ಕರ್ನಾಟಕ

ನೈಸ್ ರಸ್ತೆಯಲ್ಲಿ ಸುಲಿಗೆ ಮಾಡುತ್ತಿದ್ದ ನಕಲಿ ಪೊಲೀಸರ ಸೆರೆ

Pinterest LinkedIn Tumblr

niceಬೆಂಗಳೂರು, ಡಿ.7- ಪೊಲೀಸರ ಸೋಗಿನಲ್ಲಿ ಸುಲಿಗೆ ಮಾಡುತ್ತಿದ್ದ   ರಾಮನಗರ ಜಿಲ್ಲೆ ಹಾರೋಹಳ್ಳಿ ಹೋಬಳಿಯ ಇಬ್ಬರು ನಕಲಿ ಪೊಲೀಸರನ್ನು  ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ.

ಹಾರೋಹಳ್ಳಿ ಹೋಬಳಿಯ ಗಿರಿಯನಹಳ್ಳಿ ನಿವಾಸಿ ರಘು(29) ಮತ್ತು ಲಕ್ಷ್ಮೀಪುರ ಗ್ರಾಮದ ಗೋವಿಂದ(43) ಬಂಧಿತ ನಕಲಿ ಪೊಲೀಸರಾಗಿದ್ದು, ಇವರಿಂದ 52 ಸಾವಿರ ರೂ. ನಗದು, ಕೃತ್ಯಕ್ಕೆ ಬಳಸಿದ್ದ ಸ್ವಿಪ್ಟ್ ಕಾರು ಹಾಗೂ ಖಾಕಿ ಸಮವಸ್ತ್ರ ವಶಪಡಿಸಿಕೊಂಡಿದ್ದಾರೆ. ಡಿ.19ರಂದು ಸಂಜೆ ತಲಘಟ್ಟಪುರ ವ್ಯಾಪ್ತಿಯ ನೈಸ್ ರಸ್ತೆಯ ಬನ್ನೇರುಘಟ್ಟ ಟೋಲ್ ಹತ್ತಿರ ವರುಣ್ ಉಮೇಶ್ ಎಂಬುವರು ತನ್ನ ಗೆಳತಿಯೊಂದಿಗೆ ಕಾರಿನಲ್ಲಿ ಹೋಗುತ್ತಿದ್ದಾಗ ಅವರನ್ನು ಅಡ್ಡಗಟ್ಟಿ ಅವರಿಗೆ ಪೊಲೀಸರೆಂದು ಬೆದರಿಸಿ ಇವರಿಬ್ಬರನ್ನು ತಲಘಟ್ಟಪುರ ಬಳಿ ಕರೆದೊಯ್ದು ಕೆನರಾ ಬ್ಯಾಂಕ್ ಎಟಿಎಂನಲ್ಲಿ  60 ಸಾವಿರ ರೂ. ಹಣ ಡ್ರಾ ಮಾಡಿಸಿಕೊಂಡು ಪರಾರಿಯಾಗಿದ್ದರು.

ಈ ಬಗ್ಗೆ ತಲಘಟ್ಟಪುರ  ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿ ದ್ದಾರೆ. ಪ್ರಕರಣದ ಮೊದಲ ಆರೋಪಿ ರಘು ಈ ಹಿಂದೆ ಸ್ನೇಹಿತರೊಂದಿಗೆ ಸೇರಿಕೊಂಡು ಇದೇ ರೀತಿ ರಾಮನಗರ ಗ್ರಾಮಾಂತರ ಠಾಣೆ ವ್ಯಾಪ್ತಿ ಮತ್ತು ರಾಜರಾಜೇಶ್ವರಿನಗರ ಠಾಣೆ ವ್ಯಾಪ್ತಿಯಲ್ಲಿ ಕಾರಿನಲ್ಲಿ ಓಡಾಡುವ ಹುಡುಗ-ಹುಡುಗಿಯರನ್ನು ಗುರುತಿಸಿ ಪೊಲೀಸರೆಂದು ಬೆದರಿಸಿ ಅವರಿಂದ ಹಣ ಸುಲಿಗೆ ಮಾಡುತ್ತಿದ್ದ ಬಗ್ಗೆ ಪೊಲೀಸರ ಕೈಗೆ ಸಿಕ್ಕಿಬಿದಿದ್ದ. ಈತನ ವಿಚಾರಣೆ ವೇಳೆ ಸಹಚರ ಗೋವಿಂದನ ಬಗ್ಗೆ ಮಾಹಿತಿ ಸಂಗ್ರಹಿಸಿ ಆತನನ್ನೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Write A Comment