ಅಂತರಾಷ್ಟ್ರೀಯ

ಯುರೋಪ್ ನಲ್ಲಿಯೂ 9/11 ದಾಳಿ ರೀತಿಯ ದಾಳಿ ನಡೆಯಲಿದೆ: ಭದ್ರತಾ ಪಡೆ ಎಚ್ಚರಿಕೆ

Pinterest LinkedIn Tumblr

paris-attackಪ್ಯಾರಿಸ್: ಯುರೋಪ್‌ನಲ್ಲಿ ಇನ್ಮುಂದೆ ಹೆಚ್ಚು ತೀವ್ರತೆಯ ದಾಳಿಗಳು ನಡೆಯುವ ಸಾಧ್ಯತೆಯಿದೆ, ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ಭಯೋತ್ಪಾದನಾ ನಿಗ್ರಹ ದಳ ಎಚ್ಚರಿಕೆ ನೀಡಿದೆ.

ನವೆಂಬರ್‌ನಲ್ಲಿ ಇಸಿಸ್ ಉಗ್ರರು ಪ್ಯಾರಿಸ್‌ನಲ್ಲಿ ನಡೆಸಿದ ದಾಳಿಯಲ್ಲಿ 130 ಜನರು ಹತರಾಗಿದ್ದರು. ಆದರೆ ಇದ್ಯಾವುದೂ ದೊಡ್ಡ ದಾಳಿಗಳಾಗಿರಲಿಲ್ಲ, ಇದಕ್ಕಿಂತ ಹೆಚ್ಚು ತೀವ್ರತೆಯ ದಾಳಿ ಇನ್ನು ನಡೆಯಲಿದೆ ಎಂದು ತಜ್ಞರು ಹೇಳಿದ್ದಾರೆ.

2016ರಲ್ಲಿ ನಡೆಯಲಿರುವ ದಾಳಿಯ ಬಗ್ಗೆ ನೋಡಿದರೆ 2015ರಲ್ಲಿ ನಡೆದದ್ದು ಏನೇನೂ ಅಲ್ಲ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಮೆರಿಕದಲ್ಲಿ 9/11 ಗೆ ನಡೆದ ದಾಳಿಯಂತಿರುವ ದಾಳಿ ಯುರೋಪ್‌ನಲ್ಲಿಯೂ ನಡೆಯುವ ಸಾಧ್ಯತೆ ಇದೆ. ಯುರೋಪ್‌ನ ಹಲವಾರು ಪ್ರದೇಶಗಳಲ್ಲಿ ಒಟ್ಟೊಟ್ಟಿಗೆ ದಾಳಿ ನಡೆಯುವ ಸಾಧ್ಯತೆಯಿದ್ದು ಉಗ್ರರು ಇದಕ್ಕೆ ಹೊಂಚು ಹಾಕುತ್ತಿದ್ದಾರೆ.

ಈ ದಾಳಿ ನಡೆಸುವುದಕ್ಕೋಸ್ಕರವೇ ಇಸಿಸ್ ಯುರೋಪ್ ನಲ್ಲಿ ಉಗ್ರರನ್ನು ನೇಮಕ ಮಾಡಿ ತರಬೇತಿ ನೀಡುತ್ತಿದೆ. ಅವರಲ್ಲಿ ಸಾಕಷ್ಟು ಆಯುಧಗಳಿದ್ದು, ಗುಪ್ತ ಭಾಷೆಗಳನ್ನು ಬಳಸುತ್ತಿದ್ದಾರೆ ಎಂದು ಭದ್ರತಾ ಪಡೆಯ ಅಧಿಕಾರಿ ಹೇಳಿದ್ದಾರೆ.

ಆದ್ದರಿಂದ ಯುರೋಪ್‌ನಲ್ಲಿ ಅತೀವ ಜಾಗ್ರತೆ ವಹಿಸಿದ್ದು, ಸಂಶಯಾಸ್ಪದ ವ್ಯಕ್ತಿಗಳ ಮೇಲೆ ನಿಗಾ ಇಡಲಾಗಿದೆ.

Write A Comment