ಕರ್ನಾಟಕ

ಎತ್ತಿನಹೊಳೆ ಯೋಜನೆಗೆ ರಾಜ್ಯ ಹಸಿರು ಮಂಡಳಿ ಅಸ್ತು

Pinterest LinkedIn Tumblr

e

ಬೆಂಗಳೂರು (ಪಿಟಿಐ): ಎತ್ತಿನಹೊಳೆ ಯೋಜನೆಗೆ ಕರ್ನಾಟಕ ಹಸಿರು ಮಂಡಳಿ ಅಸ್ತು ಎಂದಿದ್ದು, ಹಾಸನ ಜಿಲ್ಲೆಯಲ್ಲಿ 13.93 ಹೆಕ್ಟರ್‌ಗಳಷ್ಟು ಅರಣ್ಯ ಭೂಮಿ ‌ಬಳಕೆಗೆ ಅನುಮತಿ ನೀಡಿದೆ.

ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯದಡಿಯ ಪ್ರಾದೇಶಿಕ ಉನ್ನತಾಧಿಕಾರ ಸಮಿತಿಯು‌(ಆರ್‌ಇಸಿ) ಕೆಲವು ಷರತ್ತುಗಳೊಟ್ಟಿಗೆ ಯೋಜನೆಗೆ ಅನುಮತಿ ನೀಡಿದೆ.

ಕೃಷ್ಣಾ ನೀರಾವರಿ ನಿಗಮದ(ಕೆಎನ್ಎನ್ಎಲ್) ಯೋಜನೆಗಳಲ್ಲೊಂದಾದ ಈ ಯೋಜನೆಗೆ ‌ಚೆನ್ನೈನ ರಾಷ್ಟ್ರೀಯ ಹಸಿರು ನ್ಯಾಯಪೀಠ ಅನುಮತಿ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದ ಈ ಯೋಜನೆಯನ್ನು ಅನುಮತಿ ಇಲ್ಲದೇ ಆರಂಭಿಸಿದ್ದಕ್ಕಾಗಿ ಕೆಎನ್‌ಎನ್‌ಎಲ್‌ಗೆ ದಂಡವನ್ನು ಹಸಿರು ಮಂಡಳಿ ವಿಧಿಸಿದೆ.

‘ಯಾವುದೇ ಸಮಾಜದ ಅಗತ್ಯವಾದ ಕುಡಿಯುವ ನೀರು ಒದಗಿಸುವ ಪ್ರಮುಖ ಉದ್ದೇಶ ಸೇರಿದಂತೆ ಎಲ್ಲ ಸಂಗತಿಗಳನ್ನು ಪರಿಗಣಿಸಿ, ಯೋಜನೆಗೆ ಅನುಮತಿ ನೀಡಲು ಆರ್‌ಇಸಿ ನಿರ್ಧರಿಸಿದೆ. ಸಾಮಾನ್ಯ ಹಾಗೂ ಹೆಚ್ಚುವರಿ ಷರತ್ತುಗಳು ಮತ್ತು ಉಪಶಮನ ಕ್ರಮಗಳು ಎಂದಿನಂತೆ ಅನ್ವಯಿಸುತ್ತವೆ’ ಎಂದು ಇತ್ತೀಚೆಗೆ ನಡೆದ ಚುಟುಕು ಸಭೆಯಲ್ಲಿ ಆರ್‌ಇಸಿ ಹೇಳಿದೆ.

Write A Comment