ಅಂತರಾಷ್ಟ್ರೀಯ

ಬಾಂಬ್ ಸ್ಫೋಟಿಸಿದ್ದು ಭಾರತವಲ್ಲ, ಪಾಕ್ ಕಾನ್ಸುಲೇಟ್ ಬಳಿ

Pinterest LinkedIn Tumblr

Afghan-web1ಕಾಬೂಲ್: ಆಫ್ಘಾನಿಸ್ತಾನದ ಜಲಾಲಾಬಾದ್ ನಗರದಲ್ಲಿನ ಪಾಕಿಸ್ತಾನಿ ಕಾನ್ಸುಲೇಟ್​ನನ್ನು ಗುರಿಯಾಗಿರಿಸಿಕೊಂಡು ಬುಧವಾರ ನಡೆದ ಭಯೋತ್ಪಾದಕ ದಾಳಿ ಸಂದರ್ಭದಲ್ಲಿ ಕನಿಷ್ಠ 6 ಮಂದಿ ಪೊಲೀಸರು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಪಾಕಿಸ್ತಾನಿ ಕಾನ್ಸುಲೇಟ್​ಗೆ ಸಮೀಪದ ಮನೆಯೊಂದರಲ್ಲಿ ಅವಿತುಕೊಂಡಿರುವ ಶಸ್ತ್ರಧಾರಿಗಳ ಜೊತೆಗೆ ಆಫ್ಘನ್ ಭದ್ರತಾ ಪಡೆಗಳು ಗುಂಡಿನ ಸಮರ ನಡೆಸಿದ್ದಾರೆ ಎಂದು ಪಾಕಿಸ್ತಾನಿ ವರದಿಗಳು ಹೇಳಿವೆ.

ಪಾಕಿಸ್ತಾನಿ ಕಾನ್ಸುಲೇಟ್ ಸಮೀಪ ಭಾರಿ ಸ್ಫೋಟ  ಸಂಭವಿಸಿದೆ ಎಂದು ಕ್ಷಿನ್​ಹುವಾ ಸುದ್ದಿಸಂಸ್ಥೆ ಈ ಮುನ್ನ ವರದಿ ಮಾಡಿತ್ತು. ಪಾಕಿಸ್ತಾನಿ ಕಾನ್ಸುಲೇಟ್ ಭಾರತೀಯ ಕಾನ್ಸುಲೇಟ್ ಮತ್ತು ಇರಾನೀ ಕಾನ್ಸುಲೇಟ್ ಹಾಗೂ ಖಾಸಗಿ ಶಾಲೆಯೊಂದರ ಸಮೀಪದಲ್ಲಿದ್ದು, ಪ್ರಾಥಮಿಕ ವರದಿಗಳು ಭಾರತೀಯ ಕಾನ್ಸುಲೇಟ್ ಸಮೀಪ ಸ್ಫೋಟ ಸಂಭವಿಸಿದೆ ಎಂದು ತಿಳಿಸಿದ್ದವು. ‘ಪಾಕಿಸ್ತಾನಿ ಕಾನ್ಸುಲೇಟ್ ಸಮೀಪದ ಪೊಲೀಸ್ ವಾಹನವನ್ನು ಗುರಿಯಾಗಿರಿಸಿ ಈ ಬಾಂಬ್ ದಾಳಿ ನಡೆದಿದೆ ಎಂದು ಆ ಬಳಿಕ ಭದ್ರತಾ ಮೂಲವನ್ನು ಉಲ್ಲೇಖಿಸಿ ಕ್ಷಿನ್​ಹುವಾ ವರದಿ ಮಾಡಿತು. ಆದರೆ ಡಾನ್ ಆನ್​ಲೈನ್ ವರದಿ ಪ್ರಕಾರ ಪಾಕಿಸ್ತಾನಿ ಕಾನ್ಸುಲೇಟ್ ಸಮೀಪ ಆತ್ಮಾಹುತಿ ಬಾಂಬರ್ ಸ್ವಯಂ ಸ್ಫೋಟಿಸಿಕೊಂಡು 6 ಜನರನ್ನು ಬಲಿ ತೆಗೆದುಕೊಂಡ ಬಳಿಕ ಗುಂಡಿನ ಘರ್ಷಣೆ ಶುರುವಾಯಿತು ಎಂದು ವರದಿ ಡಾನ್ ಆನ್​ಲೈನ್ ವರದಿ ಮಾಡಿದೆ.

Write A Comment