ಕನ್ನಡ ವಾರ್ತೆಗಳು

ಹಿರಿಯ ನಾಗರಿಕರಿಗೆ ಉಚಿತ ದಂತಭಾಗ್ಯ ಯೋಜನೆ.

Pinterest LinkedIn Tumblr

wenlock_free_dental_1

ಮಂಗಳೂರು,ಜ.08:  ದ.ಕ. ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಯೆನೆಪೊಯ ದಂತ ಕಾಲೇಜು ದೇರಳಕಟ್ಟೆ ಮತ್ತು ಜಿಲ್ಲಾಡಳಿತ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ವೆನ್ಲಾಕ್ ಆಸ್ಪತ್ರೆಯ ದಂತ ವಿಭಾಗದಲ್ಲಿ ನಡೆದ ಉಚಿತ ದಂತ ತಪಾಸಣಾ ಶಿಬಿರದ ಉದ್ಘಾಟನೆಯನ್ನು ಹಿರಿಯ ನಾಗರಿಕರಾದ ಲೂಸಿ ಬೆಳ್ತಂಗಡಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ಈ ದಂತಭಾಗ್ಯ ಯೋಜನೆಯನ್ವಯ 60 ವರ್ಷದ ಮೇಲ್ಪಟ್ಟ ಬಿಪಿಎಲ್ ವರ್ಗಕ್ಕೆ ಸೇರಿದ ಹಿರಿಯ ನಾಗರಿಕರಿಗೆ ಉಚಿತ ದಂತಪಂಕ್ತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

wenlock_free_dental_2 wenlock_free_dental_3 wenlock_free_dental_4 wenlock_free_dental_5

ಕರ್ನಾಟಕ ರಾಜ್ಯದ ಬಾಯಿ ಆರೋಗ್ಯ ನೀತಿ ಸಮಿತಿಯ ಅಧ್ಯಕ್ಷ ಡಾ.ಗಣೇಶ್ ಶೆಣೈ ಪಂಚಮಾಲ್, ನೋಡಲ್ ಅಧಿಕಾರಿ ಡಾ.ಲವೀನಾ, ಆರ್ ಎಂಒ ಡಾ. ಜೂಲಿಯಾನ್ ಸಲ್ಡಾನ ಕಾರ್ಯಕ್ರಮದ ಅಧಿಕಾರಿ ಡಾ. ನವೀನ್ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ರಾವ್ , ವೆನ್ ಲಾಕ್ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕಿ ಡಾ ಎಆಜೇಶ್ವರಿ ದೇವಿ ಮೊದಲಾದವರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

Write A Comment