ಕನ್ನಡ ವಾರ್ತೆಗಳು

ಎಸ್‌ವೈ‌ಎಸ್ ಫಲಾಹ್ ಮದನಿ ಇದರ 23ನೇ ವಾರ್ಷಿಕೋತ್ಸವ

Pinterest LinkedIn Tumblr

SYS_Madani_photo_1

ಉಳ್ಳಾಲ,ಜ.20: ಪ್ರವಾದಿಯವರ ಕಾಲದಲ್ಲಿ ಇಸ್ಲಾಂ ಧರ್ಮ ಪ್ರಚಾರಕ್ಕೆ ಬಹಳಷ್ಟು ಅಡ್ಡಿ, ಆತಂಕ, ವಿರೋಧಗಳು ವ್ಯಕ್ತವಾಗಿತ್ತು. ಆದರೆ ಪ್ರವಾದಿಯವರು ಇಸ್ಲಾಂನ ಬಗ್ಗೆ ಪ್ರಚಾರ ಮತ್ತು ಜನತೆಗೆ ಉಪದೇಶ ನೀಡುವುದನ್ನು ನಿಲ್ಲಿಸಿರಲಿಲ್ಲ. ಅವರ ಅಂದಿನ ಹೋರಾಟದಿಂದ ಇಸ್ಲಾಂ ಲೋಕದಲ್ಲಿ ನೆಲೆನಿಂತಿದೆ ಎಂದು ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕರ್ ಮುಸ್ಲಿಯಾರ್ ಹೇಳಿದರು.

ಅವರು ಎಸ್‌ವೈ‌ಎಸ್ ಫಲಾಹ್ ಮದನಿನಗರ ಕುತ್ತಾರ್ ಇದರ 23ನೇ ವಾರ್ಷಿಕೋತ್ಸವದ ಪ್ರಯುಕ್ತ ಭಾನುವಾರ ನಡೆದ ಸುನ್ನಿಸಮಾವೇಶದಲ್ಲಿ ಮುಖ್ಯ ಭಾಷಣಗಾರರಾಗಿ ಮಾತ ನಾಡಿದರು. ಭಾರತದ ಪಿತಾಮಹ ಮಹಾತ್ಮ ಗಾಂಧೀಜಿಯನ್ನು ಕೊಲೆ ಮಾಡಲಾಗಿದೆ. ಅದೇರೀತಿ ಇಂದಿರಾ ಗಾಂಧಿ ಮತ್ತು ರಾಜೀವ ಗಾಂಧಿಯವರನ್ನು ಕೊಲೆ ಮಾಡಿದ್ದಾರೆ. ಆದರೆ ಕೊಂದದ್ದು ಮುಸ್ಲಿಂ ಸಮುದಾಯ ಅಲ್ಲ. ಇದಕ್ಕೆ ಕಾರಣಕರ್ತರು ಬೇರೆ ಇದ್ದರೋ ಆರೋಪ ಇನ್ನೊಬ್ಬರ ಮೇಲೆ ಹಾಕುತ್ತಾರೆ ಇದರಿಂದ ಸಮಾಜದಲ್ಲಿ ತಪ್ಪುಕಲ್ಪನೆ ಮೂಡುತ್ತದೆ ಎಂದರು.

SYS_Madani_photo_2 SYS_Madani_photo_3

ವಿರೋಧಿಗಳ ಗುಂಪು ಒಂದಡೆ ಬೆಳೆಯುತ್ತದೆ. ಆದರೆ ನಾವು ಶತ್ರುಗಳಿದ್ದಾರೆ ಎಂದು ಧಾರ್ಮಿಕ ಕಾರ್ಯಗಳನ್ನು ಕುಂಠಿತಗೊಳಿಬೇಕಾಗಿಲ್ಲ. ಧಾರ್ಮಿಕ ಸ್ವಾತಂತ್ರ್ಯ ಎಲ್ಲರಿಗೂ ಇದೆ ಎಂದರು.ಅಖಿಲ ಭಾರತ ಸುನ್ನಿ ಜಂಇಯತ್ತುಲ್ ಉಲಮಾದ ಉಪಾಧ್ಯಕ್ಷ ಶೈಖುನಾ ಆಲಿಕುಂಞಿ ಉಸ್ತಾದ್ ಶಿರಿಯ ದುವಾ ನೆರವೇರಿಸಿದರು.

ಯೋಜನಾ ಆಯೋಗದ ಉಪಾಧ್ಯಕ್ಷ ಸಿ‌ಎಂ ಇಬ್ರಾಹಿಂ ಮಾತನಾಡಿ,ಪ್ರಸಕ್ತ ಇರಾಕ್ ನಾಶ ಹೊಂದಿದೆ. ಸಿರಿಯ, ಯಮನ್ ವಿನಾಶದತ್ತ ತಲುಪಿದೆ. ಇದಕ್ಕೆ ಕಾರಣ ಆರ್ಥಿಕ ಕೊರತೆಯಲ್ಲ. ಕೊರತೆಯಾದದ್ದು, ನೆಮ್ಮದಿಯ ಜೀವನ ಮತ್ತು ಇಸ್ಲಾಂ ಧರ್ಮದ ತಿಳುವಳಿಕೆ. ಪ್ರವಾದಿಯವರ ಸಾಗಿದ ದಾರಿಯಲ್ಲಿ ಅವರು ಹೋಗಲಿಲ್ಲ. ಇಸ್ಲಾಂನ ಬೋಧನೆಯನ್ನು ಅನುಕರಣೆ ಮಾಡದಿರುವುದರಿಂದ ಅಲ್ಲಿನ ಜನರ ಅಡಿಪಾಯ ತಪ್ಪಿದೆ. ಸಚಿವ ಪಟ್ಟ ಸಿಗುತ್ತದೆ, ಹೋಗುತ್ತದೆ. ಇದು ಶಾಶ್ವತವಲ್ಲ. ನಮಗೆ ಶಾಶ್ವತವಾಗಿ ಬೇಕಾಗಿರುವುದು ಜೀವನಕ್ಕೆ ಬೇಕಾದ ದಾರಿ ಮತ್ತು ತಾಜುಲ್ ಉಲಮಾರ ಪೌಂಡೇಶನ್. ದರ್ಗಾ ಝೀಯಾರತ್ ಸಲ್ಲದು ಎನ್ನುವವರು ಮೊದಲು ದರ್ಗಾದ ಪ್ರಾಮುಖ್ಯತೆ ತೆಳಿದುಕೊಳ್ಳಬೇಕು. ಔಲಿಯಾಗಳ ಗೌರವ ಅರಿತುಕೊಳ್ಳಬೇಕು ಎಂದು ಕರೆ ನೀಡಿದರು.

SYS_Madani_photo_4 SYS_Madani_photo_5 SYS_Madani_photo_6

 

ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಶಾಫಿ ಸ‌ಅದಿ ಮಾತನಾಡಿ ದೇಶದಲ್ಲಿ ಉಗ್ರವಾದ, ಭಯೋತ್ಪಾದನೆಯ ಹೆಸರು ಹೇಳಿ ಮುಸ್ಲಿಮರನ್ನು ತೀವ್ರವಾದದಿಂದ ಕೊಲ್ಲುವ ದುರ್ಘಟನೆ ನಡೆಯುತ್ತಿದೆ. ಮೌಲೂದುನ್ನು ದಕ್ಷಿಣಕನ್ನಡ ಜಿಲ್ಲೆಗೆ ಮಾತ್ರ ಸೀಮಿತ ಎಂದು ಅಂದುಕೊಂಡವರಿದ್ದಾರೆ. ಜಾಗತಿಕ ಮುಸಲ್ಮಾನರ ಸಮಸ್ಯೆಗೆ ಸೃಷ್ಟಿಯಾಗಲು ಅವರು ಪ್ರವಾದಿಯವರ ತತ್ವಾದರ್ಶಗಳನ್ನು ಮರೆತು ಆ ಕಾಲದಲ್ಲಿ ಬೋಧಿಸಲ್ಪಟ್ಟ ಉಪದೇಶಗಳನ್ನು ಬಿಟ್ಟು ನೂತನ ಸಿದ್ಧಾಂತಗಳನ್ನು ಅನುಕರಣೆ ಮಾಡಿಕೊಂಡು ಇಸ್ಲಾಂ ಧರ್ಮವನ್ನು ಮುಂದುವರಿಸಿಕೊಂಡು ಹೋಗುವುದೇ ಕಾರಣವಾಗಿದೆ. ಜಾಗತಿಕ ಮಟ್ಟದಲ್ಲಿ ಮುಸ್ಲಮರನ್ನು ಭಯೋತ್ಪಾದಕರನ್ನಾಗಿ ಮಾಡಲು ಕೆಲವು ಸಂಘಟನೆಗಳ ಮೂಲಕ ಪ್ರಯತ್ನ ನಡೆಯುತ್ತಿದೆ. ಇದು ಸೌಹಾರ್ದತೆಯ ಸೇತುವೆಯನ್ನು ಒಡೆದು ಹಾಕಲು ಮಾಡುವ ಪತ್ರಯತ್ನವಾಗಿದೆ ಎನ್ನುವುದರಲ್ಲಿ ಸಂದೇಹವಿಲ್ಲ ಎಂದರು

ದ.ಕ. ಜಿ.ಪಂ. ಉಪಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಸಾಮರಸ್ಯದಿಂದ ಬದುಕಬೇಕೆಂಬ ಹಂಬಲ ಎಲ್ಲರಲ್ಲೂ ಇದೆ. ಸಮಾಜದಲ್ಲಿ ಎಲ್ಲರನ್ನೂ ಒಂದೇ ಹಾದಿಯಲ್ಲಿ ಗೌರವ ನೀಡಿದರೆ ಸಾಮರಸ್ಯಕ್ಕೆ ಕುಂದು ಬರುವುದಿಲ್ಲ. ಸಾಮರಸ್ಯ ಹದಗೆಟ್ಟರೆ ಸಮಾಜ ಅತಂತ್ರ ಸ್ಥಿತಿಗೆ ತಲುಪುತ್ತದೆ. ಕುಡಿಯುವ ನೀರನ ಸಮಸ್ಯೆ ನಮಗೆ ಎದುರಾದಾಗ ನೀರಿನ ವ್ಯವಸ್ಥೆ ಉಳ್ಳಾಲ ದರ್ಗಾ ಮಾಡಿಕೊಡುತ್ತದೆ. ಇಂತಹ ಸಹಕಾರ ಸಮಾಜದ ಸಾಮರಸ್ಯವನ್ನು ಬಲಪಡಿಸಲು ಅಸ್ತ್ರವಾಗಿ ಬೆಳೆಯುತ್ತದೆ ಎಂದರು.

ವೇದಿಕೆಯಲ್ಲಿ ಪಿ.ಎಂ.ಅಬ್ಬಾಸ್ ಮುಸ್ಲಿಯಾರ್ ಅಲ್‌ಮದೀನ, ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ, ಉಡುಪಿ ಸಂಯುಕ್ತ ಖಾಝಿ ಬೇಕಲ ಇಬ್ರಾಹಿಂ ಮುಸ್ಲಿಯಾರ್, ಸಯ್ಯಿದ್ ಮದನಿ ಅರಬಿಕ್ ಕಾಲೇಜು ಫ್ರೊಫೆಸರ್ ಚೆರುಕುಂಞಿ ತಂಙಳ್, ಶೈಖುನಾ ಅಹ್ಮದ್ ಬಾವ ಮುಸ್ಲಿಯಾರ್, ಅಸ್ಸಯ್ಯಿದ್ ಜಲಾಲುದ್ದೀನ್ ತಂಙಳ್ ಉಜಿರೆ, ಮದನಿನಗರ ಖತೀಬ್ ಸಯ್ಯಿದ್ ಅಹ್ಮದ್ ಶರಫುದ್ದೀನ್ ಸಖಾಫಿ ಅಲ್‌ಹಾದಿ ತಂಙಳ್, ಅಲ್‌ಅನ್ಸಾರ್ ಪತ್ರಿಕೆಯ ವ್ಯವಸ್ಥಾಪಕ ಜಿ.ಎಂ. ಮುಹಮ್ಮದ್ ಕಾಮಿಲ್ ಸಖಾಫಿ, ಸಯ್ಯಿದ್ ಮದನಿ ಅರೆಬಿಕ್ ಟ್ರಸ್ಟ್ ಕಾರ್ಯದರ್ಶಿ ಸಯ್ಯಿದ್ ಝೀಯಾದ್ ತಂಙಳ್, ಅಬ್ದುಲ್ ರಶೀದ್ ಝೈನಿ, ಸಚಿವ ಯು.ಟಿ. ಖಾದರ್, ಎಸ್‌ವೈ‌ಎಸ್ ಜಿಲ್ಲಾಧ್ಯಕ್ಷ ಉಸ್ಮಾನ್ ಸ‌ಅದಿ ಪಟ್ಟೋರಿ, ಅಶ್ರಫ್ ಸ‌ಅದಿ ಮಲ್ಲೂರು, ಉಳ್ಳಾಲ ದರ್ಗಾ ಅಧ್ಯಕ್ಷ ಯು‌ಎಸ್ ಹಂಝ, ಇಸ್ಹಾಕ್ ಝುಹ್‌ರಿ ದೇರಳಕಟ್ಟೆ, ದ.ಕ. ,ರಾಜರಾಜೇಶ್ವರಿ ದೇವಸ್ಥಾನದ ಅಧ್ಯಕ್ಷ ಚಂದ್ರಹಾಸ ಕೊಟ್ಟಾರಿ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ ಉಳ್ಳಾಲ್, ಸೋಮೇಶ್ವರ ಗ್ರಾ.ಪಂ. ಅಧ್ಯಕ್ಷ ರಾಜೇಶ್ ಉಚ್ಚಿಲ, ಭಾರತೀಯ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಹೈದರ್ ಪರ್ತಿಪ್ಪಾಡಿ, ಎನೆಪೋಯ ವಿವಿ ಕುಲಾಧಿಪತಿ ಅಬ್ದುಲ್ಲ ಕುಂಞಿ, ವಕ್ಪ್‌ಬೋರ್ಡ್‌ನ ಜಿಲ್ಲಾಧ್ಯಕ್ಷ ರಶೀದ್ ಹಾಜಿ, ಉಳ್ಳಾಲ ದರ್ಗಾ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಹನೀಫ್ ಹಾಜಿ, ಏಷ್ಯನ್ ಬಾವ ಹಾಜಿ, ಎಸ್‌ವೈ‌ಎಸ್ ಮುಡಿಪು ಸೆಂಟರ್ ಅಧ್ಯಕ್ಷ ಎಸ್.ಕೆ ಖಾದರ್ ಹಾಜಿ, ಇಸ್ಲಾಮಿಕ್ ಕಲ್ಚರಲ್ ಸೆಂಟರ್‌ನ ಕಾರ್ಯದರ್ಶಿ ಮುಮ್ತಾಝ್ ಅಲಿ ಕೃಷ್ಣಾಪುರ, ಜಿ.ಪಂ. ಸದಸ್ಯ ಎನ್.ಎಸ್ ಕರೀಂ, ಅಬ್ದುಲ್ ಅಝೀಝ್ ಹಾಜಿ,

ಟಿಪ್ಪು ಸುಲ್ತಾನ್ ಕಾಲೇಜಿನ ಫ್ರಿನ್ಸಿಪಾಲ್ ಎಂ.ಎಚ್.ಮಲಾರ್ ಅತಿಥಿಗಳನ್ನು ಸ್ವಾಗತಿಸಿದರು.ಅಹ್ಮದ್ ಪುತ್ತುಬಾವ ಧನ್ಯವಾದ ಸಮರ್ಪಿಸಿದರು.

Write A Comment