ಬಾಲಿವುಡ್ ನಟ ಸಲ್ಮಾನ್ಖಾನ್ ಸಾಮಾನ್ಯವಾಗಿ ಸೂಪರ್ಸ್ಟಾರ್ ಅಂತ ಎಲ್ಲರಿಗೂ ಗೊತ್ತು. ಹಾಗೆ ಅವನು ಬ್ಯಾಡ್ಬಾಯ್ ಅಂತಲೂ ಗೊತ್ತು.
ಆದರೆ, ಅವನ ಇನ್ನೊಂದು ಮುಖ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ತನಗೆ ಬೇಕಾದವರು, ತನ್ನವರು ಎಂದರೆ ಸಲ್ಮಾನ್ ಅವರಿಗೆಲ್ಲ ಬೇಕಾದ್ದು ಮಾಡುತ್ತಾನೆ. ಬೇಕಾದಂತಹ ಅವಕಾಶಗಳನ್ನು ಒದಗಿಸಿಕೊಡುತ್ತಾನೆ. ಇದು ಅವನ ಮಾನವೀಯತೆಯ ಇನ್ನೊಂದು ಮುಖ.
ಇದಕ್ಕೆ ಉದಾಹರಣೆ ಎಂದರೆ, ಅವನ ಬಾಡಿಗಾರ್ಡ್ (ಅಂಗರಕ್ಷಕ)ಆಗಿ ಹಲವು ವರ್ಷಗಳಿಂದ ಕೆಲಸ ಮಾಡ್ತಾ ಇರೋ ಶೇರಾ ಎಂಬ ವ್ಯಕ್ತಿಯ ಮಗನನ್ನು ಈಗ ಸಲ್ಮಾನ್ ಖಾನ್ ತನ್ನ ಬಹು ನಿರೀಕ್ಷೆಯ ಸುಲ್ತಾನಾ ಸಿನಿಮಾದಲ್ಲಿ ನಟಿಸಲು ಅವಕಾಶ ಕಲ್ಪಿಸಿಕೊಟ್ಟಿದ್ದಾನೆ. ಸದ್ಯ ಬಂದಿರುವ ವರದಿಯನ್ನೇ ನಂಬುವುದಾದರೆ ಬಾಡಿಗಾರ್ಡ್ ಶೇರಾನ ಮಗ ಟೈಗರ್ ಎಂಬ ಹುಡುಗ ಸಲ್ಮಾನ್ ಖಾನ್ ಜತೆ ಸುಲ್ತಾನಾದಲ್ಲಿ ಕಾಣಿಸಿಕೊಳ್ಳಲಿದ್ದಾನೆ.