ರಾಷ್ಟ್ರೀಯ

ರಾಮ ಮಂದಿರಕ್ಕೆ ಬೆಂಬಲ ನೀಡುವುದಾಗಿ ರಾಜೀವ್ ಗಾಂಧಿ ಭರವಸೆ ನೀಡಿದ್ದರು: ಸ್ವಾಮಿ

Pinterest LinkedIn Tumblr

Subramanian-Swamy

ನವದೆಹಲಿ: ವಿವಾದಿತ ಅಯೋಧ್ಯಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ದೆಹಲಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ವಿಚಾರ ಸಂಕಿರಣ ವಿರೋಧಿಸಿ ಒಂದು ಕಡೆ ಪ್ರತಿಭಟನೆ ನಡೆಯುತ್ತಿದ್ದರೆ, ಮತ್ತೊಂದು ಕಡೆ ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಅವರು ರಾಮ ಮಂದಿರ ನಿರ್ಮಾಣವನ್ನು ಬೆಂಬಲಿಸುವುದಾಗಿ ಭರವಸೆ ನೀಡಿದ್ದರು ಎಂದು ಬಿಜೆಪಿ ನಾಯಕ ಸುಬ್ರಮಣ್ಯಯನ್ ಸ್ವಾಮಿ ಅವರು ಹೇಳಿದ್ದಾರೆ.

ವಿಚಾರ ಸಂಕಿರಣದಲ್ಲಿ ಭಾಗವಹಿಸಿರುವ ಬಿಜೆಪಿ ನಾಯಕ, ರಾಜೀವ್ ಗಾಂಧಿ ಅವರು ರಾಮ ಮಂದಿರ ನಿರ್ಮಾಣಕ್ಕೆ ಬೆಂಬಲ ನೀಡವುದಾಗಿ ವೈಯಕ್ತಿಕವಾಗಿ ನನಗೆ ಹೇಳಿದ್ದರು. ಹೀಗಾಗಿ ಕಾಂಗ್ರೆಸ್ ಈ ವಿಷಯದಲ್ಲಿ ಬೆಂಬಲ ನೀಡಲಿ ಎಂದು ಮನವಿ ಮಾಡಿದರು.

‘ನಮ್ಮ ಸಂಸ್ಕೃತಿಯ ಪುನರುಜ್ಜೀವನಕ್ಕೆ ಅಯೋಧ್ಯಯಲ್ಲಿ ರಾಮ ಮಂದಿರ ನಿರ್ಮಾಣ ಕಡ್ಡಾಯ. ಹೀಗಾಗಿ ಆ ಕೆಲಸಕ್ಕೆ ನಾವು ಮುಂದಾಗಿದ್ದು, ಅದು ಮುಗಿಯುವವರೆಗೂ ಬಿಡುವುದಿಲ್ಲ. ಆದರೆ ಇದಕ್ಕಾಗಿ ಬಲವಂತವಾಗಿ ಮತ್ತು ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವುದಿಲ್ಲ’ ಎಂದರು.

ನಮಗೆ ಕಾನೂನಿನ ಮೇಲೆ ಸಂಪೂರ್ಣ ವಿಶ್ವಾಸವಿದೆ. ನ್ಯಾಯಾಲಯದಲ್ಲಿ ನಾವು ಗೆಲ್ಲುತ್ತೇವೆ ಎಂದು ಸುಬ್ರಮಣ್ಯಯನ್ ಸ್ವಾಮಿ ಹೇಳಿದರು.

ಇದಕ್ಕು ಮುನ್ನ ಆಯೋಧ್ಯೆ ರಾಮ ಮಂದಿರ ವಿಚಾರವನ್ನು ಚುನಾವಣಾ ಅಸ್ತ್ರವೆಂಬ ದೃಷ್ಟಿಯಲ್ಲಿ ನೋಡಬಾರದು. ರಾಮ ಮಂದಿರ ಈ ವರ್ಷದಲ್ಲಿ ನಿರ್ಮಾಣವಾಗದಿದ್ದರೆ, ಮುಂದಿನ ದಿನಗಳಲ್ಲಿ ನಿರ್ಮಾಣ ಮಾಡಲಾಗುತ್ತದೆ ಎಂದಿದ್ದರು.

ಸುಬ್ರಹ್ಮಣ್ಯನ್ ಸ್ವಾಮಿ ಅವರು ಇತ್ತ ವಿಚಾರ ಸಂಕಿರಣದಲ್ಲಿ ರಾಮ ದೇಗುಲ ನಿರ್ಮಾಣ ಕುರಿತಂತೆ ಮಾತನಾಡುತ್ತಿದ್ದರೆ, ವಿಶ್ವ ವಿದ್ಯಾಲಯದ ಹೊರಾಂಗಣದಲ್ಲಿ ವಿದ್ಯಾರ್ಥಿಗಳ ಸಂಘಟನೆಗಳಾದ ಎನ್ಎಸ್ ಯುಐ, ಎಐಎಸ್ಎ ಮತ್ತು ಕೆವೈಎಸ್ ಪ್ರತಿಭಟನೆ ನಡೆಸುತ್ತಿವೆ.

Write A Comment