ಕರ್ನಾಟಕ

‘ದರ್ಶನ’ ವಾಸ್ತವಕ್ಕಿಳಿಸಲು ಮೋದಿಗೆ ಉತ್ತಮ ಸಲಹೆಗಾರರು ಬೇಕು

Pinterest LinkedIn Tumblr

CNR-WEBಬೆಂಗಳೂರು: ತಮ್ಮ ದರ್ಶನವನ್ನು ವಾಸ್ತವಕ್ಕೆ ಇಳಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಮರ್ಪಕ ವೈಜ್ಞಾನಿಕ ಸಲಹೆಯ ಅಗತ್ಯವಿದೆ. ಅವರು ಮಿಷನ್ ಮಾದರಿ ಯೋಜನೆಗಳನ್ನು ಆರಂಭಿಸಬೇಕು ಎಂದು ಭಾರತ ರತ್ನ ಪುರಸ್ಕೃತ ವಿಜ್ಞಾನಿ ಸಿಎನ್​ಆರ್ ರಾವ್ ಅಭಿಪ್ರಾಯ ಪಟ್ಟಿದ್ದಾರೆ.

ಪಿಟಿಐಗೆ ನೀಡಿದ ಸಂದರ್ಶನವೊಂದರಲ್ಲಿ ರಾವ್ ಅವರು ಈ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಖಚಿತವಾಗಿ ದೂರದೃಷ್ಟಿ ಹೊಂದಿರುವ ವ್ಯಕ್ತಿ. ಏನಾದರೂ ಮಾಡಬೇಕು ಎಂದು ಅವರು ಬಯಸುತ್ತಿದ್ದಾರೆ ಎಂಬುದರಲ್ಲಿ ಸಂಶಯವಿಲ್ಲ. ಒಳ್ಳೆಯ ಸಲಹೆಗಳನ್ನಷ್ಟೇ ಅವರು ಬಳಸುವುದಿಲ್ಲ, ಅವರೊಳಗಿನ ಅದ್ಭುತ ವಿಚಾರಗಳನ್ನು ಸೇರಿಸಿಕೊಳ್ಳುತ್ತಾರೆ ಎಂದು ನಾವು ಹಾರೈಸಬಹುದು. ಅವರು ದಿಟವಾಗಿ ಒಳ್ಳೆಯ ಕೆಲಸಗಾರ. ಅವರ ಮಾತುಗಳನ್ನು ಕೇಳುತ್ತಿದ್ದರೆ, ಅವರು ಹೇಳುವುದರಲ್ಲಿ ತಪ್ಪಿಲ್ಲ ಅನಿಸುತ್ತದೆ. ಅವರು ಏನು ಹೇಳುತ್ತಾರೋ ಅದು ಸಮರ್ಪಕವಾಗಿರುತ್ತದೆ. ಅದರ ಹೊರತಾಗಿಯೂ ನಾವು ಮಾಡಬೇಕಾದ್ದು ಬಹಳಷ್ಟು ಇವೆ ಎಂದು ರಾವ್ ಪ್ರಶ್ನೆಗೆ ಉತ್ತರವಾಗಿ ಹೇಳಿದ್ದಾರೆ.

ಸಮರ್ಪಕ ಸಲಹೆಗಾಗಿ ಸಮರ್ಪಕ ವ್ಯಕ್ತಿಗಳನ್ನು ಪ್ರಧಾನಿ ಹೊಂದಿರುತ್ತಾರೆ ಎಂದು ನಾನು ಹಾರೈಸುವೆ. ವಿಜ್ಞಾನ ಅಥವಾ ಸಮಾಜದ ವಿಸõತ ಸಮಸ್ಯೆಗಳನ್ನು ಒಬ್ಬ ವ್ಯಕ್ತಿ ಅಥವಾ ಒಂದು ಸಚಿವಾಲಯ ನಿಭಾಯಿಸಲಾಗದು. ವಿಜ್ಞಾನವನ್ನು ಬಳಸಿಕೊಂಡು ಬಡತನದ ಹಲವಾರು ಜ್ವಲಂತ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು, ಜೊತೆ ಜೊತೆಗೇ ವಿಶ್ವದ ಇತರರ ಜೊತೆಗೂ ಸ್ಪರ್ಧಿಸಬಹುದು. ನೀಲಬಾನಲ್ಲೂ ಮುಂಚೂಣಿಯ ಸಂಶೋಧನೆಯಾಗಬೇಕು. ಭಾರತ ಇವೆಲ್ಲವನ್ನೂ ಮಾಡಬೇಕು ಅಂದರೆ ಪ್ರಧಾನಿ ಮೋದಿ ಅವರಿಗೆ ಆದ್ಯತೆಗಳ ಮತ್ತು ಮುಂದುವರೆಯುವ ಮಾರ್ಗದ ಅರಿವಾಗಬೇಕು. ಇದಕ್ಕಾಗಿ ಅವರು ಸಮರ್ಪಕ ವ್ಯಕ್ತಿಯಿಂದ, ಸಮರ್ಪಕ ತಂಡವೊಂದರಿಂದ ಸಲಹೆ ಪಡೆಯಬೇಕು ಎಂದು ನಾನು ಭಾವಿಸುವೆ ಎಂದೂ ರಾವ್ ಹೇಳಿದ್ದಾರೆ.

ಕೃಷಿಗೆ ಉತ್ತಮ ಗುಣಮಟ್ಟದ ಬೀಜ, ಸುರಕ್ಷಿತ ಕುಡಿಯುವ ನೀರು, ಅನಕ್ಷರತೆ ನಿವಾರಣೆ, ಮಲೇರಿಯಾದಂತಹ ರೋಗಗಳ ನಿವಾರಣೆ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಮಿಷನ್ ಮಾದರಿ ಯೋಜನೆಗಳ ಅಗತ್ಯವಿದೆ. ಇದರಿಂದ ಬಡಜನತೆಗೆ ಅನುಕೂಲವಾಗುತ್ತದೆ ಎಂದು ರಾವ್ ಹೇಳಿದ್ದಾರೆ.

Write A Comment