ಮನೋರಂಜನೆ

‘ಇಂಕ್ರೆಡಿಬಲ್ ಇಂಡಿಯಾ’ ದಿಂದ ಅಮೀರ್ ಔಟ್, ಅಮಿತಾಬ್ ಇನ್

Pinterest LinkedIn Tumblr

amiನವದೆಹಲಿ, ಜ.07 : ‘ಇಂಕ್ರೆಡಿಬಲ್ ಇಂಡಿಯಾ’ ಅಭಿಯಾನದ ಮುಂದಿನ ರಾಯಭಾರಿ ನೇಮಕ ಸಂಬಂಧ ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ನಮ್ಮ ಮೊದಲ ಆಯ್ಕೆ ಎಂದು ಪ್ರವಾಸೋದ್ಯಮ ಸಚಿವಾಲಯದ ಮೂಲಗಳು ತಿಳಿಸಿವೆ.

ಈ ಹಿನ್ನೆಲೆಯಲ್ಲಿ ‘ಇಂಕ್ರೆಡಿಬಲ್ ಇಂಡಿಯಾ’ ಅಭಿಯಾನದ ರಾಯಭಾರಿಯಾಗಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಆಯ್ಕೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಉಳಿದಂತೆ ಪ್ರವಾಸೋದ್ಯಮ ಸಚಿವಾಲಯ ಅಕ್ಷಯ್ ಕುಮಾರ್, ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕಾ ಚೋಪ್ರಾ ಅವರ ಹೆಸರುಗಳನ್ನೂ ಅಂತಿಮ ಪಟ್ಟಿಗೆ ಸೇರಿಸಿದೆ.

ಪ್ರಸ್ತುತ ಅಮಿತಾಬ್ ಬಚ್ಚನ್ ಗುಜರಾತ್ ಪ್ರವಾಸೋದ್ಯಮ ಇಲಾಖೆಯ ರಾಯಭಾರಿಯಾಗಿದ್ದು, ಇವರು ರಾಯಭಾರಿಯಾದ ನಂತರ ಗುಜರಾತ್​ಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಅಮಿತಾಬ್ ಯಾವುದೇ ವಿವಾದಗಳಿಗೆ ಗುರಿಯಾಗಿಲ್ಲ. ಹಾಗಾಗಿ ಇವರ ಆಯ್ಕೆಗೆ ಯಾವುದೇ ಪ್ರತಿರೋಧ ವ್ಯಕ್ತವಾಗುವುದಿಲ್ಲ ಎಂದು ಪ್ರವಾಸೋದ್ಯಮ ಸಚಿವಾಲಯದ ಮೂಲಗಳು ತಿಳಿಸಿವೆ

Write A Comment