ಮಂಗಳೂರು,ಜ.16 : ಕದ್ರಿ ಶ್ರೀ ಮಂಜುನಾಥದೇವಸ್ಥಾನದಲ್ಲಿ ಜನವರಿ 15 ರಿಂದ 25 ರ ವರೆಗೆ ವರ್ಷಾವಧಿ ಜಾತ್ರೆ ಜರಗಲಿದ್ದು, 22ನೇ ಶುಕ್ರವಾರ ಮಹಾರಥೋತ್ಸವ ನೆರವೇರಲಿದೆ.
ಜ.14 ರಂದುರಾತ್ರಿ ಮಹಾಪೂಜೆಯ ಬಳಿಕ ಮುಹೂರ್ತ ಬಲಿ, ಪ್ರಾರ್ಥನೆ, ತಂತ್ರಿಗಳ ಯಾಗಾಶಾಲಾ ಪ್ರವೇಶ ನಡೆಯಲಿದ್ದು, ಜ.15 ರಂದು ಬೆಳಿಗ್ಗೆ 4 ರಿಂದ ‘ತೀರ್ಥಸ್ನಾನ’ ಪ್ರಾರಂಭಗೊಳ್ಳಲಿದೆ. ಸಂಜೆ 6 ಕ್ಕೆ ಧ್ವಜಾರೋಹಣ (ಏಳುಪಟ್ಟಣ ಮೊಗವೀರ ಮಹಾ ಸಭಾದವರಿಂದ) ಮಹಾಪೂಜೆ, ಶ್ರೀ ಮಲರಾಯದೈವದ ಭಂಡಾರ ಆಗಮನ, ರಾತ್ರಿಧ್ವಜಬಲಿ, ಗರುಡಾರೋಹಣ, ಉತ್ಸವ ಬಲಿ, ಭೂತ ಬಲಿ, ಕಂಚೀಲು ಸೇವೆ ಹಾಗೂ ಸಣ್ಣರಥೋತ್ಸವ ನಡೆಯಲಿರುವುದು.
ಜ.16ರಂದು ಸಂಜೆಉತ್ಸವ ಬಲಿ, ಮಹಾಪೂಜೆ, ನಿತ್ಯಬಲಿ, ಭೂತಬಲಿ, ದೀಪದ ಬಲಿ ಹಾಗೂ ಸಣ್ಣರಥೋತ್ಸವರವಿವಾರ ಜ. 17 , ಸಂಜೆ ಬಿಕರ್ನಕಟ್ಟೆ ಸವಾರಿ ಬಲಿ, ಜ.18 ಸೋಮವಾರ ಸಂಜೆ ಮಲ್ಲಿಕಟ್ಟೆ ಸವಾರಿ ಬಲಿ, ಜ. 19, ಮಂಗಳವಾರ ಸಂಜೆ ಮುಂಡಾಣಕಟ್ಟೆ ಸವಾರಿ ಬಲಿ, ಜ.20, ಬುಧವಾರ ಸಂಜೆಕೊಂಚಾಡಿ ಸವಾರಿ ಬಲಿ, ಜ.21, ಗುರುವಾರ-ಏಳನೇ ದೀಪೋತ್ಸವ ಮಧ್ಯಾಹ್ನ ಮಹಾಪೂಜೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ಚಂದ್ರಮಂಡಲ ಉತ್ಸವ ನಡೆಯಲಿರುವುದು.
ಜ22. ಶುಕ್ರವಾರ ಮಧ್ಯಾಹ್ನ ಮಹಾಪೂಜೆ, ರಥಾರೋಹಣ, ಸಂಜೆ 6ಕ್ಕೆ ಶ್ರೀಮನ್ಮಹಾರಥೋತ್ಸವ ಬೆಳ್ಳಿರಥೋತ್ಸವ ಚಂದ್ರಮಂಡಲ ಉತ್ಸವ, ಮಹಾಪೂಜೆ, ಭೂತಬಲಿ, ಮತ್ತುಕವಾಟ ಬಂಧನ ಜ.23, ಶನಿವಾರ: ಅವಭೃತ ಸ್ನಾನ-ಕವಾಟೋದ್ಘಾಟನೆ, ತುಲಾಭಾರ ಸೇವೆ, ಮಧ್ಯಾಹ್ನತ್ರಿಶೂಲ ಸ್ನಾನ, ರಾತ್ರಿ 7.30ಕ್ಕೆ ಚಂದ್ರಮಂಡಲ ಉತ್ಸವ ರಾತ್ರಿ 10.30ಕ್ಕೆ ಅವಭೃತ ಸ್ನಾನ ಹಾಗೂ ಕದ್ರಿ ಹತ್ತು ಸಮಸ್ತರಿಂದಧ್ವಜಾರೋಹಣ ನಡೆಯುವುದು.
ಜ.25, ಸೋಮವಾರ ಬೆಳಿಗ್ಗೆ ಶ್ರೀ ಮಲರಾಯದೈವದ ಭಂಡಾರ ಹೊರಡುವುದು, ಮಧ್ಯಾಹ್ನ 12 ಕ್ಕೆ ಸಂಪ್ರೋಕ್ಷಣೆ ಹಾಗೂ ಶ್ರೀ ಅಣ್ಣಪ್ಪದೈವಕ್ಕೆ ವಾರ್ಷಿಕ ಪರ್ವಸೇವೆ ಹಾಗೂ ರಾತ್ರಿ 9 ಕ್ಕೆ ಶ್ರೀ ಮಲರಾಯಹಾಗೂ ಪರಿವಾರ ದೈವಗಳ ನೇಮ ಜರಗಲಿದೆ. ಎಂದುಕ್ಷೇತ್ರದ ಪ್ರಕಟಣೆ ತಿಳಿಸಿದೆ.