ರಾಷ್ಟ್ರೀಯ

ಸಮ-ಬೆಸ ಪ್ರಾಯೋಗಿಕ ಜಾರಿ 1 ವಾರಕ್ಕೆ ಸೀಮಿತಗೊಳಿಸಿ: ದೆಹಲಿ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

Pinterest LinkedIn Tumblr

sama-besaನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ ದೆಹಲಿ ಸರ್ಕಾರ 15 ದಿನಗಳ ಕಾಲ ಪ್ರಾಯೋಗಿಕವಾಗಿ ಜಾರಿಗೆ ತಂದಿರುವ ಸಮ-ಬೆಸ ಸಂಖ್ಯೆಯ ವಾಹನ ಸಂಚಾರ ನಿಯಮದ ಅವಧಿಯನ್ನು ಒಂದು ವಾರಕ್ಕೆ ಸೀಮಿತಗೊಳಿಸುವಂತೆ ದೆಹಲಿ ಹೈಕೋರ್ಟ್ ಬುಧವಾರ ಆಪ್ ಸರ್ಕಾರಕ್ಕೆ ಸೂಚಿಸಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಅರವಿಂದ್ ಕೇಜ್ರಿವಾಲ್ ಸರ್ಕಾರದ ನೂತನ ನಿಯಮದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ನಿಯಮವನ್ನು ಪ್ರಾಯೋಗಿಕವಾಗಿ ಎರಡು ವಾರಗಳ ಕಾಲ ಜಾರಿ ಮಾಡಿದ್ದು ಏಕೆ? ಇದನ್ನು ಒಂದು ವಾರಕ್ಕೆ ಸಮೀತಗೊಳಿಸಬಹುದಲ್ಲವೇ? ಎಂದು ಪ್ರಶ್ನಿಸಿದೆ. ಅಲ್ಲದೆ ಸಾರ್ವಜನಿಕ ಸಾರಿಗೆ ಸೌಲಭ್ಯ ಕಡಿಮೆ ಇದ್ದುದರಿಂದ ಜನರು ಕಷ್ಟಪಡುವಂತಾಗಿದೆ ಎಂದು ಕೋರ್ಟ್ ಆಕ್ರೋಶ ವ್ಯಕ್ತಪ ಡಿಸಿದೆ.

ಸಮ-ಬೆಸ ಸಂಚಾರ ನಿಯಮದಿಂದಾದ ಅನುಕೂಲವೇನು? ಒಂದು ವಾರದ ಮಾಲಿನ್ಯ ಪ್ರಮಾಣವನ್ನು ಪರಿಶೀಲಿಸಿ ಶುಕ್ರವಾರದೊಳಗೆ ವರದಿ ನೀಡುವಂತೆ ದೆಹಲಿ ಸರ್ಕಾರಕ್ಕೆ ಕೋರ್ಟ್ ಸೂಚಿಸಿದೆ.

ವಾಯು ಮಾಲಿನ್ಯ ನಿಯಂತ್ರಿಸುವ ನಿಟ್ಟಿನಲ್ಲಿ ದೆಹಲಿ ಸರ್ಕಾರ ಜನವರಿ 1ರಿಂದ ಸಮ-ಬೆಸ ಸಂಖ್ಯೆ ಸಂಚಾರ ನಿಯಮವನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದು, ಜನರಿಂದ ಇದಕ್ಕೆ ಅದ್ಭುತ ಪ್ರತಿಕ್ರಿಯೆ ಸಹ ದೊರೆತಿತ್ತು.

Write A Comment