ಅಂತರಾಷ್ಟ್ರೀಯ

ನೆರೆಮನೆಗಳ ಬೆಡ್‌ ರೂಂಗೆ ಇಣುಕಿ ನೋಡೋ ಚಟ.. ‘ಆ ಶಬ್ಧ’ದ ರೆಕಾರ್ಡ್‌‌ ಕೂಡ ಮಾಡ್ತಾಳೆ!

Pinterest LinkedIn Tumblr

1seಫಿಲಿಡೆಲ್ಫಿಯಾ: ಕೆಲ್ಸಾ ಇಲ್ಲದ ಬಡಗಿ ಅದೆನೋ ಮಾಡಿದ ಅಂತಾರಲ್ಲ, ಈ ಮಹಿಳೆಯ ಕತೆಯೂ ಸ್ವಲ್ಪ ಅದೇ ತರ ಇದೆ. ರಾತ್ರಿ ವೇಳೆ ಹಾಯಾಗಿ ನಿದ್ದೆ ಮಾಡಮ್ಮ ಅಂದ್ರೆ ಪಕ್ಕದ್ಮನೆ ಬೆಡ್‌‌ರೂಂನಲ್ಲಿ ಇಣುಕುವ ಚಟ ಈಕೆಗೆ.

ಅಷ್ಟೇ ಆಗಿದ್ರೆ ಪರವಾಗಿಲ್ಲ ಅಂದು ಬಿಡಬಹುದಿತ್ತು. ಆದ್ರೆ ಈಕೆ ಮಾಡಿರುವ ಕೆಲ್ಸ ನೋಡಿ ನೀವು ನಕ್ಕರೆ ಆಶ್ಚರ್ಯವೇನಿಲ್ಲ ಬಿಡಿ. ಇಲ್ಲಿನ 38 ವರ್ಷದ ಸ್ಟೆಸಿ ರಿಜನ್ ಎಂಬ ಮಹಿಳೆ, ರಾತ್ರಿ ವೇಳೆ ತನ್ನ ನೆರೆಹೊರೆ ಮನೆಗಳಿಂದ ಬರುವ ‘ಕರ್ಕಶ’ ಶಬ್ಧಗಳನ್ನು ರೆಕಾರ್ಡ್‌ ಮಾಡಿ ಅದನ್ನು ಟ್ವಿಟ್ಟರ್‌ನಲ್ಲಿ ಅಪ್ಲೋಡ್ ಮಾಡಿದ್ದಾಳೆ.

ರಾತ್ರಿ ವೇಳೆ ನಡೆಯುವ ಸಂಗಾತಿಗಳ ಮಿಲನ ಮಹೋತ್ಸವದ ವೇಳೆ ಕೇಳಿ ಬರುವ ಚಿತ್ರ ವಿಚಿತ್ರ ಶಬ್ಧಗಳನ್ನು ರೆಕಾರ್ಡ್‌ ಮಾಡಿ ‘ನೋಡಿ ನನಗೆ ಮಲಗಲು ಬಿಡುತ್ತಿಲ್ಲ ಈ ಜೋಡಿ’ ಅಂತಾ ಟ್ವೀಟ್ ಮಾಡಿದ್ದಾಳೆ ಈ ಪುಣ್ಯಾತಗಿತ್ತಿ. ಪಕ್ಕದ ಮನೆಯಿಂದ ಪ್ರತಿ 10 ನಿಮಿಷಗಳಿಗೊಮ್ಮೆ ಇಂತಹ ಶಬ್ಧಗಳು ಕೇಳಿ ಬರುತ್ತಿದೆ ಎಂದು ಸರಣಿ ಟ್ವೀಟ್ ಮಾಡಿರುವ ಸ್ಟೆಸಿ, ಇದಕ್ಕಾಗಿ ಸಖತ್ ರೆಸ್ಪಾನ್ಸ್ ಕೂಡ ಪಡೆದಿದ್ದಾಳೆ.

ಸ್ಟೆಸಿ ಮಾಡಿರುವ ಟ್ವೀಟ್‌‌ಗಳನ್ನು ನೋಡಿದ.. ಅಲ್ಲಲ್ಲ.. ಕೇಳಿದ ಗೆಳೆಯರು ‘ನೀನೆ ಪುಣ್ಯವಂತೆ ಬಿಡಮ್ಮ.. ಅಟ್‌ಲೀಸ್ಟ್ ನಿನ್ನ ಪಕ್ಕದ ಮನೆಯಿಂದ ‘ಅಂತಹ ಕರ್ಕಶ’ ಶಬ್ಧವಾದರೂ ಕೇಳಿ ಬರುತ್ತಲ್ಲ’ ಅಂತಾ ರಿಪ್ಲೈ ಮಾಡಿ ನಗೆ ಬೀರಿದ್ದಾರೆ.

Write A Comment