ಕನ್ನಡ ವಾರ್ತೆಗಳು

ಬೃಹತ್ ಬಂಡವಾಳ ಹೂಡಿಕೆದಾರರ ಸಮಾವೇಶ

Pinterest LinkedIn Tumblr

Tma_pai_photo_1

ಮ೦ಗಳೂರು ಜ.12: ದ.ಕ.ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿದ್ದು ಇಲ್ಲಿ ಕೈಗಾರಿಕೆ ಸ್ಥಾಪನೆ ಮಾಡಲು ಹಾಗೂ ಆರೋಗ್ಯ ಪ್ರವಾಸೋದ್ಯಮ ಶೈಕ್ಷಣಿಕ ಪ್ರವಾಸೋದ್ಯಮದಲ್ಲಿ ಬಂಡವಾಳ ಹೂಡಲು ಅನುಕೂಲವಾಗುವಂತೆ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಮಂಗಳವಾರ ಬೃಹತ್ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ನಗರದ ಟಿ.ಎಂ.ಎ.ಪೈ ಹಾಲ್‌ನಲ್ಲಿ ಹಮ್ಮಿಕೊಂಡಿತ್ತು.

ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ್ ರೈ ಸಮಾವೇಶ ಉದ್ಘಾಟಿಸಿ, ಮಾತನಾಡಿದ ಅವರು ಜಿಲ್ಲೆಯಲ್ಲಿ ಹೀಡಿಕೆಯನ್ನು ಮುಕ್ತ ಮನಸ್ಸಿನಿಂದ ಸ್ಬಾಗತಿಸುವ ಅತ್ತು ಹೊಸ ಉದ್ದಿಮೆಗೆ ಅನೂಕೂಲಕರ ವಾತಾವರಣ ಇಲ್ಲಿ ವಿವುಲ ಅವಕಾಶ ವಿದೆ ಎಂದರು.

ಹೂಡಿಕೆದಾರರ ಸಮಾವೇಶ ಯಶಸ್ಸಿಗೆ ಹಲವಾರು ಸಮಿತಿಗಳನ್ನು ಈ ಸಂಧರ್ಭದಲ್ಲಿ ರಚನೆ ಮಾಡಲಾಗಯಿತು.  ಕೈಗಾರಿಕಾ ಹಾಗೂ ಪ್ರವಾಸೋಧ್ಯಮ ಸಚಿವ ಆರ್,ವಿ.ದೇಶಪಾಂಡೆ, ದ.ಕ.ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಈ ಸಮಾವೇಶದಲ್ಲಿ ಭಾಗವಹಿಸಿದ್ದರು.

Tma_pai_photo_2 Tma_pai_photo_3 Tma_pai_photo_4 Tma_pai_photo_5 Tma_pai_photo_6 Tma_pai_photo_7

ಕೆನರಾ ಚೇಂಬರ್ ಆಫ್ ಕಾಮರ್ಸ್ ಬಂದರು, ಸಣ್ಣ ಕೈಗಾರಿಕಾ ಸಂಘ ಬೈಕಂಪಾಡಿ, ಕಿರು ಕೈಗಾರಿಕಾ ಸಂಘ, ಮೂಲ್ಕಿ, ಪ್ಲಾಸ್ಟಿಕ್ ತಯಾರಕರ ಸಂಘ, ಬೈಕಂಪಾಡಿ, ಯೆಯ್ಯಾಡಿ ಸಣ್ಣ ಕೈಗಾರಿಕಾ ಸಂಘ ಹಾಗೂ ಸುಮಾರು ೩೦ಕ್ಕೂ ಹೆಚ್ಚು ನವ ಹೂಡಿಕೆದಾರರು ಸಮಾವೇಶದಲ್ಲಿ ಭಾಗವಹಿಸಿದರು.

ಮ.ನ.ಪಾ ಮೇಯರ್ ಜೆಸಿಂತಾ ವಿಜಯ್ ಅಲ್ಫ್ದೆಡ್, ಶಾಸಕ ಮೊಯ್ದಿನ್ ಬಾವಾ, ದ.ಕ ಜಿ.ಪಂ ಅಧ್ಯಕ್ಷರು ಆಶಾ ತಿಮ್ಮಪ್ಪ ಗೌಡ, ಮೂಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಉಪಮೇಯರ್ ಪುರುತ್ತೋತ್ತಮ ಚಿತ್ರಾಪುರ, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಜಿ.ಪಂ. ಸಿಇಒ ಶ್ರೀವಿಧ್ಯಾ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಭರತ್ ಲಾಲ್ ಮೀನಾ, ಕೆಸಿಸಿಐ ಅಧ್ಯಕ್ಷ ರಾಮ್ ಮೋಹನ್ ಪೈ ಮಾರೂರುಇ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗೋಕುಲ್ ದಾಸ್ ನಾಯಕ್ ಮೊದಲಾದವರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

Write A Comment