ಕನ್ನಡ ವಾರ್ತೆಗಳು

ಮಂಗಳೂರಿನಲ್ಲಿ “ರಾಜಸ್ಥಾನ ಗ್ರಾಮೀಣ ಮೇಳ” ಆರಂಭ – ರಾಜಸ್ಥಾನ ಆರ್ಟ್ ಮತ್ತು ಕ್ರಾಫ್ಟ್ ಕರಕುಶಲ ವಸ್ತುಗಳ/ಕೈಮಗ್ಗ ಸೀರೆಗಳ ಬೃಹತ್ ಪ್ರದರ್ಶನ

Pinterest LinkedIn Tumblr

Rajastana_mela_1

ಮಂಗಳೂರು : ರಾಜಸ್ಥಾನ ಆರ್ಟ್ ಮತ್ತು ಕ್ರಾಫ್ಟ್ ರವರ ಸಂಯೋಜನೆಯಲ್ಲಿ ರಾಜಸ್ಥಾನ ಆರ್ಟ್ ಹಾಗೂ ಕ್ರಾಫ್ಟ್ ವಿವಿಧ ಕರಕುಶಲ ವಸ್ತುಗಳ ಹಾಗೂ ಕೈಮಗ್ಗ ಸೀರೆಗಳ ಹಾಗೂ ಅಭರಣಗಳು ಮತ್ತು ಕಲಾಕೃತಿಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳ “ರಾಜಸ್ಥಾನ್ ಗ್ರಾಮೀಣ ಮೇಳ” ನಗರದ ಬಂಟ್ಸ್ ಹಾಸ್ಟೇಲ್ ರಸ್ತೆಯ ಹೋಟೇಲ್ ವುಡ್‌ಲ್ಯಾಂಡ್ಸ್‌ನಲ್ಲಿ ಶುಕ್ರವಾರದಿಂದ ಆರಂಭಗೊಂಡಿದ್ದು, ದ.ಕ.ಜಿಲ್ಲಾ ವಾರ್ತಾಧಿಕಾರಿಗಳಾದ ಶ್ರೀ ಖಾದರ್ ಷಾ ಅವರು ಉದ್ಘಾಟಿಸಿದರು.

ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ವಿವಿಧ ರಾಜ್ಯಗಳ ಕುಶಲಕರ್ಮಿಗಳು ತಾವೇ ಸ್ವತ: ನಿರ್ಮಿಸಿದ ರಾಜಸ್ಥಾನ ಆರ್ಟ್ ಹಾಗೂ ಕ್ರಾಫ್ಟ್ ವಿವಿಧ ಕರಕುಶಲ ವಸ್ತುಗಳ ಹಾಗೂ ಕೈಮಗ್ಗ ಸೀರೆಗಳ ಹಾಗೂ ಅಭರಣಗಳು ಮತ್ತು ಕಲಾಕೃತಿಗಳ ಬೃಹತ್ ಸಂಗ್ರಹವೇ ಇಲ್ಲಿದ್ದು, ಜಿಲ್ಲೆಯ ಜನತೆ ಈ ವಿಶಿಷ್ಟ ಉತ್ಪಾನ್ನಗಳನ್ನು ಖರೀದಿಸುವ ಮೂಲಕ ಈ ಗ್ರಾಮೀಣ ಮೇಳವನ್ನು ಪ್ರೋತ್ಸಾಹಿಸ ಬೇಕು ಎಂದು ಹೇಳಿದರು.

Rajastana_mela_2 Rajastana_mela_3 Rajastana_mela_4 Rajastana_mela_5 Rajastana_mela_6 Rajastana_mela_7 Rajastana_mela_8 Rajastana_mela_9 Rajastana_mela_10 Rajastana_mela_11 Rajastana_mela_12 Rajastana_mela_13 Rajastana_mela_14 Rajastana_mela_15 Rajastana_mela_16 Rajastana_mela_17 Rajastana_mela_18 Rajastana_mela_19 Rajastana_mela_20

“ರಾಜಸ್ಥಾನ್ ಗ್ರಾಮೀಣ ಮೇಳ”ದ ಸಂಘಟಕ ದಿನೇಶ್ ಶರ್ಮಾ ಅವರು ಮಾತನಾಡಿ, ತಾ| 08 / 01 / 2016 ರಿಂದ 25 / 01/ 2016 ರವರೆಗೆ ಈ ರಾಜಸ್ಥಾನ್ ಗ್ರಾಮೀಣ ಮೇಳವನ್ನು ಹಮ್ಮಿಕೊಳ್ಳಲಾಗಿದೆ.ಈ ಗ್ರಾಮೀಣ ಮೇಳದಲ್ಲಿ ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳ ಕೈಮಗ್ಗದ ಸೀರೆ ಹಾಗೂ ಸಿಲ್ಕ್ ಸೀರೆಗಳು ಮತ್ತು ಕರಕುಶಲ ವಸ್ತುಗಳ ಬೃಹತ್ ಸಂಗ್ರಹವಿದ್ದು, ಮಾರಾಟ ಮತ್ತು ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.

ರಾಜಸ್ಥಾನ ಸಿಲ್ಕ್ ಸಾರಿ, ಮೈಸೂರ್ ಸಿಲ್ಕ್ ಸಾರಿ, ಓರಿಸ್ಸಾ ಸಿಲ್ಕ್ ಸೀರೆಗಳು, ಕಾಂತ ವರ್ಕ್ ಸಿಲ್ಕ್ ಸೀರೆಗಳು, ಕೋಸಿಯಾ ಕೈ ಮಗ್ಗದ ಸೀರೆಗಳು, ಬಾಗಲ್ಪುರ್ ಸಿಲ್ಕ್ ಸೀರೆಗಳು, ಬನರಸ್ ಸಿಲ್ಕ್ ಸಾರಿ, ವೆಜ್ ಡೈ ಬ್ಲಾಕ್ ಪ್ರಿಂಟೆಡ್ ಸೀರೆಗಳು, ಮಧುರೈ ಸುಗುಡಿ ಕಾಟನ್ ಸೀರೆಗಳು, ಸಾಂಬ್ಲಪುರಿ ಇಕ್ತಾ ಸೀರೆಗಳು, ಕೈಮಗ್ಗದ ಕಾಟನ್ ಸೀರೆಗಳು, ಚಾಂದಾರ್ ಕಾಟನ್ ಸೀರೆಗಳು, ಪೌಂಚಪಲ್ಲಿ ಕೈಮಗ್ಗದ ಸೀರೆಗಳು, ಫೋಲ್ಕರಿ ವಿನ್ಯಾಸದ ಪಾಟಿಯಾಲ, ಫೋಲ್ಕರಿ ಬೆಡ್ಶೀಟ್ಗಳು, ಹಾಗೂ ಸೋಫಾ ಸೆಟ್ ಕವರ್, ಸಿಲ್ಕ್ ಕುಶನ್ ಕವರ್, ರಾಜಸ್ಥಾನ್ ಬೆಡ್ಶೀಟ್ಗಳು ಹಾಗೂ ಇನ್ನಿತರ ಕೈಮಗ್ಗದ ಸೀರೆಗಳು ಇಲ್ಲಿ ಲಭ್ಯವಿರುವುದು.

Rajastana_mela_21 Rajastana_mela_22 Rajastana_mela_23 Rajastana_mela_24 Rajastana_mela_25 Rajastana_mela_26 Rajastana_mela_27 Rajastana_mela_28 Rajastana_mela_29 Rajastana_mela_30 Rajastana_mela_31 Rajastana_mela_32 Rajastana_mela_33 Rajastana_mela_34 Rajastana_mela_35 Rajastana_mela_36 Rajastana_mela_37 Rajastana_mela_38 Rajastana_mela_39

ಮಾತ್ರವಲ್ಲದೇ ಜೋಧ್ಪುರ್ ಕರಕುಶಲ ಮರದ ಪಿಠೋಪರಣಗಳು, ಸಾರಂಗ್ಪುರ್ ಮರದ ಪಿಠೋಪರಣಗಳು, ಹೈದಾರ್ಬಾದ್ ಕಪ್ಪು ಮೇಟಲ್ನ ವಿಗ್ರಹಗಳು, ಹಿತ್ತಳೆಯ ಕಲಾಕೃತಿಗಳು, ವಿಶೇಷ ಶೈಲಿಯ ಜೈಪುರ್ ಆಭರಣಗಳು, ವಿಶೇಷ ವಿನ್ಯಾಸದ ವೈವಿಧ್ಯಮಯ ಮಣ್ಣಿನ ವಿಗ್ರಹಗಳು, ನೀಲಿ ಬಣ್ಣದ ಕ್ರಾಕಾರಿ ಐಟಮ್‌ಗಳ ಬೃಹತ್ ಸಂಗ್ರಹ ಇಲ್ಲಿವೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ “ರಾಜಸ್ಥಾನ್ ಗ್ರಾಮೀಣ ಮೇಳ”ದ ಸದಸ್ಯರಾದ ವಿ.ಬಿ ಶುಕ್ಲಾ, ಮೊಹಮ್ಮದ್ ಸಲ್ಮಾನ್, ದಿಲ್ಕುಶ್ ಕುಮಾರ್, ಅಲಿಂ ಅನ್ಸಾರಿ, ಬರೂನ್ ಕುಮಾರ್ ಝಾ ಮುಂತಾದವರು ಉಪಸ್ಥಿತರಿದ್ದರು.

Write A Comment