ಕನ್ನಡ ವಾರ್ತೆಗಳು

ಸಾಲ ಪಡೆದು ದರೋಡೆ ಆರೋಪ – ನೈಜ್ಯ ವಿಷಯ ಮರೆ ಮಾಚುವ ಯತ್ನ :ರಾಜಾರಾಮ್ ಶೆಟ್ಟಿ

Pinterest LinkedIn Tumblr

Woodland_press_meet_1

ಮಂಗಳೂರು: ಮೇಸ್ತ್ರಿ ಮೋಹನ್ ಶೆಟ್ಟಿ ಸುಮಿತ್ ಆಳ್ವರ ಅವರಿಂದ ಹತ್ತು ಲಕ್ಷ ಹಣವನ್ನು ಪಡೆದುಕೊಂಡು ಇದೀಗ ಪತ್ರಿಕಾಗೋಷ್ಠಿ ಕರೆದು ದರೋಡೆ ಮಾಡಲಾಗಿದೆ ಎಂದು ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾದುದು ಎಂದು ರಾಜಾರಾಮ್ ಶೆಟ್ಟಿ ಎಂಬವರು ಆರೋಪಿಸಿದ್ದಾರೆ.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯನ್ನುದ್ದ್ದೇಶಿಸಿ ಮಾತನಾಡಿದ ಅವರು, ಒಂದು ಕಾಲದಲ್ಲಿ ಮೇಸ್ತ್ರಿಯಾಗಿದ್ದ ಮೋಹನ್ ಶೆಟ್ಟಿ ತನ್ನ ವ್ಯವಹಾರದ ನಿಮಿತ್ತವಾಗಿ ಸುಮಿತ್ ಆಳ್ವ ಅವರಿಂದ ಹತ್ತು ಲಕ್ಷ ಹಣವನ್ನು ಪಡೆದುಕೊಂಡಿದ್ದು ಅದನ್ನು ಈವರೆಗೆ ಮರುಪಾವತಿ ಮಾಡಿಲ್ಲ. ಹಣದ ಬಗ್ಗೆ ವಿಚಾರಿಸಿದಾಗ ಹಣ ನೀಡದೇ ಮೋಸ ಮಾಡಿದ್ದು ಮಾತ್ರವಲ್ಲದೇ ದರೋಡೆ ಮಾಡಲಾಗಿದೆ ಎಂದು ಸುಮಿತ್ ಆಳ್ವರ ವಿರುದ್ಧವೇ ಮೋಹನ್ ಶೆಟ್ಟಿ ಆರೋಪ ಮಾಡಿರುವುದು ನೈಜ್ಯ ವಿಷವನ್ನು ಮರೆ ಮಾಚುವ ಸಂಚು ಸಂಚು ಎಂದು ಆರೋಪಿಸಿದರು.

Woodland_press_meet_2 Woodland_press_meet_3 Woodland_press_meet_4

ಸಾಲ ನೀಡಿದ ಹಣವನ್ನು ವಾಪಸ್ ಕೇಳಿದಾಗ ಹಣ ಕೊಡುವ ಬದಲು ಸುಮಿತ್ ಅವರ ಮೇಲೆಯೇ ಕೊಲೆ ಯತ್ನ ಮತ್ತು ದರೋಡೆ ಕೇಸನ್ನು ದಾಖಲಿಸಿ ಅವರನ್ನು ದಮನಿಸುವ ಯತ್ನ ನಡೆಸಿದ್ದಾರೆ. ಹಣ ನೀಡುವುದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಸುಮಿತ್ ಅವರ ಮೇಲೆ ಸುಳ್ಳು ದೂರು ದಾಖಲಿಸಲಾಗಿದೆ ಎಂದುತಿಳಿಸಿದ್ದಾರೆ

ಪತ್ರಿಕಾಗೋಷ್ಠಿಯಲ್ಲಿ ರಾಮಣ್ಣ ಶೆಟ್ಟಿ,ಬಿ. ಎಸ್. ಅಬೂಬಕ್ಕರ್ ಬೊಳ್ಳಾಯಿ, ವಿಲ್ಸನ್ ಬೊಳ್ಳಾಯಿ, ಶಮೀರ್ ಶಾಂತಿ ಅಂಗಡಿ, ಕಿಶೋರ್ ಭಂಡಾರಿ,ಮುಂತಾದವರು ಉಪಸ್ಥಿತರಿದ್ದರು.

Write A Comment