ಕುಂದಾಪುರ: ಹಿಂದೂ ಜಾಗರಣ ವೇದಿಕೆ ಸಿದ್ದಾಪುರ ವಲಯ ಹೊಸಂಗಡಿ ಘಟಕ ವತಿಯಿಂದ ಘಟಕ ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಲೋಕ ಕಲ್ಯಾಣರ್ಥವಾಗಿ ಸಂಕಲ್ಪದೊಂದಿಗೆ ಸಾರ್ವಜನಿಕ ಶ್ರೀಸತ್ಯನಾರಾಯಣ ಪೂಜೆ , ಮಹಾ ಅನ್ನ ಸಂತರ್ಪಣೆ ಕಾರ್ಯಕ್ರಮ ಹೊಸಂಗಡಿ ಸಾರ್ವಜನಿಕ ಗಣೇಶೋತ್ಸವ ರಂಗ ಮಂದಿರದಲ್ಲಿ ಜರುಗಿತು .
ಧಾರ್ಮಿಕ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಹೊಸಂಗಡಿ ಕ್ರಷ್ಣ ಜುವೆಲ್ಲರಿ ಮಾಲಿಕರಾದ ಮಂಜುನಾಥ್ ಗೊಲ್ಲ ಕಂಠಗದ್ದೆ ವಹಿಸಿದ್ದರು .
ಶ್ರೀಸಿದ್ದಿವಿನಾಯಕ ಸಾಂಸ್ಕ್ರತಿಕ ಕಲಾ ಕೇಂದ್ರದ ಮುಖ್ಯಸ್ಥ ಮುಂಗೆಶ್ ಶಣೈ ಧಾರ್ಮಿಕ ಪ್ರವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಹಿ.ಜಾ.ವೕ. ಉಡುಪಿ ಜಿಲ್ಲೆಯ ಅರವಿಂದ ಕೋಟೇಶ್ವರ ,ಹಿ. ಜಾ .ವೇ. ಜಿಲ್ಲಾ ಕಾರ್ಯಕಾರಿಣಿ ಹೆನ್ನಾಬೈಲು ಭಾಸ್ಕರ್ ಶೆಟ್ಟಿ, ಸಿದ್ದಾಪುರ ವಲಯ ಸಂಚಾಲಕ ಹರ್ಷ ಜನ್ಸಾಲೆ , ಹೊಸಂಗಡಿ ಘಟಕದ ಅಧ್ಯಕ್ಷ ರಾಘವೇಂದ್ರ ಬಾಳೆಜೆಡ್ದು ಮತ್ತಿತರರು ಉಪಸ್ತಿತರಿದ್ದರು .
ಭುಜಂಗ ಶೆಟ್ಟಿ ಹೆನ್ನಾಬೈಲು ಕಾರ್ಯಕ್ರಮ ನಿರೂಪಿಸಿದರು , ಶಿವಕುಮಾರ್ ಸ್ವಾಗತಿಸಿ, ನಾಗರಾಜ್ ಬಾಳೆಜೆಡ್ದು ವರದಿ ವಾಚಿಸಿ, ಭಾಸ್ಕರ್ ಶೆಟ್ಟಿ ವಂದಿಸಿದರು .