ರಾಷ್ಟ್ರೀಯ

ಪಠಾಣ್‌ಕೋಟ್ ದಾಳಿಗೆ ಮುನ್ನ ಉಗ್ರರು ಪಾಕ್ ವಾಯುನೆಲೆಯಲ್ಲಿ ತಾಲೀಮು ನಡೆಸಿದ್ದರು!

Pinterest LinkedIn Tumblr

pathankot-air-base

ನವದೆಹಲಿ: ಪಂಜಾಬ್‌ನ ಪಠಾಣ್‌ಕೋಟ್ ವಾಯುನೆಲೆ ದಾಳಿಯ ಹಿಂದೆ ಯಾವ ಉಗ್ರ ಸಂಘಟನೆಯ ಕೈವಾಡವಿದೆ ಎಂಬುದು ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ. ಆದರೆ ಪಾಕ್ ಉಗ್ರ ಸಂಘಟನೆಗಳ ಕೈವಾಡವಿದೆ ಎಂಬ ಆರೋಪ ಮತ್ತಷ್ಟು ಗಟ್ಟಿಯಾಗುತ್ತಿದೆ.

ಈ ಆರೋಪಗಳಿಗೆ ಪುಷ್ಠಿ ನೀಡುವಂತೆ ಇತ್ತ ಪಠಾಣ್‌ಕೋಟ್ ವಾಯುನೆಲೆ ಮೇಲೆ ದಾಳಿ ಮಾಡುವ ಮುನ್ನ ಉಗ್ರರು ಪಾಕಿಸ್ತಾನದಲ್ಲಿ ತಾಲೀಮು ನಡೆಸಿದ್ದರು ಎಂಬ ವರದಿ ಲಭಿಸಿದೆ. ಅಂದರೆ, ಪಾಕಿಸ್ತಾನದ ಮಿಲಿಟರಿ ಮತ್ತು ಐಎಸ್‌ಐ ಸಹಾಯವಿಲ್ಲದೆ ದಾಳಿಕೋರರರು ಪಾಕ್ ವಾಯುನೆಲೆಯಲ್ಲಿ ತಾಲೀಮು ನಡೆಸಲು ಹೇಗೆ ಸಾಧ್ಯ? ಎಂಬುದು ಸದ್ಯದ ಪ್ರಶ್ನೆ.

ಉಗ್ರರು ಬ್ಯಾರೆಲ್ ಗನ್‌ಗಳನ್ನು (ಎಕೆ 47ಗಿಂತ ಪರಿಷ್ಕೃತ ರೈಫಲ್) ಗಳನ್ನು ದಾಳಿಗಾಗಿ ಬಳಸಿದ್ದರು. ಮಾತ್ರವಲ್ಲದೆ ಉಗ್ರರಿಂದ ಸಿಕ್ಕಿದ ಶಸ್ತ್ರಾಸ್ತ್ರಗಳು ಪಾಕ್ ನಿರ್ಮಿತ ಎಂದು ರಕ್ಷಣಾ ಸಚಿವ ಪರಿಕ್ಕರ್ ಹೇಳಿದ್ದಾರೆ.

ಏತನ್ಮಧ್ಯೆ, ಪ್ರಧಾನಿ ಮೋದಿ ಅವರಿಗೆ ಮಂಗಳವಾರ ಫೋನ್ ಕರೆ ಮಾಡಿದ್ದ ಪಾಕ್ ಪ್ರಧಾನಿ ನವಾಜ್ ಶರೀಫ್ ತನಿಖೆಗೆ ನಾವು ಸಹಕರಿಸುತ್ತೇವೆ, ಉಗ್ರ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ವಾಗ್ದಾನ ಮಾಡಿದ್ದಾರೆ.

Write A Comment