ಕರ್ನಾಟಕ

ಸಾರಿಗೆ ಇಲಾಖೆ ವತಿಯಿಂದ 27ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ: ಸುರಕ್ಷತಾ ಸಾಧನಗಳ ಪ್ರದರ್ಶನಕ್ಕೆ ಚಾಲನೆ

Pinterest LinkedIn Tumblr

Policeಬೆಂಗಳೂರು: ಸಾರಿಗೆ ಇಲಾಖೆ ವತಿಯಿಂದ 27ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಸೋಮವಾರ ನಗರದ ಬ್ರಿಗೇಡ್‌ ಜಂಕ್ಷನ್‌ ಬಳಿಯ ಒಪೆರಾ ಹೌಸ್ ಆವರಣದಲ್ಲಿ ಏರ್ಪಡಿಸಿದ್ದ ಸುರಕ್ಷತಾ ಸಾಧನಗಳ ಪ್ರದರ್ಶನಕ್ಕೆ ನಗರ ಪೊಲೀಸ್ ಕಮಿಷನರ್ ಎನ್.ಎಸ್. ಮೇಘರಿಕ್ ಚಾಲನೆ ನೀಡಿದರು.

ಇದೇ ವೇಳೆ ದ್ವಿಚಕ್ರ ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ‘ಐ ಟ್ರಾನ್ಸ್ ಟೆಕ್ನಾಲಜೀಸ್‌’ ಸಂಸ್ಥೆಯು ಸಾರಿಗೆ ಇಲಾಖೆ ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ DriveSafe.Smart ಎಂಬ ಮೊಬೈಲ್ ಆ್ಯಪ್‌ ಬಿಡುಗಡೆ ಮಾಡಲಾಯಿತು.

ಆ್ಯಪ್‌ ಬಗ್ಗೆ ಮಾಹಿತಿ ನೀಡಿದ ಸಂಸ್ಥೆಯ ಮುಖ್ಯಕಾರ್ಯನಿರ್ವಣಾಧಿಕಾರಿ ಮಲ್ಲೇಶ್‌, ‘ಆ್ಯಪ್‌ನ್ನು ಯಾವುದೇ ಆಂಡ್ರಾಯ್ಡ್ ಫೋನ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ನಂತರ ಅಂತರ್ಜಾಲದ ಸೌಲಭ್ಯವಿಲ್ಲದೆ ಈ ಆ್ಯಪ್ ಕಾರ್ಯನಿರ್ವಹಿಸಲಿದೆ’ ಎಂದರು.

‘ಆ್ಯಪ್‌ನಲ್ಲಿ Drive Safer ಎಂಬ ವಿಭಾಗವಿದೆ. ವಾಹನ ಸವಾರರು ಚಾಲನೆ ವೇಳೆ ಏಳು ಕಿ.ಮೀಗಿಂತ ಹೆಚ್ಚು ವೇಗ ಹೆಚ್ಚಿಸಿದ ನಂತರ ಯಾವುದೇ ಕರೆ ಬಂದರೆ ತಕ್ಷಣ ಕರೆ ಸ್ಥಗಿತಗೊಳ್ಳಲಿದೆ. ನಂತರ ಕರೆ ಬಂದ ಸಂಖ್ಯೆಗೆ ‘ಐ ಯಾಮ್ ಡ್ರೈವಿಂಗ್, ವಿಲ್‌ ಕಾಲ್ ಲೇಟರ್’ ಎಂದು ಸಂದೇಶ ಹೋಗುತ್ತದೆ’ ಎಂದು ಮಾಹಿತಿ ನೀಡಿದರು.

‘ಉಳಿದಂತೆ ಆ್ಯಪ್‌ನಲ್ಲಿ Drvie Smarter ಮತ್ತು Drive Greener ಎಂಬ ವಿಭಾಗಗಳಿದ್ದು, ಇವುಗಳನ್ನು ಬಳಸಲು ಅಂತರ್ಜಾಲದ ಸೌಲಭ್ಯ ಬೇಕಾಗುತ್ತದೆ. ಚಾಲನೆ ವೇಳೆ ಅಪಘಾತ ಸಂಭವಿಸಿದರೆ ಈ ವಿಭಾಗಗಳ ಮೂಲಕ ಸಮೀಪದ ಠಾಣೆಗೆ ಮಾಹಿತಿ ಹೋಗುತ್ತದೆ’ ಎಂದು ತಿಳಿಸಿದರು.

ಸಾರಿಗೆ ಇಲಾಖೆ ಆಯುಕ್ತ ಡಾ.ರಾಮೇಗೌಡ ಮಾತನಾಡಿ, ‘ಜ.16ರವರೆಗೆ ಈ ಪ್ರದರ್ಶನ ಇರಲಿದೆ.  ಚಾಲನೆ ವೇಳೆ ಧರಿಸಬೇಕಾದ ಸುರಕ್ಷತಾ ಸಾಧನಗಳು ಮತ್ತು ಜಾಗೃತಿ ಮೂಡಿಸುವ ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಲಾಗುವುದು’ ಎಂದು ಹೇಳಿದರು.

Write A Comment