ಮಂಗಳೂರು : ಮಂಗಳೂರಿನಲ್ಲಿ ಶನಿವಾರ ಆರಂಭಗೊಂಡ ಜಿಲ್ಲಾ ಕರಾವಳಿ ಉತ್ಸವದ ಹಿನ್ನೆಲೆಯಲ್ಲಿ ಮೆರವಣಿಗೆ ಸಮಿತಿ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅವರ ನೇತ್ರತ್ವದಲ್ಲಿ ಶನಿವಾರ ಸಂಜೆ ಸಾಂಸ್ಕೃತಿಕ ಮೆರವಣಿಗೆ ನಡೆಯಿತು.
ಉದ್ಘಾಟನೆ : ಕದ್ರಿ ಪಾರ್ಕ್‌ನ ಹೊರಾ ಅವರಣದಿಂದ ಆರಂಭಗೊಂಡ ಸಾಂಸ್ಕೃತಿಕ ಮೆರವಣಿಗೆಯನ್ನು ಸಂಗೀತ ನಾಟಕ ಅಕಾಡೆಮಿಯ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು ಹಾಗೂ ಹಿರಿಯ ಯಕ್ಷಗಾನ ಕಲಾವಿದರು ಆಗಿರುವ ಡಾ. ಕೋಳ್ಯೂರು ರಾಮಚಂದ್ರ ರಾವ್ ಅವರು ಉದ್ಘಾಟಿಸಿದರು.
ಮೆರವಣಿಗೆಯು ಕದ್ರಿ ಪಾರ್ಕ ಹೊರಾಂಗಣದಿಂದ ಆಕಾಶವಾಣಿ, ಸರ್ಕಿಟ್ ಹೌಸ್ ಜಂಕ್ಷನ್, ಬಿಜೈ ಬಟ್ಟಗುಡ್ಡ, ಬಿಜೈ ಚರ್ಚ್ ವೃತ್ತ, ಜೈಲ್ ರಸ್ತೆ, ಪಿಯೊ ಮಾಲ್, ಕಾಪುಚಿಂಕ್ ಪ್ರಾದ್ ಚರ್ಚ್, ಸುಬ್ರಹ್ಮಣ್ಯ ಸದನ, ಮಂಗಳೂರು ಜೈಲ್ ಮಾರ್ಗವಾಗಿ ವಿಬ್ರೋಸ್ ಸಂಕೀರ್ಣ, ಶ್ರೀಕೃಷ್ಣ ಸಂಕೀರ್ಣ, ಮಹಾತ್ಮಾಗಾಂಧಿ ರಸ್ತೆ, ಬೆಸೆಂಟ್ ಕಾಲೇಜು, ಕೆನರಾ ಕಾಲೇಜು ಜಂಕ್ಷನ್, ಕೊಡಿಯಾಲ್‌ಬೈಲ್, ಬಲ್ಲಾಲ್‌ಭಾಗ್, ಮಂಗಳೂರು ಮಹಾನಗರ ಪಾಲಿಕೆ, ಲಾಲ್‌ಭಾಗ್ ಮೂಲಕ ಸಾಗಿ ಕರಾವಳಿ ಉತ್ಸವ ಮೈದಾನದಲ್ಲಿ ಸಂಪನ್ನಗೊಂಡಿತ್ತು.
ತಂಡ ಸಂಖ್ಯೆ ಸಾಂಸ್ಕೃತಿಕ ಮೆರವಣಿಗೆಯಲ್ಲಿ ಪಾಲ್ಗೊಂಡ ತಂಡಗಳ ವಿವರ :
1 ಮೈಕ್ ಉಮೇಶ್ + ಮಂಜುಳಾ ಶೆಟ್ಟಿ
2 ಚಂಡೆ ಬಳಗ ಸುನೀಲ್ ಕೊಂಚಾಡಿ
3 ಮಂಗಳವಾದ್ಯ, ಪಕ್ಕೆ ನಿಶಾನೆ, ಕೊಂಬು ಚೆಂಡೆ 1. ಕದ್ರಿ ಶ್ರೀ ಮಂಜನಾಥ ದೇವಸ್ಥಾನ 2. ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ 3. ಪೊಳಲಿ ರಾಜರಾಜೇಶ್ವರಿ ದೇವಸ್ಥಾನ 4. ನಂದಾವರ ಶ್ರೀ ಶಂಕರ ನಾರಾಯಣ ದೇವಸ್ಥಾನ 5. ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ 6. ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನ 7. ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನ 8. ಮಂಗಳಾದೇವಿ ದೇವಸ್ಥಾನ 9. ಶರವು ಮಹಾಗಣಪತಿ ದೇವಸ್ಥಾನ 10. ವೆಂಕಟ್ರಮಣ ದೇವಸ್ಥಾನ, ಮಂಗಳೂರು 11. ಕಾಳಿಕಾಂಬಾ ದೇವಸ್ಥಾನ, ಮಂಗಳೂರು
4 ಜಿಲ್ಲಾ ಪೋಲೀಸ್ ಬ್ಯಾಂಡ್ ಸೆಟ್
5 ಮೈಸೂರು ನಗಾರಿ ಮಂಜು ಮೈಸೂರು ತಂಡ
6 ಉಸ್ತುವಾರಿ ಸಚಿವರು, ಮಹಾಪೌರರು, ಜನ ಪ್ರತಿನಿಧಿಗಳು, ಅಧಿಕಾರಿ ಬಂಧುಗಳು, ಪುರ ಪ್ರಮುಖರು, ಆಢ್ಯ ಗಣ್ಯ ಬಂಧುಗಳು
7 ಕನ್ನಡ ಭುವನೇಶ್ವರಿ ಸ್ತಬ್ಧ ಚಿತ್ರ ಆಯೋಜಕರು- ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ
8 ಕೊಂಬು ವಾದನ, ರಣಕಹಳೆ ಉಮೇಶ್ ಜೋಗಿ ಮತ್ತು ಬಳಗ, ಕದ್ರಿ, ಮಂಗಳೂರು
9 ಜಿ.ಎಸ್.ಬಿ. ಸಾಂಪ್ರದಾಯಿಕ ದಿಬ್ಬಣ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ
10 ಬಣ್ಣದ ಕೊಡೆಗಳು ಗಣಪತಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು
11 ಜಾನಪದ ಗೊಂಬೆ ಬಳಗ ಕೀಲು ಕುದುರೆ ರಮೇಶ್ ಕಲ್ಲಡ್ಕ ಶಿಲ್ಪ ಬಳಗ
12 ಗಜಮೇಳ ಕೊರಲ್ ಕಲಾ ತಂಡ ಕೊಡಿಕಲ್ ಕೆ. ರಮೇಶ್ ನೇತೃತ್ವ
13 ಬ್ರಾಸ್ ಬ್ಯಾಂಡ್ ಸೆಟ್ ರೊನಾಲ್ಡ್ ಡಿಸೋಜ ಬೊಂದೇಲ್, ಮಂಗಳೂರು
14 ಕ್ರೈಸ್ತ ಸಮುದಾಯದ ಸಾಂಪ್ರದಾಯಿಕ ದಿಬ್ಬಣ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ
15 ದಪ್ಪು ಕುಣಿತ ಬ್ಯಾರಿ ಮೀಡಿಯಾ ಮಂಗಳೂರು, ಎಂ.ಜಿ. ರಸ್ತೆ (ಎಂ.ಜಿ. ರಹೀಮ್)
16 ಕೊಲ್ಕಳಿ ಕಾಂಞಗಾಡ್ ಕೋಲ್ ಕಳಿ ತಂಡ, ಕಾಸರಗೋಡು
17 ತಾಲೀಮು ಕಿರಣ್ ಬಜಾಲ್ ತಂಡ, ಮಂಗಳೂರು
18 ಭಾರತ ಸೇವಾದಲ
19 ಸ್ಕಾಟ್ಸ್ ಎಂಡ್ ಗೈಡ್ಸ್
20 ಮರಕಾಲು ಹುಲಿವೇಷ ದೀಪಕ್ ಸುರತ್ಕಲ್ ತಂಡ
21 ಹುಲಿವೇಷ ತಂಡ ಮಾರ್ಕೇಟ್ ರೋಡ್ ಫ್ರೆಂಡ್ಸ್ ಸರ್ಕಲ್, ಮಂಗಳೂರು
22 ನೌಕಾದಳ
23 ಭೂದಳ
24 ವಾಯು ದಳ
25 ವೀರಭದ್ರ ಕುಣಿತ ಪ್ರವೀಣ್, ರಾಮ ನಗರ
26 ಶಾರ್ದೂಲ – ಕರಡಿ ಕುಣಿತ ಗಿರಿಸಿರಿ ಕನ್ಯಾನ ಬಳಗ (ರವಿ ಕನ್ಯಾನ)
27 ಬೇಡರ ಕುಣಿತ ಸುಗಂಧಿ ಹಾವೇರಿ
28 ಗೊರವರ ಕುಣಿತ ರಾಜಶೇಖರ ಮೂರ್ತಿ ಚಾಮರಾಜ ನಗರ
29 ಸಿದ್ಧ ವೇಷ ತಂಡ ಸುಗ್ಗಿ ಜಾನಪದ ಕಲಾ ತಂಡ ಸುಳ್ಯ (ಮಂಜುನಾಥ)
30 ಯಕ್ಷಗಾನ ವೇಷಗಳ ತಂಡ ಮಹಾಲಿಂಗೇಶ್ವರ ಯಕ್ಷಗಾನ ತಂಡ ಪಾಂಡೇಶ್ವರ, ಮಂಗಳೂರು (ಸುಧಾಕರ ಸಾಲ್ಯಾನ್)
31 ಸಿಂಗಾರಿ ಮೇಳ ಸುಬ್ಬಯ್ಯ ಕಟ್ಟೆ ತಂಡ (ಲಕ್ಷ್ಮಣ್ ಪ್ರಭು) ಕಾಸರಗೋಡು
32 ಡೊಳ್ಳು ಕುಣಿತ ಸಾಗರ ರಂಜಿತ್ ಹೊಸಕೊಪ್ಪ, ಸಾಗರ
33 ಜಗ್ಗಳಿಕೆ ದಾರವಾಡ ದೇವರಾಜು ತಂಡ, ದಾರವಾಡ
34 ಕುಡುಬಿ ಗುಂಮ್ಟೆ ವಾದನ ತಂಡ (ಶೇಖರ ಗೌಡ ಸ್ವಾಮಿಲಪದವು)
35 ದುಡಿ ಕುಣಿತ ದುಡಿ ಜಾನಪದ ಕೂಟ (ಚಂದ್ರಶೇಖರ ದರ್ಬೆತಡ್ಕ ಪುತ್ತೂರು)
36 ಡೋಲು ಕೊಳಲು ಕುಣಿತ ಗಿರಿಸಿರಿ ಜಾನಪದ ಕಲಾ ತಂಡ ಕನ್ಯಾನ (ರವೀಂದ್ರ ಕನ್ಯಾನ)
37 ಸಿದ್ಧಿ ಜಾನಪದ ಕುಣಿತ ಸಿದ್ಧಿ ಜಾನಪದ ತಂಡ ಗೊಳ್ಳಾಪುರ, ಯಲ್ಲಾಪುರ (ಶೇಖರ್ ಸಿದ್ಧಿ)
38 ಫಟ್ಟಾ ಕುಣಿತ ಮೇಲಗಿರಿ ಅಯ್ಯ ತಂಡ, ಮಾಗಡಿ
39 ಪೂಜಾ ಕುಣಿತ ರಮೇಶ್ ತಾಳೆಗೌಡನ ದೊಡ್ಡಿ, ರಾಮನಗರ ತಂಡ
40 ಕಂಸಾಳೆ ರೇವಣ್ಣ ಮೈಸೂರು ತಂಡ
41 ಅಗ್ನಿ ಶಾಮಕ ದಳ
42 ಮಹಿಳಾ ವೀರಗಾಸೆ ವೀರಗಾಸೆ ತಂಡ, ಚಿಕ್ಕಮಗಳೂರು
43 ಆಟಿ ಕಳಂಜ ಕರುಣಾಕರ ಗುತ್ತಿಗಾರ್ ಬಳಗ, ಸುಳ್ಯ
44 ಮೇರಾ ಭಾರತ್ ಮಹಾನ್ ತಂಡ ಶಾರದಾ ವಿದ್ಯಾಲಯ, ಕೊಡಿಯಾಲ್‌ಬೈಲ್, ಮಂಗಳೂರು (ದಯಾನಂದ ಕಟೀಲು)
45 ಛತ್ರ ಕುಣಿತ ಜಾನಪದ ಪರಿಷತ್ತು ಕೇರಳ, (ಶ್ರೀನಾಥ್ ಮಾಸ್ಟರ್ ಬದಿಯಡ್ಕ)
46 ಸುಗ್ಗಿ ಕುಣಿತ ಚಂದ್ರಕಾಂತ ಅಂಕೋಲ
47 ಕುದುರೆಮುಖ ಕನ್ನಡ ಕಲಾ ಸಂಘ ದೇಜಪ್ಪ ಬಂಗೇರ, ಮಂಗಳೂರು
48 ಯಕ್ಷಗಾನ ಬೃಹತ್ ಗೊಂಬೆಗಳ ತಂಡ (ರಾಜೀವ ಎಲ್. ಕುಂದರ್, ವಂಶಿಕ ಆರ್ಟ್ಸ್ ಗುರುವಾಯನಕೆರೆ) ಕಾಲೇಜು ವಿದ್ಯಾರ್ಥಿಗಳನ್ನೊಳಗೊಂಡಂತೆ ಸುಮಾರು ಎರಡು ಸಾವಿರ ವಿದ್ಯಾರ್ಥಿಗಳು ವಿವಿಧ ಸಾಮಾಜಿಕ ಚಿಂತನೆಗಳ ಅಭಿವ್ಯಕ್ತ ಪ್ರದರ್ಶನದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ವಿಶೇಷ ಪ್ರದರ್ಶನ :
ಕದ್ರಿ ಪಾರ್ಕ್ ಆವರಣದಲ್ಲಿ ಮಧ್ಯಾಹ್ನ 3.00 ರಿಂದ 4.00ರವರೆಗೆ ಮತ್ತು 5.30ರಿಂದ 7.೦೦ರವರೆಗೆ ಕರಾವಳಿ ಉತ್ಸವ ವಸ್ತು ಪ್ರದರ್ಶನ ಮಂಟಪ ಹೊರ ಆವರಣದಲ್ಲಿ ರಾಜ್ಯದಾದ್ಯಂತದಿಂದ ಬಂದ ಕಲಾ ತಂಡಗಳು ವಿಶೇಷ ಪ್ರದರ್ಶನವನ್ನು ನೀಡಿದರು.
ವಿಶೇಷ ವ್ಯವಸ್ಥೆ : ಎಲ್ಲಾ ಮಕ್ಕಳಿಗೆ, ಮೆರವಣಿಗೆಯಲ್ಲಿ ಭಾಗವಹಿಸಿದ ಎಲ್ಲಾ ಬಂಧುಗಳಿಗೆ ಉಪ್ಪಿಟ್ಟು, ಅವಲಕ್ಕಿ, ಬಾದಾಮಿ ಹಾಲು, ಲಾಡು, ಕಿತ್ತಲೆ, ಕುಡಿಯುವ ನೀರು (ಸಣ್ಣ ಬಾಟಲ್‌ಗಳಲ್ಲಿ), ಮೆರವಣಿಗೆಯ ನಂತರ ಕರಾವಳಿ ಉತ್ಸವ ಮೈದಾನದಲ್ಲಿ ಕಾಫಿ, ಟೀ, ವೆಜ್ ಪಲಾವು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
ಚಿತ್ರ ಹಾಗೂ ವರದಿ : ಸತೀಶ್ ಕಾಪಿಕಾಡ್