ಅಂತರಾಷ್ಟ್ರೀಯ

ಹೆಬ್ಟಾವಿಗೆ ಮುತ್ತು, ಮಹಿಳೆಯ ಮೂಗಿಗೇ ಕುತ್ತು ; ವೈರಲ್‌ ವಿಡಿಯೋ

Pinterest LinkedIn Tumblr

Snake bite-700ಫ‌ುಕೆ: ಆಘಾತಕಾರಿ ವಿದ್ಯಮಾನವೊಂದರಲ್ಲಿ ಚೀನದ ಪ್ರವಾಸಿ ಮಹಿಳೆ ಹೆಬ್ಟಾವಿಗೆ ಮುತ್ತಿಕ್ಕುವಾಗ ಅದು ಆಕೆಯ ಮೂಗನ್ನೇ ಬಲವಾಗಿ ಕಚ್ಚಿ ಘಾಸಿಗೊಳಿಸಿದೆ.

ಚೀನದ ಪ್ರವಾಸಿ ಮಹಿಳೆ ಫ‌ುಕೆಯ ತಾಂಬನ್‌ ಚಲಾಂಗ್‌ ಮುವಾಂಗ್‌ನಲ್ಲಿರುವ ಥಾಯ್ಲಂಡ್‌ನ‌ ಪ್ರಸಿದ್ಧ ಬಯೋಟೆಕ್ನಾಲಜಿ ಪಾರ್ಕಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಫ‌ುಕೆಯ ಈ ಬಯೋಟೆಕ್ನಾಲಜಿ ಪಾರ್ಕ್‌ ನಲ್ಲಿ ವಿವಿಧ ಬಗೆಯ ಅಪರೂಪದ ಜೀವಂತ ಹಾವುಗಳ ಪ್ರದರ್ಶನವಿದ್ದು ಈ ಹಾವುಗಳನ್ನು ಬಳಸಿಕೊಂಡು ಯಾವೆಲ್ಲ ಉತ್ಪನ್ನಗಳನ್ನು ತಯಾರಿಸುತ್ತಾರೆ ಎಂಬ ಪ್ರಾತ್ಯಕ್ಷಿಕೆಯೂ ನಡೆಯುತ್ತಿರುತ್ತದೆ.

ಹೆಬ್ಟಾವನ್ನು ಕೈಯಲ್ಲಿ ಹಿಡಿದುಕೊಂಡ ಪಾರ್ಕ್‌ ನ ಸಿಬಂದಿ ಅದರ ಜೀವ ವೈವಿಧ್ಯ ವಿವರಗಳನ್ನು ನೀಡುತ್ತಿದ್ದಾಗ ಹೆಬ್ಟಾವಿನ ಮುಖಕ್ಕೆ ಅತ್ಯಂತ ಸನಿಹವಾಗಿ ತನ್ನ ಮುಖವನ್ನು ಒಯ್ದು ಮುತ್ತಿಕ್ಕುವ ಉತ್ಸಾಹ ತೋರಿದ ಚೀನದ ಮಹಿಳೆಗೆ ಹೆಬ್ಟಾವು ತೀವ್ರವಾಗಿ ಕಡಿದು ಘಾಸಿಗೊಳಿಸಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
-ಉದಯವಾಣಿ

Write A Comment