ರಾಷ್ಟ್ರೀಯ

ಇಂಡಿಗೋ ವಿಮಾನದಲ್ಲಿ ‘ಆಸನ ಮೋಜು’ , 70 ಮಂದಿಗೆ ಅರ್ಧಚಂದ್ರ

Pinterest LinkedIn Tumblr

indigo-webಹೈದರಾಬಾದ್: ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಯಪುರಕ್ಕೆ ಹೊರಟ ಇಂಡಿಗೋ ವಿಮಾನದಿಂದ ಸುಮಾರು 70 ಪ್ರಯಾಣಿಕರನ್ನು ‘ಅಶಿಸ್ತಿನ ವರ್ತನೆ’ಗಾಗಿ ವಿಮಾನದಿಂದ ಕೆಳಗಿಳಿಸಿದ ಘಟನೆ ಶುಕ್ರವಾರ ರಾತ್ರಿ ಘಟಿಸಿದೆ.

ಆಸನ ಬದಲಾವಣೆ ವಿಚಾರದಲ್ಲಿ ಕೆಲವು ಪ್ರಯಾಣಿಕರು ಮತ್ತು ಸಿಬ್ಬಂದಿ ಮಧ್ಯೆ ಆರಂಭವಾದ ಮಾತಿನ ಚಕಮಕಿ ಕೊನೆಗೆ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸುವುದರೊಂದಿಗೆ ಪರ್ಯವಸಾನಗೊಂಡಿತು. ‘ಅಶಿಸ್ತಿನ ವರ್ತನೆ’ ತೋರಿದ್ದಕ್ಕಾಗಿ ಸುಮಾರು 70 ಪ್ರಯಾಣಿಕರನ್ನು ವಿಮಾನದಿಂದ ಕೆಳಕ್ಕಿಳಿಸಲಾಯಿತು ಎಂದು ಏರ್​ಲೈನ್ಸ್ ಹೇಳಿದ್ದರೆ, ಸಿಬ್ಬಂದಿ ಪ್ರಯಾಣಿಕರಿಗೆ ಕಿರುಕುಳ ನೀಡಿದರು ಎಂದು ಆಪಾದಿಸಿ ಪ್ರಯಾಣಿಕರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ರಾತ್ರಿ 8.30ರಿಂದ 9ರ ನಡುವಣ ವೇಳೆಯಲ್ಲಿ ಈ ಘಟನೆ ಘಟಿಸಿದೆ. ಕೆಲವು ಪ್ರಯಾಣಿಕರು ತಮ್ಮ ತಮ್ಮೊಳಗೆ ಆಸನ ಬದಲಾಯಿಸಿಕೊಳ್ಳುತ್ತಿದ್ದರು. ಈ ವಿಚಾರವಾಗಿ ಕೆಲವು ಪ್ರಯಾಣಿಕರು ಮತ್ತು ಸಿಬ್ಬಂದಿ ಮಧ್ಯೆ ಮಾತಿನ ಚಕಮಕಿ ನಡೆಯಿತು. ಶಿಸ್ತಿನಿಂದ ವರ್ತಿಸಿ ಸಹಕರಿಸುವಂತೆ ಮನವಿ ಮಾಡಿದರೂ ಈ ಪ್ರಯಾಣಿಕರು ಸಹಕರಿಸಲಿಲ್ಲ. ಹೀಗಾಗಿ ಅವರನ್ನು ವಿಮಾನದಿಂದ ಕೆಳಕ್ಕೆ ಇಳಿಸುವುದು ಅನಿವಾರ್ಯವಾಯಿತು. ಈ ಸಂಬಂಧ ಸ್ಥಳೀಯ ಪೊಲೀಸರಿಗೆ ಮೊದಲ ಮಾಹಿತಿ ವರದಿ ನೀಡಲಾಗಿದೆ ಎಂದು ವಿಮಾನ ನಿಲ್ದಾಣ ಪೊಲೀಸ್ ಇನ್​ಸ್ಪೆಕ್ಟರ್ ಟಿ. ಸುಧಾಕರ ಹೇಳಿದರು.

Write A Comment