎರಡೆರಡು ಬಾರಿ ಒಂದಾಗಿ, ಬೇರ್ಪಟ್ಟಿದ್ದರು ಎಂಬುದು ಬಾಲಿವುಡ್ ಟಾಕ್‌.

ಉಪೇನ್ ಬಳಿಕ ದೀಪ್ಸ್‌ ಹೆಸರು ನಿಹಾರ್ ಪಾಂಡ್ಯ, ಸಿದ್ಧಾರ್ಥ್ ಮಲ್ಯ, ರಣ್‌ಬೀರ್ ಕಪೂರ್ ಜೊತೆ ತಳುಕು ಹಾಕಿಕೊಳ್ಳುತ್ತೆ. ರಣಬೀರ್‌, ಸಿದ್ಧಾರ್ಥ್ ಜೊತೆಗಿನ ಓಡಾಟ, ಓಲಾಟಗಳು ಮಾಧ್ಯಮಗಳಿಗೆ ಬಹಳ ಆಹಾರವಾದವು. ಅದ್ರೆ ನಿಹಾರ್ ಬಾಂಧವ್ಯ ಅಷ್ಟಾಗಿ ಆಗಲಿಲ್ಲ ಎನ್ನಲಾಗಿದೆ

ಉಪೇನ್ ಪಟೇಲ್, ನಿಹಾರ್ ಪಾಂಡ್ಯ, ಸಿದ್ಧಾರ್ಥ್ ಮಲ್ಯ, ರಣ್‌ಬೀರ್ ಕಪೂರ್ ಹೀಗೆ ನಾಲ್ವರ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದ 30ರ ಶೋಡಷಿ ಜೀವನದಲ್ಲಿ ನಾಲ್ಕು ಫೆಲ್ಯೂರ್‌ಗಳಿವೆ. ಈಗ ರಣವೀರ್ ಜೊತೆ ದೀಪ್ಸ್‌ ಪ್ರೇಮಾಯಣ ನಡೆಸಿದ್ದಾರೆ ಎಂಬ ಟಾಕ್ ಇದೆ. ಈ ಪ್ರೇಮಾಯಣ ಸಕ್ಸಸ್‌ ಆಗಿ ಮದುವೆ ಗಿದುವೆಯಲ್ಲಿ ಅಂತ್ಯವಾಗುತ್ತೋ…ಇನ್ನೇನೋ ಗೊತ್ತಿಲ್ಲ. ಇದಾದ್ರೂ ಸಕ್ಸಸ್ ಅಗಲಿ ಅಂತಾ ಹಾರೈಸೋಣವಾ?

Write A Comment