ಕನ್ನಡ ವಾರ್ತೆಗಳು

ಬಂಟ್ವಾಳ : ಮರ ಕಡಿಯುವಾಗ ಕೊಂಬೆ ತಲೆಗೆ ಬಿದ್ದು ಯುವಕ ಸಾವು

Pinterest LinkedIn Tumblr

Mithun_died_bantwal

ಬಂಟ್ವಾಳ : ಮರವೊಂದನ್ನು ಕಡಿಯುವ ವೇಳೆ ಅದರ ದೊಡ್ಡ ಕೊಂಬೆಯೊಂದು ತುಂಡಾಗಿ ತಲೆಗೆ ಬಿದ್ದು ಯುವಕನೋರ್ವ ಸಾವನ್ನಪ್ಪಿದ ಘಟನೆ ಘಟನೆ ಬಂಟ್ವಾಳ ತಾಲೂಕು ನಾವೂರು ಗ್ರಾಮದಲ್ಲಿ ನಡೆದಿದೆ. ಮೃತ ಯುವಕನನ್ನು ನಾವೂರು ಗ್ರಾಮದ ತಿರ್ತೊಟ್ಟು ನಿವಾಸಿ ಮಿಥುನ್ ಕೊಟ್ಟಾರಿ (26) ಎಂದು ಗುರುತಿಸಲಾಗಿದೆ.

ಮನೆಯ ಆವರಣದಲ್ಲಿರುವ ಬೃಹತ್ ಮರವೊಂದು ಒಣಗಿ ನಿಂತಿದ್ದು, ಅದನ್ನು ಕಡಿಯಲು ನಿರ್ಧರಿಸಿದ್ದ ಅವರು ನೆರವಿಗಾಗಿ ನೆರೆಯಲ್ಲಿ ವಾಸವಾಗಿರುವ ಉಲ್ಲಾಸ್ ಮತ್ತು ಮೋಹನ್‌ರನ್ನು ಕರೆಸಿಕೊಂಡಿದ್ದರು.

ಮಧ್ಯಾಹ್ನ ವೇಳೆ ಉಲ್ಲಾಸ್ ಮತ್ತು ಮೋಹನ್ ಮರವನ್ನು ಕಡಿಯುತ್ತಿದ್ದಾಗ ಮಿಥುನ್ ಸಮೀಪದಲ್ಲಿ ನಿಂತು ಮರಕಡಿಯುವುದನ್ನು ವೀಕ್ಷಿಸುತ್ತಿದ್ದ ವೇಳೆ ಮರದ ಮೇಲಿಂದ ಒಣಗಿದ ಬೃಹತ್ ಕೊಂಬೆಯೊಂದು ಏಕಾಏಕಿ ತುಂಡಾಗಿ ಜಾರಿ ಮಿಥುನ್ ಅವರ ಮೇಲೆ ಬಿದ್ದಿದೆ. ಈ ಸಂದರ್ಭ ಮಿಥುನ್ ತಲೆಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ತಕ್ಷಣ ಅವರನ್ನು ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ದಾರಿ ಮಧ್ಯೆಯೇ ಅಸುನೀಗಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಮೋಹನ್‌ ಅವರು ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Write A Comment