ರಾಷ್ಟ್ರೀಯ

ಪಠಾಣ್‌ಕೋಟ್ ದಾಳಿಕೋರರು ಪಾಕಿಗಳೇ ಎಂದು ಒಪ್ಪಿಕೊಂಡ ಪಾಕ್ ಸರ್ಕಾರ

Pinterest LinkedIn Tumblr

terror

ಇಸ್ಲಾಮಾಬಾದ್: ಪಠಾಣ್‌ಕೋಟ್ ವಾಯು ಸೇನಾ ನೆಲೆ ಮೇಲೆ ದಾಳಿ ನಡೆಸಿದ್ದ ಉಗ್ರರು ಪಾಕಿಸ್ತಾನದವರೇ ಎಂದು ಪಾಕಿಸ್ತಾನ ಸರ್ಕಾರ ಒಪ್ಪಿಕೊಂಡಿದೆ.
ಪಠಾಣ್‌ಕೋಟ್ ದಾಳಿ ಕುರಿತಂತೆ ಹಲವು ಮಹತ್ವದ ದಾಖಲೆಗಳನ್ನು ಪಾಕ್ ಗೆ ಭಾರತ ಸರ್ಕಾರ ನೀಡಿತ್ತಾದರೂ ಪಾಕ್ ಸರ್ಕಾರ ಇದನ್ನು ಒಪ್ಪಿರಲಿಲ್ಲ. ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್ ವಿರುದ್ಧ ಟೀಕೆಗಳು ಕೇಳಿಬಂದ ನಂತರ ಪಾಕ್ ಸರ್ಕಾರ ಪಠಾಣ್ ಕೋಟ್ ದಾಳಿ ನಡೆಸಿದ ಉಗ್ರರು ಪಾಕ್ ನಿಂದಲೇ ಭಾರತಕ್ಕೆ ಅಕ್ರಮ ಪ್ರವೇಶ ಮಾಡಿದ್ದಾರೆ ಎಂದು ಹೇಳಿದೆ.
ಭಾರತ ಪಾಕ್ ಅಂತಾರಾಷ್ಟ್ರೀಯ ಗಡಿ ಮೂಲಕ 6 ಮಂದಿ ಉಗ್ರರು ಭಾರತಕ್ಕೆ ನುಸುಳಿ ಈ ದುಷ್ಕೃತ್ಯ ಎಸಗಿದ್ದಾರೆ ಎಂದು ಪಾಕ್ ಸರ್ಕಾರದ ಅಧಿಕಾರಿಗಳ ಹೇಳಿಕೆಯನ್ನು ಪಾಕಿಸ್ತಾನ ಮಾಧ್ಯಮಗಳು ಉಲ್ಲೇಘಿಸಿವೆ.
ಜನವರಿ 2 ರಂದು ಸೇನಾ ಸಮವಸ್ತ್ರ ಧರಿಸಿ ಶಸ್ತ್ರಸಜ್ಜಿತ ಉಗ್ರರು ಪಠಾಣ್‌ಕೋಟ್ ವಾಯು ಸೇನಾ ನೆಲೆ ಮೇಲೆ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಏಳು ಭಾರತೀಯ ಯೋಧರು ಮೃತಪಟ್ಟಿದ್ದರು. ನಾಲ್ಕು ದಿನಗಳ ಕಾರ್ಯಾಚರಣೆಯಲ್ಲಿ 6 ಮಂದಿ ಉಗ್ರರನ್ನು ಭಾರತೀಯ ಯೋಧರು ಹೊಡೆದುರುಳಿಸಿದ್ದರು.

 

 

 

Write A Comment