ಕನ್ನಡ ವಾರ್ತೆಗಳು

ಓವರ್ ಹೆಡ್ ನೀರಿನ ಟ್ಯಾಂಕಿನಲ್ಲಿ ಪಂಪ್ ಆಪರೇಟರ್ ಶವ ಪತ್ತೆ.

Pinterest LinkedIn Tumblr

water_tank_hebri

ಮಂಗಳೂರು, ಜ.27: ಬಜ್ಪೆಯ ಶಾಂತಿಗುಡ್ಡೆಯ ಎಂಎಸ್‌ಇಝಡ್ ಸೈಟ್ ನಲ್ಲಿ ಪಂಪು ಆಪರೇಟ್ ಆಗಿದ್ದ ಕಳವಾರು ನಿವಾಸಿಯೋರ್ವರ ಶವವು ನಿನ್ನೆ ಓವರ್ ಹೆಡ್ ನೀರಿನ ಟ್ಯಾಂಕಿನಲ್ಲಿ ಪತ್ತೆಯಾಗಿದ್ದು, ಇದು ಆತ್ಮಹತ್ಯೆಯೋ ಆಕಸ್ಮಿಕ ಸಾವೇ ಎನ್ನುವುದು ಇನ್ನಷ್ಟೇ ದೃಢಪಡಬೇಕಾಗಿದೆ.

ಕಳವಾರು ನಿವಾಸಿ ಸದಾಶಿವ ಶೆಟ್ಟಿ (50) ಮೃತ ವ್ಯಕ್ತಿ. ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಪುತ್ತೂರಿನಲ್ಲಿ ವಾಸವಾಗಿದ್ದಾರೆ. ಎಂಎಸ್‌ಇಝಡ್ ಕಾಲನಿಗೆ ನೀರು ಪೂರೈಕೆಗಾಗಿ ಒಂದು ವರ್ಷದ ಹಿಂದಷ್ಟೇ ಎರಡು ಲ ಲೀ ಸಾಮರ್ಥ್ಯದ ಓವರ್ ಹೆಡ್ ನೀರಿನ ಟ್ಯಾಂಕ್ ನಿರ್ಮಾಣಗೊಂಡಿದ್ದು, ಕಳವಾರಿನ ಭಾವನ ಮನೆಯಲ್ಲಿ ವಾಸವಿದ್ದ ಸದಾಶಿವ ಶೆಟ್ಟಿ ಕಳೆದ ಮೂರು ತಿಂಗಳಿನಿಂದ ಇಲ್ಲಿ ಪಂಪ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ಕಳೆದ ನಾಲ್ಕು ದಿನಗಳಿಂದ ಕಾಲನಿಗೆ ನೀರು ಪೂರೈಕೆ ಸ್ಥಗಿತಗೊಂಡಿದ್ದು, ಜೊತೆಗೆ ಸದಾಶಿವ ಶೆಟ್ಟಿ ಕೂಡ ಕಾಣೆಯಾಗಿದ್ದರು. ಅವರೂ ಒಮ್ಮೊಮ್ಮೆ ಹೇಳದೇ ಕೇಳದೆ ೩-೪ ದಿನಗಳ ಕಾಲ ಎಲ್ಲಾದರೂ ಹೋಗುತ್ತಿದ್ದ ರಿಂದ ಭಾವನ ಮನೆಯವರೂ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.

ನಿನ್ನೆ ಓವರ್ ಹೆಡ್ ಟ್ಯಾಂಕಿನ ಏಣಿಯ ಬಳಿ ಒಂದು ಜೊತೆ ಚಪ್ಪಲಿಗಳು ಕಂಡು ಬಂದಿದ್ದು, ಕುತೂಹಲಗೊಂಡ ಸ್ಥಳೀಯ ರು ಏಣಿಯ ಮೂಲಕ ಟ್ಯಾಂಕಿನ ಮೇಲೆ ಹತ್ತಿ ಪರಿಶೀಲಿಸಿದಾಗ ನೀರಿನಲ್ಲಿ ತೇಲುತ್ತಿದ್ದ ಸದಾಶಿವ ಶೆಟ್ಟಿಯವರ ಶವ ಪತ್ತೆಯಾಗಿದೆ. ಶವ ಕೊಳೆತಿದ್ದು, ಮೂರು ದಿನಗಳ ಹಿಂದೆಯೇ ಸಾವು ಸಂಭವಿಸಿದೆ ಎನ್ನಲಾಗಿದೆ. ಸದಾಶಿವ ಟ್ಯಾಂಕಿನಲ್ಲಿ ನೀರಿನ ಮಟ್ಟವನ್ನು ನೋಡಲು ತೆರಳಿದಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿರಬಹುದೇ ಅಥವಾ ತಾನಾಗಿಯೇ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿ ದ್ದಾರೆಯೇ ಎಂಬ ಬಗ್ಗೆ ಗೊಂದಲಗಳಿದ್ದು, ತನಿಖೆಯ ನಂತರವೇ ಸಾವಿಗೆ ನಿಖರ ಕಾರಣ ಗೊತ್ತಾಗಬೇಕಾಗಿದೆ. ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment