ಲಾಸ್ ಏಂಜೆಲಿಸ್: ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಕ್ರಮ್ ಯೋಗ ಸಂಸ್ಥಾಪಕ, ಯೋಗ ಗುರು ವಿಕ್ರಮ್ ಚೌಧರಿ ಅವರಿಗೆ ಮೀನಾಕ್ಷಿ ಜಾಫಾ-ಬೊಡ್ಡೆನ್ ಅವರಿಗೆ 6.78 ಕೋಟಿ ರುಪಾಯಿ ದಂಡ ತೆರುವಂತೆ ಕೋರ್ಟ್ ಆದೇಶಿಸಿದೆ.
2011ರಲ್ಲಿ ಕಾನೂನು ಸಮಾಲೋಚಕರಾಗಿ ನೇಮಕಗೊಂಡಿದ್ದ ಮೀನಾಕ್ಷಿ ಜಾಫಾ-ಬೊಡ್ಡೆನ್ ಅವರು ಚೌಧರಿ ಅವರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಲ್ಲದೆ ಅನ್ಯಾಯವಾಗಿ ಉದ್ಯೋಗದಿಂದ ವಜಾ ಮಾಡಿದ್ದಾರೆ ಎಂದು ನ್ಯಾಯಾಲಯಕ್ಕೆ ದೂರು ನೀಡಿದ್ದರು ಎಂದು ಖಾಸಗಿ ಪತ್ರಿಕೆಯೊಂದು ವರದಿ ಮಾಡಿದೆ.
ಜನವರಿ 26ರಂದು ವಿಕ್ರಮ್ ಸಿಂಗ್ ವಿರುದ್ಧದ ವಂಚನೆ, ದುರುದ್ದೇಶಪೂರಿತ ದಮನಕಾರಿ ವರ್ತನೆಗಳು ಸಾಬೀತಾಗಿರುವುದಾಗಿ ನ್ಯಾಯಾಧೀಶರು ಈ ತೀರ್ಪು ನೀಡಿದ್ದಾರೆ.
ಯೋಗ ವಿದ್ಯಾರ್ಥಿನಿಯೊಬ್ಬರು ತಮ್ಮ ವಿರುದ್ಧ ಚೌಧರಿ ಅವರಿಂದ ಅತ್ಯಾಚಾರ ನಡೆದಿದೆ ಎಂಬುದಾಗಿ ಪ್ರತಿಪಾದಿಸಿದ್ದ ಪ್ರಕರಣ ಬಗ್ಗೆ ತನಿಖೇ ನಡೆಸಿದ್ದಕ್ಕಾಗಿ 2013ರಲ್ಲಿ ತಮ್ಮ ವಿರುದ್ಧ ಕಿಡಿಕಾರಲಾಗಿತ್ತು ಎಂದೂ ಜಾಫಾ –ಬೊಡ್ಡೆನ್ ಆಪಾದಿಸಿದ್ದರು. ಲೈಂಗಿಕ ದುರ್ವರ್ತನೆಗಾಗಿ ‘ಹಾಟ್ ಯೋಗ ಗುರು’ ಚೌಧರಿ ವಿರುದ್ಧ ಈ ಹಿಂದೆ ಆರು ಮಂದಿ ಮಹಿಳೆಯರು ದೂರು ನೀಡಿದ್ದರು.