ರಾಷ್ಟ್ರೀಯ

ಶೇ.100 ಪ್ರಾಥಮಿಕ ವಿದ್ಯಾಭ್ಯಾಸ ಪಡೆದ ಮೊದಲ ರಾಜ್ಯ ಕೇರಳ

Pinterest LinkedIn Tumblr

kerala_schoolತಿರುವನಂತಪುರಂ: ಶೇ. 100ರಷ್ಟು ಪ್ರಾಥಮಿಕ ವಿದ್ಯಾಭ್ಯಾಸ ಪಡೆದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆ ಕೇರಳಕ್ಕೆ ದಕ್ಕಿದೆ.

ಜನವರಿ 13ನೇ ತಾರೀಖಿಗೆ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಕೇರಳಕ್ಕೆ ಮೂರು ದಿನಗಳ ಭೇಟಿ ನೀಡಲಿದ್ದು, ಸೆನೇಟ್ ಹಾಲ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಈ ವಿಷಯವನ್ನು ಘೋಷಣೆ ಮಾಡಲಿದ್ದಾರೆ.

ಕೇರಳ ಸಂಪೂರ್ಣ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪಡೆದುಕೊಂಡಿದೆ ಎಂಬ ಸುದ್ದಿಯನ್ನು ಶಿಕ್ಷಣ ಸಚಿವ ಪಿಕೆ ಅಬ್ದು ರಬ್ ದೃಢೀಕರಿಸಿದ್ದಾರೆ. 1 ವರ್ಷದಿಂದ 50 ವರುಷದ ವರೆಗಿನ ಎಲ್ಲರಿಗೂ ಪ್ರಾಥಮಿಕ ವಿದ್ಯಾಭ್ಯಾಸ ಕಲ್ಪಿಸಬೇಕು ಎಂಬ ನಿಟ್ಟಿನಲ್ಲಿ ಕೇರಳ ಸರ್ಕಾರ ಅತುಲ್ಯಂ ಎಂಬ ಯೋಜನೆ ಹಮ್ಮಿಕೊಂಡಿತ್ತು. ಈ ಯೋಜನೆಯಲ್ಲಿ ಎರಡು ಹಂತಗಳಿದ್ದು, 2010ರಲ್ಲಿ ಮೊದಲ ಹಂತ ಆರಂಭವಾಗಿತ್ತು.

2015ರಲ್ಲಿ ನಾಲ್ಕನೇ ತರಗತಿ ಪಾಸು ಮಾಡುವ ತತ್ಸಮಾನ ಪರೀಕ್ಷೆಯನ್ನು 2.6 ಲಕ್ಷ ಬರೆದಿದ್ದು, ಇದರಲ್ಲಿ 2.2 ಲಕ್ಷ ಮಂದಿ ಪಾಸಾಗಿದ್ದರು.  ಕೇರಳದಾದ್ಯಂತ 6, 613 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಇಂಗ್ಲಿಷ್‌ನಲ್ಲಿ 75 ಅಂಕಗಳಲ್ಲಿ 30 ಹಾಗೂ ಇತರ ವಿಷಯಗಳಲ್ಲಿ 50 ಅಂಕಗಳಲ್ಲಿ 20 ಅಂಕ ಪಡೆದರೆ ಪರೀಕ್ಷೆಯಲ್ಲಿ ತೇರ್ಗಡೆ ಎಂದು ಪರಿಗಣಿಸಲಾಗುತ್ತದೆ.

ಕೇರಳ ರಾಜ್ಯ ಸರ್ಕಾರದ ಮಿಷನ್ 676ರ ಅಂಗವಾಗಿ ಅತುಲ್ಯಂ ಯೋಜನೆಯ ಎರಡನೇ ಹಂತವನ್ನು ಅನುಷ್ಠಾನ ಮಾಡಲಾಗಿದೆ.

Write A Comment