ರಾಷ್ಟ್ರೀಯ

ಅಲಹಾಬಾದ್ ಮುಸ್ಲಿಂ ಹುಡುಗರ ರಾಮ ಭಕ್ತಿ

Pinterest LinkedIn Tumblr

ramaಅಲಹಾಬಾದ್: ನಿತ್ಯವೂ ರಾಮನ ಸ್ಮರಣೆ ಹಾಗೂ ಹೆಸರನ್ನು ಬರೆಯುವುದರಿಂದ ಏಕಾಗ್ರತೆ ಜತೆಗೆ ಭಕ್ತಿ, ಆಂತರ್ಯದ ಶಕ್ತಿ ವೃದ್ಧಿಸಿಕೊಳ್ಳಬಹುದು ಎಂದು ಅಲಹಾಬಾದ್​ನ ಕೆಲವು ಮುಸ್ಲಿಂ ಹುಡುಗರಿಗೆ ಅರಿವಾಗಿದೆ.

ಹಲವಾರು ವರ್ಷಗಳಿಂದ ರಾಮನ ಹೆಸರನ್ನು ತಪ್ಪದೇ ಬರೆಯುವುದನ್ನು ರೂಢಿಸಿ ಕೊಂಡಿರುವ ಈ ಮಕ್ಕಳು ಮಾಘಮೇಳದ ಸಂದರ್ಭದಲ್ಲಿ ರಾಮನಾಮ ಬ್ಯಾಂಕ್​ಗೆ ಸಲ್ಲಿಸುತ್ತಾರೆ. ರಾಮನ ಸ್ಮರಿಸುವು ದರಿಂದ ಅಂತಃಶಕ್ತಿ ವೃದ್ಧಿಸುವುದರ ಜತೆಗೆ ಭಕ್ತಿ ಕಾಪಾಡಲು ಸಹಕಾರಿಯಾಗಿದೆ ಎಂದು ಕಳೆದ 10 ವರ್ಷದಿಂದ ಅಭ್ಯಾಸದಲ್ಲಿ ತೊಡಗಿರುವ ಫೈಸಲ್ ಖಾನ್ ತಿಳಿಸಿದ್ದಾರೆ.

ಫೈಸಲ್ ತಂಡದ ಸದಸ್ಯರಾದ ಅಬ್ದುಲ್ ರಬ್, ಮೊಹಮದ್ ಅಮೀನ್ ಖಾನ್, ಮುಖ್ತಾರ್ ಇವರೆಲ್ಲರೂ ಹಿಂದಿ, ಇಂಗ್ಲಿಷ್, ಉರ್ದುವಿನಲ್ಲಿ ರಾಮನಾಮ ಬರೆದು ಅರ್ಪಿಸುವುದು ವಿಶೇಷ. ಇವರಿಗೆ ಭಗವದ್ಗೀತೆಯೂ ಕಂಠಪಾಠವಾಗಿದೆ.

Write A Comment