ಮ೦ಗಳೂರು ಫೆ.02: ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಮುಖ್ಯ ಅಂಗಗಳಲ್ಲಿ ಕುಶಲಕರ್ಮಿ ಗ್ರಾಮ ಪ್ರಮುಖವಾಗಿದೆ. ಪಾರಂಪರಿಕ ಕೌಶಲ್ಯಗಳನ್ನು ಉಳಿಸಿ ಕೊಳ್ಳುವ ಹಾಗೂ ಇಂದಿನ ಜನಾಂಗಕ್ಕೆ ಕಲೆ ಮತ್ತು ಕೌಶಲ್ಯವನ್ನು ಪರಿಚಯಿಸುವುದಾಗಿದೆ. ಇಲ್ಲಿನ ವೈಶಿಷ್ಟ್ಯವೆಂದರೆ ಕುಂಬಾರಿಕೆ, ಕಮ್ಮಾರಿಕೆ, ಬಡಗಿತನ, ನೇಕಾರಿಕೆ, ಬೆತ್ತ ಮತ್ತು ಬಿದಿರು ಉತ್ಪನ್ನ, ಮರದ ಕೆತ್ತನೆ, ಎಣ್ಣೆ ಗಾಣ, ಕುಟ್ಟಣದ ಅವಲಕ್ಕಿ, ಪ್ರಾತ್ಯಕ್ಷತಾ ಕೇಂದ್ರ, ಜೇನು ಸಾಕಾಣಿಕೆಗಳನ್ನು ಇಲ್ಲಿನ ಕುಶಲಕರ್ಮಿಗಳು ಈ ಕೌಶಲ್ಯಗಳನ್ನು ನಿರ್ವಹಿಸುತ್ತಾರೆ. ಸಾವಿರಾರು ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರು ಬಂದು ವೀಕ್ಷಿಸುತ್ತಿದ್ದಾರೆ.
ಇಂತಹ ಕೌಶಲ್ಯಗಳಲ್ಲಿ ಒಂದಾದ ಎಣ್ಣೆಗಾಣದ ನಿರ್ವಹಣೆಯ ಪ್ರಾಯೋಜಕತ್ವವನ್ನು ಕರ್ಣಾಟಕ ಬ್ಯಾಂಕ್ ವಹಿಸಿಕೊಂಡಿದೆ. ಪಿಲಿಕುಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗ ಎ. ಬಿ ಇಬ್ರಾಹಿಂ, ಕರ್ನಾಟಕ ಬ್ಯಾಂಕ್‌ನ ಅಧ್ಯಕ್ಷ ಜಯರಾಮ್ ಭಟ್, ಪ್ರಧಾನ ವ್ಯವಸ್ಥಾಪಕ ಎಂ.ಎಸ್ ಮಹಾಬಲೇಶ್ವರ ಭಟ್, ಪ್ರೊ. ವಿವೇಕ್ ರೈ, ಪಿಲಿಕುಲ ಕಾರ್ಯನಿರ್ವಾಹಕ ನಿರ್ದೇಶಕ ಪಿಲಿಕುಳ ಎಸ್. ಎ. ಪ್ರಭಾಕರ ಶರ್ಮ ಮತ್ತಿತರರು ಉಪಸ್ಥಿತರಿದ್ದರು ಎಂದು ಉಪಸ್ಥಿತರಿದ್ದರು ಎಂದು ಪ್ರಕಟಣೆ ತಿಳಿಸಿದೆ.