ಮನೋರಂಜನೆ

ಪುನೀತ್‌ ಮೇಲಿನ ಅಭಿಮಾನ.. ‘ಚಕ್ರವ್ಯೂಹ’ದಲ್ಲಿ ಸಿಲುಕ್ತಿದೆ ತಾರೆಗಳ ದಂಡು!

Pinterest LinkedIn Tumblr

4kajal

ಪವರ್ ಸ್ಟಾರ್ ಪುನೀತ್ ಅಭಿನಯದ 25ನೇ ಚಿತ್ರ ‘ಚಕ್ರವ್ಯೂಹ’ದಲ್ಲಿ ನಟಿ ಕಾಜಲ್‌ ಅಗರವಾಲ್‌ ಒಂದು ಹಾಡು ಹಾಡ್ತಿದ್ದಾರೆಂದು ಹೇಳಿದ್ದೆವು. ಈಗಾಗಲೇ ಕಾಜಲ್‌ ಆರಾಮಾಗಿ ಬಂದು ಹಾಡಿ ಹೋಗಿದ್ದಾರೆ.

ಚಕ್ರವ್ಯೂಹಕ್ಕೆ ಕೆಲ ದಿನಗಳ ಹಿಂದೆ ಜ್ಯೂನಿಯರ್ ಎನ್‌ಟಿಆರ್‌ ಸಾಂಗ್ ಹಾಡಿದ್ದಾರೆ. ಈಗ ಕಾಜೋಲ್ ಹಾಡುವುದರೊಂದಿಗೆ ಚಿತ್ರಕ್ಕೆ ಮೊತ್ತೊಂದು ಗರಿ ಬಂದಂತಾಗಿದೆ.

ಸಂಗೀತ ನಿರ್ದೇಶಕ ಎಸ್ ಎಸ್ ತಮನ್‌ಗೆ ಕಾಲಿವುಡ್, ಟಾಲಿವುಡ್ ಸ್ಟಾರ್‌ಗಳೆಲ್ಲಾ ಚೆನ್ನಾಗಿ ಪರಿಚಿತರು. ಅವರು ಸಂಗೀತ ನೀಡಿದ ಚಿತ್ರಕ್ಕೆ ದನಿಗೂಡಿಸೋಕೆ ಇವರೆಲ್ಲಾ ಖಂಡಿತಾ ಮುಂದೆ ಬರ್ತಾರೆ. ಈ ಸಲ ಕಾಜಲ್ ಕೂಡ ಆರಾಮಾಗಿ ಬಂದು ಹಾಡಿ ಹೋಗಿದ್ದಾರೆ. ಅಲ್ಲಿಗೆ ಚಕ್ರವ್ಯೂಹ ದಿನದಿಂದ ದಿನಕ್ಕೆ ಸೂಪರ್ ಸ್ಟಾರ್‌ಗಳ ಸಂಗಮದ ಸ್ಥಳ ಆಗುತ್ತಿದೆ.

Write A Comment