ರಾಷ್ಟ್ರೀಯ

ಸಲ್ವಿಂದರ್ ಸಿಂಗ್ ಮನೆಗೆ ಎನ್​ಐಎ ಅಧಿಕಾರಿಗಳ ತಂಡ

Pinterest LinkedIn Tumblr

3vಅಮೃತಸರ: ಗುರುದಾಸಪುರ ಎಸ್​ಪಿ ಸಲ್ವಿಂದರ್ ಸಿಂಗ್ ಅವರ ವಿಚಾರಣೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ) ತೀವ್ರಗೊಳಿಸಿದೆ. ಎನ್​ಐಎ ತಂಡ ಗುರುವಾರ ಅಮೃತಸರದಲ್ಲಿರುವ ಸಲ್ವಿಂದರ್ ಅವರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ.

ಎನ್​ಐಎ ಅಧಿಕಾರಿಗಳು ಪಂಜಾಬ್​ನ ವಿವಿಧ ಭಾಗಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದೆ.

ಎನ್​ಐಎ ದೆಹಲಿಯ ಕೇಂದ್ರ ಕಚೇರಿಯಲ್ಲಿ ಸಲ್ವಿಂದರ್ ಸಿಂಗ್ ವಿಚಾರಣೆಯನ್ನು ಮುಂದುವರೆಸಿದ್ದು, ಗುರುವಾರ ಸಹ ಸಲ್ವಿಂದರ್ ಸಿಂಗ್ ವಿಚಾರಣೆಗೆ ಹಾಜರಾಗಿದ್ದಾರೆ. ಪಠಾಣ್​ಕೋಟ್ ವಾಯುನೆಲೆಯ ಮೇಲೆ ಉಗ್ರರು ದಾಳಿ ನಡೆಸಿದ ಘಟನೆ ಸಂಬಂಧ ಸಲ್ವಿಂದರ್ ಸಿಂಗ್ ಅವರ ವಿಚಾರಣೆ ನಡೆಸಲಾಗುತ್ತಿದೆ. ಸಲ್ವಿಂದರ್ ಪದೇ ಪದೇ ಹೇಳಿಕೆ ಬದಲಿಸುತ್ತಿರುವ ಕಾರಣ ಸುಳ್ಳು ಪತ್ತೆ ಪರೀಕ್ಷೆ ಸಹ ಒಳಪಡಿಸಲಾಗಿದೆ.

Write A Comment