ರಾಷ್ಟ್ರೀಯ

ನನ್ನ ಕೊನೆ ಉಸಿರಿರುವವರೆಗೆ ಬಿಜೆಪಿ-ಎಸ್ಎಡಿ ಮೈತ್ರಿ ಉಸಿರು ನಿಲ್ಲುವುದಿಲ್ಲ: ಪಂಜಾಬ್ ಸಿಎಂ ಪರ್‌ಕಾಶ್ ಸಿಂಗ್ ಬಾದಲ್

Pinterest LinkedIn Tumblr

Parkash-Singh-Badalಪಂಜಾಬ್: ಪಂಜಾಬ್ ನಲ್ಲಿ ಬಿಜೆಪಿ- ಎಸ್ಎಡಿ ಮೈತ್ರಿ ತ್ವತ್ವದ ಆಧಾರದಲ್ಲಿ ನಡೆಯುತ್ತಿದ್ದು, ತಮ್ಮ ಕೊನೆಯ  ಉಸಿರು ಇರುವವರೆಗೆ ಮೈತ್ರಿಗೆ ಅಪಾಯವಿಲ್ಲ ಎಂದು ಪಂಜಾಬ್ ಮುಖ್ಯಮಂತ್ರಿ ಪರ್‌ಕಾಶ್ ಸಿಂಗ್ ಬಾದಲ್  ಹೇಳಿದ್ದಾರೆ.

ನಾನು ಉಸಿರಾಡುವವರೆಗೂ ಬಿಜೆಪಿ-ಎಸ್ಎಡಿ ಮೈತ್ರಿ ಉಸಿರು ನಿಲ್ಲುವುದಿಲ್ಲ. ಪಂಜಾಬ್ ನಲ್ಲಿ ಬಿಜೆಪಿ-ಎಸ್ಎಡಿ ಮೈತ್ರಿ ಕೇವಲ ರಾಜಕೀಯ ಮೈತ್ರಿಯಲ್ಲ, ಅದು ತತ್ವದ ಆಧಾರದಲ್ಲಿರುವ ಮೈತ್ರಿ ಎಂದು ಪ್ರಕಾಶ್ ಸಿಂಗ್ ಬಾದಲ್ ಅಭಿಪ್ರಾಯಪಟ್ಟಿದ್ದಾರೆ. ಮೈತ್ರಿಕೂಟದ ಕೆಲವು ನಾಯಕರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿದ ವೇಳೆ ಬಾದಲ್ ಈ ಹೇಳಿಕೆ ನೀಡಿದ್ದಾರೆ.

ಪಂಜಾಬ್ ಮೆಡಿಕಲ್ ಕೌನ್ಸಿಲ್ ಅಧ್ಯಕ್ಷ ಸ್ಥಾನದಿಂದ ಮುಖ್ಯಮಂತ್ರಿಯವರ ಸಲಹೆಗಾರ ಮಹೇಶ್ ಇಂದ್ರ  ಸಿಂಗ್ ಗ್ರೆವಲ್ ಅವರ ಸಹೋದರನನ್ನು ವೈಧ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಚಿವ ಅನಿಲ್ ಜೋಶಿ ವಜಾಗೊಳಿಸಿರುವುದು ರಾಜಕೀಯ ತಿರುವು ಪಡೆದಿದ್ದು ಬಿಜೆಪಿ- ಶಿರೋಮಣಿ ಅಖಾಲಿ ದಳ(ಎಸ್ಎಡಿ) ನಾಯಕರ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ.

Write A Comment