ಕನ್ನಡ ವಾರ್ತೆಗಳು

ಮಂಗಳೂರಿನಲ್ಲಿ ಸಹಬಾಳ್ವೆ ಸಾಗರ ಸಮಾವೇಶ.

Pinterest LinkedIn Tumblr

Twnhall_sahablve_sagara_1

ಮಂಗಳೂರು,ಜ.30: ಒಂದು ಸಿದ್ದಾಂತದ ಬದ್ದತೆಯ ವಿಷಯ ಬಂದಾಗ ಮನೆಯಲ್ಲಿ ಕೂತು ಅಕ್ಷರದಲ್ಲಿ ಸಿದ್ದಾಂತ ಹೇಳುವುದು ಸುಲಭ. ಅದು ಬೇಕಾದುದೇ ಆದರೆ ಸಾಮಾಜಿಕ ಕ್ರಿಯಾಶೀಲವಾಗಿ ಸಿದ್ದಾಂತವನ್ನು ಬಿಟ್ಟುಕೊಡದೇ ಸಮಕಾಲೀನ ಸಮಸ್ಯೆಗಳಗೆ ಸ್ಪಂದಿಸುವುದು ಹೆಚ್ಚು ಮುಖ್ಯವಾದುದು. ಇದನ್ನು ಕರ್ನಾಟಕ ಕೋಮುಸೌಹಾರ್ದ ವೇದಿಕೆ ಮಾಡುತ್ತಿರುವುದು ಬಹಳ ಮುಖ್ಯವಾದುದು ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ಹೇಳಿದರು.

ಅವರು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಕೇಂದ್ರ ಸಮಿತಿಯು ಮಂಗಳೂರಿನ ಟೌನ್ ಹಾಲ್ ಸಿರಿ ವೇದಿಕೆಯಲ್ಲಿ ವಿವಿಧ ಧರ್ಮ, ಜಾತಿ, ಸಿದ್ದಾಂತ, ಸಂಸ್ಕೃತಿ, ಭಾಷೆಗಳು ಸಂಗಮಿಸುವ ಸಹಬಾಳ್ವೆ ಸಾಗರ ರಾಷ್ಟ್ರೀಯ ಸಮಾವೇಶವನ್ನು ಉದ್ಘಾಟಸಿ ಮಾತನಾಡಿದರು.

ನಮ್ಮ ನಾಡಿನ ಚಿಂತಕರು, ಪ್ರಜ್ಞಾವಂತರು ಕೋಮು ಸೌಹಾರ್ದ ವೇದಿಕೆಯನ್ನು ಅಭಿನಂದಿಸಬೇಕು. ಸೈದ್ದಾಂತಿಕ ಸೃಜನಶೀಲತೆಯನ್ನು ನಾವು ಕಾಪಾಡಿಕೊಳ್ಳಬೇಕು. ಚಲನಶೀಲ ಪ್ರಕ್ರಿಯೆ ಈ ವೇದಿಕೆಯಲ್ಲಿ ನಡೆಯುತ್ತಿದೆ. ಈ ದಿನ ವಿಶೇಷವಾದ ದಿನ ಗಾಂಧಿ ಹತ್ಯೆಯಾದ ದಿನ. ಪ್ರಗತಿಪರರಿಗೂ ಗಾಂಧಿಗೂ ಮುಖಾಮುಖಿ ಇದೆ. ಪ್ರಗತಿಪರ ಸಿದ್ದಾಂತ ನಂಬಿರುವವರ ನಡುವೆ ಭಿನ್ನಾಬಿಪ್ರಾಯವಿದ್ದರೂ ಗುರಿಯಲ್ಲಿ ಸಾಮಾತ್ಯೆಯಿದೆ.

Twnhall_sahablve_sagara_2 Twnhall_sahablve_sagara_3 Twnhall_sahablve_sagara_4 Twnhall_sahablve_sagara_5 Twnhall_sahablve_sagara_6 Twnhall_sahablve_sagara_7 Twnhall_sahablve_sagara_8 Twnhall_sahablve_sagara_9 Twnhall_sahablve_sagara_10 Twnhall_sahablve_sagara_11 Twnhall_sahablve_sagara_12 Twnhall_sahablve_sagara_13 Twnhall_sahablve_sagara_14 Twnhall_sahablve_sagara_15 Twnhall_sahablve_sagara_16 Twnhall_sahablve_sagara_17 Twnhall_sahablve_sagara_18 Twnhall_sahablve_sagara_19 Twnhall_sahablve_sagara_20 Twnhall_sahablve_sagara_21 Twnhall_sahablve_sagara_22 Twnhall_sahablve_sagara_23 Twnhall_sahablve_sagara_24 Twnhall_sahablve_sagara_26

ಇನ್ನೊಂದು ರೋಹಿತ್ ವೇಮಲನ ಆತ್ಮಹತ್ಯೆ. ಒಂದು ಹತ್ಯೆ ಇನ್ನೊಂದು ಆತ್ಮಹತ್ಯೆ. ಇವೆರಡನ್ನು ಒಂದೇ ಸಿದ್ದಾಂತದ ಕೋಮುವಾದಿಗಳು ಮಾಡಿದ್ದಾರೆ. ಗಾಂಧಿ ಕೊಲ್ಲಲ್ಲು ಗೋಡ್ಸೆ ಕೊಡುವ ಕಾರಣ ಈಗಿದೆ. ಗಾಂಧಿ ಮುಸ್ಲಿಂರ ಪರವಿರುವ ವ್ಯಕ್ತಿ. ಆತ ಪಾಕಿಸ್ತಾನದ ಪಿತಾಮಹ ಎಂಬುದಾಗಿದೆ ಗೋಡ್ಸೆಯ ಪ್ರತಿಪಾದಕರು ಹೇಳುತ್ತಿದ್ದು ಗೋಡ್ಸೆಯನ್ನು ತಮ್ಮ ನೇತಾರ ಎಂದು ಬಿಂಬಿಸುತ್ತಿದ್ದಾರೆ, ಕ್ರೌರ್ಯದ ದಿನವನ್ನು ಶೌರ್ಯದ ದಿನವೆನ್ನುವ ಅಮಾನವೀಯರು ಜನ್ಮವೆತ್ತಿರುವ ದೇಶ ಇದು. ಗಾಂಧಿಗೂ ನಮಗೂ ಕೆಲವು ತಾತ್ವಿಕ ಭಿನ್ನಾಭಿಪ್ರಾಯಗಳಿವೆ. ಆದರೆ ಹಿಂಸೆ, ಧಾರ್ಮಿಕ ಮೂಲಭೂತತೆಯನ್ನು ಗಾಂಧಿ ವಿರೋಧಿಸುತ್ತಾರೆ. ಅಂಬೇಡ್ಕರ್, ಲೋಹಿಯಾ ಮಾವೋ, ಮಾಕ್ಸ್ ಎಲ್ಲಾರೂ ಸಹ ಮೂಲಭೂತವಾದವನ್ನು ವಿರೋಧಿಸಲು ಬೇಕಾಗುತ್ತಾರೆ. ಸಾಮಾಜಿಕ ಕ್ರಾಂತಿಯಾಗಬೇಕೆಂದು ಬಯಸುವ ನಾವು ಇವರೆಲ್ಲ ಒಟ್ಟಿಗೆ ಕೂತು ಮಾತನಾಡಿ ಎದುರಾಳಿಗಳನ್ನು ಮಾತುಕತೆಗೆ ಕರೆಯಬೇಕಿದೆ. ಭಿನ್ನಾಭಿಪ್ರಾಯವನ್ನು ಹಿನ್ನೆಲಗೆ ಸರಿಸಿ ಪ್ರಗತಿಗಾಗಿ ಒಂದೆಡೆ ಸೇರಬೇಕಿದೆ. ಅಂಬೇಡ್ಕರ್ ಸಮಾನತೆ, ಮಾರ್ಕ್ಸ್ ಲೆನಿನ್, ಮಾವೋರವರ ಅಗತ್ಯಗಳನ್ನು ಒಂದೆಡೆ ತರಬೇಕಿದೆ ಎಂದರು.

ಈ ದೇಶದಲ್ಲಿ ಹೆಚ್ಚು ಶೋಷಣೆಗೆ ಒಳಗಾದವರು ದೇವರು ಮಾತ್ರ. ಅವನು ಅವಳ (ದೇವರ) ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ನಾನು ದೇವರಿದ್ದಾನೆ ಎಂದು ನಂಬುವುದಿಲ್ಲ. ಬಂಡವಾಳವನ್ನೇ ದೇವರು ಎಂದು ನಂಬಿದ್ದಾರೆ. ಬಂಡವಾಳ ಭಕ್ತನಾಗಿ ಬರಬೇಕಿತ್ತು. ಅವನಿಗಾಗಿ ಜನರನ್ನು ಬೆಂಗಳೂರಿಂದ ಹೊರಗಿಡುತ್ತಿದ್ದಾರೆ. ಗಾಂಧಿ, ವಿವೇಕ,ಅಂಬೇಡ್ಕರ್, ಮಾರ್ಕ್ಸ್, ಮಾವೋ ಯಾಕೆ ಪ್ರಸ್ತುತ ಜನರನ್ನು ಮೌಡ್ಯದ ಹೆಸರಿನಲ್ಲಿ ದೂರ ಮಾಡಿ ಏನು ಮಾಡಲು ಸಾಧ್ಯವಿಲ್ಲ. ಗಾಂಧಿ ನನ್ನ ಕನಸಿನ ಭಾರತ ಹಿಂದುತ್ವ, ಒಂದೇ ಬೆಳೆಯುವ ಭಾರತವಲ್ಲ ಎಲ್ಲಾವೂ ಬೆಳೆಯಬೇಕು ಎಂದಿದ್ದರು. ವಿವೇಕಾನಂದ – ನಾವು ಕ್ರೈಸ್ತರನ್ನು, ಮುಸ್ಲಿಂರನ್ನು ಗೆಲ್ಲುವತನಕ ಅವರಿಗಾಗಿ ಮಸೀದಿ ಚರ್ಚ್ ಗಳನ್ನು ಕಟ್ಟಬೇಕು. ಧರ್ಮವು ದೇವಾಸ್ಥಾನ ಕಟ್ಟುವುದರಲ್ಲಿಲ್ಲ. ನಾವು ಮಾನವವರ್ಗವನ್ನು ಎಲ್ಲಿ ವೇದ ಬೈಬಲ್ ಕುರಾನ್ ಗಳಿಲ್ಲವೋ ಅಲ್ಲಿಗೆ ಕರೆದುಕೊಂಡು ಹೋಗಬೇಕು ಅದು ವೇದ ಬೈಬಲ್ ಕುರಾನ್ ಗಳಿಂದಲೆ ಸಾಧ್ಯ ಭಾರತ ಹಿಂದೂ ಮೆದಳು ಮತ್ತು ಇಸ್ಲಾಂ ದೇಹವನ್ನು ಹೊಂದಿರಬೇಕೆಂದು ಹೇಳಿದರು.

ಬಲಪಂಥೀಯರು ಮತ್ತು ಎಡಪಂಥಿಯರೆಲ್ಲರೂ ಮೊದಲು ನಾವು ಜೀವಪಂಥಿಯರಾಗಬೇಕಿದೆ. ಧರ್ಮದ ನೆಪದಲ್ಲಿ ಸರ್ಕಾರ ಮತ್ತು ರಾಜಕಾರಣಿಗಳ ಅಪವ್ಯಾಖ್ಯಾನವನ್ನು ತಡೆಗಟ್ಟುವುದೇ ಸಹಬಾಳ್ವೆಯ ಸಾಗರದ ಆಶಯವಾಗಲಿ. ತೋಳು ಚಾಚುವ ಕಾಲ ಇದು ಬದಲಿಗೆ ತೊಡೆ ತಟ್ಟುವ ಕಾಲವಲ್ಲ ಎಂದು ನುಡಿದರು

ಉದ್ಘಾಟನಾ ಗೋಷ್ಠಿಯ ಅಧ್ಯಕ್ಷತೆಯನ್ನು ಸುರೇಶ್ ಭಟ್ ಬಾಕ್ರಬೈಲು ವಹಿಸಿದ್ದರು. ರಾಬಿನ್ ಕ್ರಿಸ್ಟೋಫರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಕೊರಲ್ ಕಲಾ ತಂಡ ಕುಡ್ಲ ಇವರಿಂದ ಡೋಲು ವಾದನ ಪ್ರದರ್ಶನ ನಡೆಯಿತು

Write A Comment