ರಾಷ್ಟ್ರೀಯ

ಉತ್ಸವದಲ್ಲಿ ಕರ್ತವ್ಯನಿರತ ಈ ಪೊಲೀಸಪ್ಪ ಮಾಡಿದ್ದೇನು ಗೊತ್ತಾ!?

Pinterest LinkedIn Tumblr

Gujarat-Police-Web

ಅಹಮದಾಬಾದ್: ಬೇಲಿಯೇ ಎದ್ದು ಹೊಲ ಮೇಯುವುದು ಅಂದರೆ ಇದೆ. ಪೋಲಿಗಳಿಂದ ಮಹಿಳೆಯರಿಗೆ ರಕ್ಷಣೆ ಕೊಡಬೇಕಾದ ಪೊಲೀಸರೇ ಕೆಲವೊಮ್ಮೆ ಈ ಪರಿ ವರ್ತಿಸುತ್ತಾರೆ. ಮಾಡಬಾರದ್ದನ್ನೆಲ್ಲಾ ಮಾಡುತ್ತಾರೆ!

ಗುಜರಾತ್​ನ ಈ ಪೊಲೀಸಪ್ಪ ಮಾಡಿದ್ದೇನು ನೋಡಿ. ಅಹಮದಾಬಾದ್​ನಲ್ಲಿ ಕಳೆದ ಡಿಸೆಂಬರ್​ನಲ್ಲಿ ನಡೆದ ಉತ್ಸವವೊಂದರಲ್ಲಿ ಸೇರಿದ ಜನದಟ್ಟಣೆಯಲ್ಲಿ ಈ ಮಹಾಶಯ ಕರ್ತವ್ಯ ನಿರ್ವಹಿಸೋದನ್ನು ಬಿಟ್ಟು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿರೋದು ಮೊಬೈಲ್​ನಲ್ಲಿ ಸೆರೆಯಾಗಿದೆ. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಈಗ ಭಾರಿ ಸುದ್ದಿಯಾಗುತ್ತಿದೆ. ಜಾತ್ರೆಯಲ್ಲಿ ತಾನು ಸಾಗುವ ದಾರಿಯುದ್ದಕ್ಕೂ ತನ್ನ ಕರ್ತವ್ಯವನ್ನೇ ಮರೆತು ಮಹಿಳೆಯರ ಮೈ ಮುಟ್ಟಿ, ಅಸಭ್ಯವಾಗಿ ವರ್ತಿಸಿದ್ದಾನೆ ಈ ಮಹಾನುಭಾವ ಪೊಲೀಸಪ್ಪ. ಇದೀಗ ಅಹಮದಾಬಾದ್ ಸಿಟಿ ಪೊಲೀಸ್ ಈ ಪೊಲೀಸಪ್ಪನ ವಿಚಾರಣೆಗೆ ಆದೇಶಿಸಿದೆ. ತನಿಖೆ ನಡೆಸುವಂತೆ ಹೇಳಿದೆ.

ಹೆಚ್ಚೂಕಡಿಮೆ ಒಂದು ನಿಮಿಷದ ಈ ವೀಡಿಯೊ ಕ್ಲಿಪ್​ನಲ್ಲಿ ಎಲ್ಲಿಯೂ ಪೊಲೀಸಪ್ಪನ ವರ್ತನೆ ಸೆರೆಹಿಡಿದಿರುವ ವ್ಯಕ್ತಿಯ ಬಗ್ಗೆಯಾಗಲಿ ಅಥವಾ ಪೊಲೀಸಪ್ಪ ಯಾರು ಎನ್ನುವ ಮಾಹಿತಿಯಾಗಲಿ ಇಲ್ಲ. ಎಲ್ಲಿಯೂ ಅವರ ಮುಖ ಕೂಡ ಕಾಣಿಸುವುದಿಲ್ಲ. ಕಂಕರಿಯಾ ಕೆರೆಯ ದಡದಲ್ಲಿ ಒಂದು ವಾರಗಳ ಕಾಲ ನಡೆದ ಈ ಉತ್ಸವದಲ್ಲಿ ಲಕ್ಷಾಂತರ ಮಂದಿ ಸೇರುತ್ತಾರೆ. ಕಾರಣ ಭದ್ರತೆ ಹಿನ್ನೆಲೆಯಲ್ಲಿ ಸಾಕಷ್ಟು ಪೊಲೀಸರನ್ನು ನಿಯೋಜನೆ ಮಾಡಲಾಗಿರುತ್ತದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಣಿನಗರದ ಠಾಣೆಯ ಹಿರಿಯ ಪೊಲೀಸ್ ಇನ್ಸ್​ಪೆಕ್ಟರ್ ಎನ್​ಎಸ್ ದೇಸಾಯಿ, ಆಯೋಜನೆ ಮಾಡಲಾಗಿರುವ ಪೊಲೀಸರಲ್ಲಿ ಇದು ಯಾರು ಎನ್ನುವುದನ್ನು ಪತ್ತೆ ಹಚ್ಚಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಹಾಗೇ ವೀಡಿಯೊ ಮಾಡಿದ ವ್ಯಕ್ತಿ ಯಾರು ಎನ್ನುವುದನ್ನೂ ಪತ್ತೆ ಹಚ್ಚುತ್ತಿದ್ದೇವೆ ಎಂದು ತಿಳಿಸಿದ್ದಾರೆ.

Write A Comment