ಮಂಗಳೂರು,ಜ.28 : ಗುರುವಾರ ಗೋಧೂಳಿ ಮುಹೂರ್ತದಲ್ಲಿ ಹರಿದ್ವಾರದ ವ್ಯಾಸಾಶ್ರಮದಲ್ಲಿ ನಡೆದ ವೈಭವೋಪೇತ ಸಮಾರಂಭದಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ
ಯವರ ಪಟ್ಟಾಭಿಷೇಕ ಕಾರ್ಯಕ್ರಮ ನಡೆಯಿತು.
ತಮ್ಮ ಜೀವನದಲ್ಲಿ ಒಂದು ಬಾರಿ ಮಾತ್ರ ಸಿಗುವ ಭಾಗ್ಯವನ್ನು ಕಣ್ತುಂಬಾ ನೋಡಿಕೊಳ್ಳುವ ತವಕದಿಂದ ಕರಾವಳಿ ಕರ್ನಾಟಕ ಸೇರಿದಂತೆ ರಾಜ್ಯ, ರಾಷ್ಟ್ರ ಮತ್ತು ವಿದೇಶದಲ್ಲಿ ನೆಲೆಸಿರುವ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದವರು ತಂಡೋಪತಂಡವಾಗಿ ಉತ್ತರಾಖಂಡ ರಾಜ್ಯದ ಹರಿದ್ವಾರಕ್ಕೆ ಆಗಮಿಸಿದ್ದರು.
ಕೊರೆಯುವ ಚಳಿಯ ನಡುವೆಯೂ ಜನವರಿ 26 ರಿಂದ 28 ರ ತನಕ ಪ್ರಾತ:ಕಾಲದಿಂದ ಮಧ್ಯರಾತ್ರಿಯ ತನಕ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಹರಿಗುರು ಕೃಪೆಗೆ ಪಾತ್ರರಾದರು. ಇವರೆಗೆ ಶ್ರೀ ಕಾಶೀಮಠಾಧೀಶರಾಗಿದ್ದ ಶ್ರೀಮದ್ ಸುಧೀಂದ್ರ ತೀರ್ಥ ಶ್ರೀಪಾದರು ಮಹಾಪ್ರಸ್ಥಾನಗೈದ ಹಿನ್ನೆಲೆಯಲ್ಲಿ ಅವರ ಪಟ್ಟಶಿಷ್ಯರಾಗಿದ್ದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಪೀಠಾರೋಹಣಗೈದರು.
ಜನವರಿ 28 ರಂದು ಬೆಳಿಗ್ಗೆ ನೈರ್ಮಲ್ಯ ವಿರ್ಸಜನೆ, ಮಠದ ಆರಾಧ್ಯ ಮೂರ್ತಿಗಳಿಗೆ ಅಭಿಷೇಕ, ವೃಂದಾವನಕ್ಕೆ ಅಭಿಷೇಕ, ವೃಂದಾವನದಲ್ಲಿ ಸ್ವಾಮೀಜಿಗಳಿಂದ ಗಂಧ ಪ್ರಸಾದ ವಿತರಣೆ, ವ್ಯಾಸಾಶ್ರಮದ ಆವರಣದಲ್ಲಿ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಭಾವಚಿತ್ರ ಇಟ್ಟು ಶೋಭಾಯಾತ್ರೆ, ಅಪರಾಹ್ನ ಪೂಜೆ, ಮಧ್ಯಾಹ್ನ ಪೂಜೆ ಮತ್ತು ಸಮಾರಾಧನೆ ನಡೆಯಿತು. ಶ್ರೀಗಳ ಆರಾಧನ ಮಹೋತ್ಸವದಂದು ಕೇರಳ ಸರಕಾರದ ಪರವಾಗಿ ಅಲ್ಲಿನ ಶಾಸಕರಾದ ಐಬಿ ಹೀಡನ್, ಡೊಮಿನಿಕ್ ಅವರು ಭಾಗವಹಿಸಿದರು. ಕೇಂದ್ರ ಸರಕಾರದ ಪರವಾಗಿ ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು ಅವರು ಭಾಗವಹಿಸಿದರು.
ಚಿತ್ರ : ಮಂಜು ನೀರೆಶ್ವಾಲ್ಲ್ಯ