ಕರ್ನಾಟಕ

ಬೆಂಗಳೂರಲ್ಲಿ 1.50 ಲಕ್ಷ ಕೋಟಿ ರೂ. ಮೌಲ್ಯದ ಕೆರೆ ನುಂಗಿದ ಪ್ರತಿಷ್ಠಿತ ಬಿಲ್ಡರ್‌ಗಳು

Pinterest LinkedIn Tumblr

banga

ಬೆಂಗಳೂರು, ಜ.8- ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಪ್ರತಿಷ್ಠಿತ ಬಿಲ್ಡರ್ಸ್ ಸಂಸ್ಥೆಗಳು ಸೇರಿದಂತೆ 11,500 ಮಂದಿ 1.50 ಲಕ್ಷ ಕೋಟಿ ರೂ. ಮೌಲ್ಯದ ಕೆರೆ ಅಂಗಳವನ್ನು ಒತ್ತುವರಿ ಮಾಡಿದ್ದಾರೆ ಎಂದು ಕೆರೆಗಳ ಒತ್ತುವರಿ ಮತ್ತು ಸಂರಕ್ಷಣೆ  ಸದನ ಸಮಿತಿ ಅಧ್ಯಕ್ಷ ಕೆ.ಬಿ.ಕೋಳಿವಾಡ ಇಂದಿಲ್ಲಿ ತಿಳಿಸಿದರು. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎರಡೂ ಜಿಲ್ಲೆಗಳಿಂದ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳಿಂದ 10,472 ಎಕರೆ 34 ಗುಂಟೆ ಒತ್ತುವರಿ ಮಾಡಲಾಗಿದೆ. 200 ಮಂದಿ ಸರ್ವೇಯರ್‌ಗಳು ನಿರಂತರವಾಗಿ ಸರ್ವೆ ಮಾಡಿ ಕೆರೆ ಒತ್ತುವರಿಯನ್ನು ಪತ್ತೆ ಹಚ್ಚಿದ್ದಾರೆ ಎಂದರು.

ಕೆರೆ ಒತ್ತುವರಿ ಮಾಡಿರುವ ಗೋಮುಖ ಬಿಲ್ಡರ‌ಸ್ ಡಗಳಾದ ಆದರ್ಶ ಡೆವಲಪರ್ಸ್ಂ, ಪ್ರೆಸ್ಟೀಜ್ ಗ್ರೂಪ್ಸ್, ಶೋಭಾ ಡೆವಲಪರ್ಸ್ತ, ಬಿಎಚ್ ಮ್ಯಾಕ್ಸ್, ಬ್ರಿಗೇಡ್ ಗ್ರೂಪ್, ಬಾಗ್‌ಮನೆ ಟೆಕ್‌ಪಾರ್ಕ್, ನಿಸರ್ಗ ಧಾಮ ಎಸ್ಟೇಟ್, ನಂದಿನಿ ಅಪಾರ್ಟ್‌ಮೆಂಟ್, ವಂದನಾ ಸಾಗರ ಅಪಾರ್ಟ್‌ಮೆಂಟ್, ಒಬೆರಾಯ್ ಗ್ರೂಪ್, ಆರ್‌ಎನ್‌ಎಸ್ ಮೋಟಾರ್ಸ್ವ , ಗ್ರಾಫ್ ಆಫರ್ಸ್ದ ರೆಸಾರ್ಟ್ಸ್, ಅದ್ವೈತ ಗ್ರೂಪ್, ವಾಲ್‌ಮಾರ್ಕ್ ಗ್ರೂಪ್, ಗ್ರೀನ್‌ವುಡ್ ಗ್ರೂಪ್, ಪುಷ್ಟಿ ಡೆವಲಪರ್ಸ್ರ , ಆರ್‌ಕೆ ಡೆವಲಪರ್ಸ್ೋ, ಬಿಆರ್ ವ್ಯಾಲಿಫರ್, ಶ್ರೀರಾಮ ಅಪಾರ್ಟ್‌ಮೆಂಟ್, ಎನ್‌ಡಿ ಡೆವಲಪರ್ಸ್ು, ಐಶ್ವರ್ಯ ಲೇಕ್‌ವ್ಯೂ, ಪ್ಯಾಂಟಸಿ, ಓಯಾಸೀಸ್ ಅಪಾರ್ಟ್‌ಮೆಂಟ್ಸ್, ಮಹಾಲಕ್ಷ್ಮಿ ಅಪಾರ್ಟ್‌ಮೆಂಟ್ಸ್‌ಗಳು ಸೇರಿವೆ ಎಂದರು.

ಒತ್ತುವರಿದಾರರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಉತ್ತರ ನೀಡಲು ಜನವರಿ 30ರ ವರೆಗೂ ಕಾಲಾವಕಾಶ ನೀಡಲಾಗಿದೆ ಎಂದರು. ಬೆಂಗಳೂರು ನಗರ ಜಿಲ್ಲೆಯಲ್ಲಿ 835 ಕೆರೆಗಳಿದ್ದು, 27,604 ಎಕರೆ 16 ಗುಂಟೆ ಪ್ರದೇಶವಿದೆ. ಈ ಪೈಕಿ 4277 ಎಕರೆ 25 ಗುಂಟೆ ಒತ್ತುವರಿಯಾಗಿದೆ. ಇದರಲ್ಲಿ 2254 ಎಕರೆ 24 ಗುಂಟೆ ಸರ್ಕಾರಿ ಸಂಸ್ಥೆಗಳಿಂದ ಒತ್ತುವರಿಯಾಗಿದೆ. ಖಾಸಗಿಯವರಿಂದ 2023 ಎಕರೆ 4 ಗುಂಟೆ ಒತ್ತುವರಿಯಾಗಿದೆ. ಒತ್ತುವರಿಯಾಗದೆ 85 ಕೆರೆಗಳಿವೆ ಎಂದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 710 ಕೆರೆಗಳಿದ್ದು, 29,972 ಎಕರೆ ಒಂದು ಗುಂಟೆ ವಿಸ್ತೀರ್ಣವಿದ್ದು, 6195 ಎಕರೆ 9 ಗುಂಟೆ ಒತ್ತುವರಿಯಾಗಿದೆ.

Write A Comment