ಅಂತರಾಷ್ಟ್ರೀಯ

ಕೇವಲ ಓರ್ವ ಬಾಲಕಿಯ ಶಿಕ್ಷಣಕ್ಕಾಗಿ ರೈಲು ಸೇವೆ ಒದಗಿಸಿದ ಜಪಾನ್!

Pinterest LinkedIn Tumblr

4raiಟೋಕಿಯೊ: ‘ಬೇಟಿ ಬಚಾವೋ, ಬೇಟಿ ಪಡಾವೋ’ ಆಂದೋಲನ ಕೇಂದ್ರ ಸರ್ಕಾರದ ಅತ್ಯಂತ ಮಹತ್ವದ ಯೋಜನೆಗಳಲ್ಲಿ ಒಂದು. ದೇಶದ ಮಹಿಳಾ ವರ್ಗವನ್ನು ಸಶಕ್ತಗೊಳಿಸುವತ್ತ ಈ ಯೋಜನೆ ದೃಷ್ಟಿ ನೆಟ್ಟಿದೆ. ಆದರೆ ಈ ಯೋಜನೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ ಅನ್ನೋದಿಕ್ಕೆ ಗ್ರೌಂಡ್‌‌ ಲೇವಲ್‌‌‌‌‌‌‌ನಲ್ಲಿ ನಡೆಯುತ್ತಿರುವ ಘಟನಾವಳಿಗಳೇ ಸಾಕ್ಷಿ.

ಆದರೆ ಜಪಾನ್ ಹಾಗಲ್ಲ. ತನ್ನ ಪ್ರಜೆಗಳ ಕುರಿತು ಅತ್ಯಂತ ಕಾಳಜಿ ವಹಿಸುವ ಅಲ್ಲಿನ ಸರ್ಕಾರ, ನಾಗರಿಕರ ಸರ್ವತೋಮುಖ ಬೆಳವಣಿಗೆಗೆ ಸಾಧ್ಯವಾದಷ್ಟೂ ಪ್ರಯತ್ನ ಪಡುತ್ತದೆ. ಅದರಲ್ಲೂ ಮಹಿಳಾ ಸಬಲೀಕರಣದಲ್ಲಿ ಇತರೆ ದೇಶಗಳಿಗಿಂತ ಒಂದು ಹೆಜ್ಜೆ ಮುಂದಿರುವ ಜಪಾನ್, ಸಾಕ್ಷರತೆ ಪ್ರಮಾಣ ಹೆಚ್ಚಿಸುವಲ್ಲಿ ಕಂಕಣ ಬದ್ಧವಾಗಿದೆ.

ಜಪಾನ್‌‌ನ ಹೋಕಾಯಿದೋ ದ್ವೀಪದ ಕಾಮಿ-ಶಿರಾತಾಕಿ ಗ್ರಾಮವೇ ಈ ವಾದಕ್ಕೆ ಸಾಕ್ಷಿ ಒದಗಿಸಿದೆ. ಪ್ರಯಾಣಿಕರು ಬರುವುದಿಲ್ಲವೆಂದು ಎಷ್ಟೋ ವರ್ಷಗಳ ಹಿಂದೆಯೇ ಇಲ್ಲಿನ ರೈಲು ನಿಲ್ದಾಣವನ್ನು ಮುಚ್ಚಿರುವ ಸರ್ಕಾರ, ಕೇವಲ ಓರ್ವ ಬಾಲಕಿಗಾಗಿ ರೈಲು ಸೇವೆ ಒದಗಿಸಿದೆ.

ಕಾಮಿ-ಶಿರಾತಾಕಿ ಗ್ರಾಮದಿಂದ ದೂರದ ಮತ್ತೊಂದು ಪಟ್ಟಣಕ್ಕೆ ತೆರಳಿ ಈ ಬಾಲಕಿ ಶಾಲೆಗೆ ಹೋಗುತ್ತಿದ್ದು, ಬಾಲಕಿ ಶಾಲೆ ತಲುಪಲು ಅನ್ಯ ಮಾರ್ಗವಿಲ್ಲ ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ಬಾಲಕಿ ಶಾಲೆಗೆ ಹೋಗಲು ಅನುಕೂಲವಾಗಲಿ ಎಂದು ಖುದ್ದು ಸರ್ಕಾರವೇ ಇವಳಿಗಾಗಿ ರೈಲು ಸೇವೆ ಒದಗಿಸುವ ನಿರ್ಣಯ ಕೈಗೊಂಡಿದೆ.

ಇನ್ನೂ ಆಶ್ಚರ್ಯದ ಸಂಗತಿ ಅಂದರೆ ಈ ರೈಲು ದಿನಕ್ಕೆ ಕೇವಲ ಎರಡು ಸಲ ಮಾತ್ರ ಈ ರೈಲು ನಿಲ್ದಾಣಕ್ಕೆ ಬರುತ್ತಿದ್ದು, ಈ ಬಾಲಕಿ ಬಿಟ್ಟರೆ ಬೇರೆ ಯಾರೂ ಈ ರೈಲನ್ನು ಉಪಯೋಗಿಸುವುದಿಲ್ಲ. ಅಲ್ಲದೇ ಬಾಲಕಿಯ ಶಾಲಾ ವೇಳೆಯನ್ನು ಗಮನದಲ್ಲಿಟ್ಟುಕೊಂಡೇ ರೈಲಿನ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ.

ಇದೇ ವೇಳೆ ಬಾಲಕಿ ಪ್ರಾಥಮಿಕ ಶಿಕ್ಷಣ ಮುಗಿಸಿ ಉನ್ನತ ವ್ಯಾಸಂಗಕ್ಕಾಗಿ ಬೇರೆಡೆ ಸೇರುವವರೆಗೂ ಈ ರೈಲು ಸೇವೆಯನ್ನು ಮುಂದುವರೆಸುವ ನಿರ್ಧಾರ ಕೈಗೊಂಡಿರುವ ಸರ್ಕಾರ, ಅದಾದ ಬಳಿಕ ರೈಲು ಸೇವೆಯನ್ನು ರದ್ದುಗೊಳಿಸುವ ಇರಾದೆ ವ್ಯಕ್ತಪಡಿಸಿದೆ.

Write A Comment