ಮನೋರಂಜನೆ

ಸಕ್ಸೆಸ್‌ ಪ್ರೆಸ್‌ ಮೀಟ್‌ನಲ್ಲೂ ಸದ್ದು ಮಾಡಿದ ಕಿಲ್ಲಿಂಗ್‌ ಕಾಫಿ ಮಗ್‌ ಸ್ಟೈಲ್‌!

Pinterest LinkedIn Tumblr

5coffeeಸೆಂಚುರಿ ಸ್ಟಾರ್‌ ಶಿವರಾಜಕುಮಾರ್‌ ಮತ್ತು ಖ್ಯಾತ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮ ಕಾಂಬಿನೇಶನ್‌ ಸ್ಯಾಂಡಲ್‌ವುಡ್‌ನಲ್ಲಿ ಸಖತ್ತಾಗೇ ವರ್ಕೌಟ್‌ ಆಗಿದೆ. ವರ್ಮಾ ನಿರ್ದೇಶನದ ಹಾಗೂ ಹ್ಯಾಟ್ರಿಕ್‌ ಹೀರೋ ಅಭಿನಯದ ‘ಕಿಲ್ಲಿಂಗ ವೀರಪ್ಪನ್‌’ ಸ್ಯಾಂಡಲವುಡ್‌ ಅಂಗಳದಲ್ಲಿ ಜೋರಾಗಿಯೇ ಸದ್ದು ಮಾಡ್ತಿದೆ.

ಈ ಚಿತ್ರದ ಯಶಸ್ಸಿನ ಸಂಭ್ರಮವನ್ನು ಹಂಚಿಕೊಳ್ಳಲು ಚಿತ್ರತಂಡ ಪ್ರೆಸ್‌ ಮೀಟ್‌ ಒಂದನ್ನು ಕರೆದಿತ್ತು. ಚಿತ್ರದ ಆಕರ್ಷಣೆಗಳಲ್ಲಿ ಒಂದಾದ ಶಿವಣ್ಣನ ಕಾಫಿ ಮಗ್‌ ಹಿಡಿಯೋ ಸ್ಟೈಲ್‌ ಎಲ್ಲರೂ ಕಾಪಿ ಮಾಡುತ್ತಿರುವುದು ಗೊತ್ತೇ ಇದೆ. ಅದೇ ರೀತಿ ಚಿತ್ರತಂಡವೂ ಸಹ ಶಿವಣ್ಣನ ಫೇಮಸ್‌ ಸ್ಟೈಲ್‌ನ್ನು ಪ್ರಮುಖವಾಗಿಟ್ಟುಕೊಂಡು ಪತ್ರಿಕಾಗೋಷ್ಠಿ ನಡೆಸಿತು.

ಶಿವಣ್ಣ, ಆರ್‌ಜಿವಿ,ಪಾರುಲ್‌ ಯಾದವ್‌,ಯಜ್ಞಾ ಶೆಟ್ಟಿ, ಸಂಚಾರಿ ವಿಜಯ್‌ ಸೇರಿದಂತೆ ಚಿತ್ರತಂಡದ ಎಲ್ಲ ಸದಸ್ಯರು ಕಾಫಿ ಮಗ್‌ನ್ನು ಕೈಯಲ್ಲಿ ಹಿಡಿದು ಶಿವಣ್ಣನ ತರಹ ಪೋಸ್‌ ನೀಡಿದ್ದು ವಿಶೇಷವಾಗಿತ್ತು.

Write A Comment