ತಿರುವನಂತಪುರ: ಕೇರಳದ ಭಾರತೀಯ ಕಮ್ಯನಿಸ್ಟ್ ಪಕ್ಷದ (ಸಿಪಿಐ-ಎಂ) ನಾಯಕ ರಾಘವನ್ ಎಂಬಾತ ಬೀಗ ಹಾಕಿದ್ದ ಮನೆಯಲ್ಲಿ ಕಳುವು ಮಾಡಲು ಯತ್ನಿಸಿದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಾಘವನ್ ಉತ್ತರ ಕೇರಳದ ಕಾಸರಗೋಡು ಜಿಲ್ಲೆಯ ಪ್ರಭಾವಿ ರಾಜಕೀಯ ನಾಯಕನಾಗಿದ್ದ.
ಪೊಲೀಸರ ಪ್ರಕಾರ ಮಹಮ್ಮದ್ ಯೂನುಸ್ ಎಂಬ ಅನಿವಾಸಿ ಭಾರತೀಯನ ಬೀಗ ಹಾಕಿದ ಮನೆಗೆ ಅಕ್ರಮವಾಗಿ ಪ್ರವೇಶಿಸಿದ ರಾಘವನ್ ಕೈಯಲ್ಲಿ ಕಬ್ಬಿಣದ ರಾಡ್ ಹಿಡಿದು ತಲೆಗೆ ಬಟ್ಟೆ ಸುತ್ತಿಕೊಂಡಿದ್ದ ಎಂದಿದ್ದಾರೆ.
ಈ ದೃಶ್ಯಾವಳಿಗಳನ್ನು ಎಲ್ಲೆಡೆ ಬಿಡುಗಡೆ ಮಾಡಿರುವ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ. ಕೇರಳವು ದರೋಡೆಕೋರ ಸ್ವರ್ಗವಾಗಿದ್ದು, ಇಲ್ಲಿ ಅನೇಕ ಬಂಗಲೆಗಳು ಅನಿವಾಸಿ ಭಾರತೀಯರದ್ದಾಗಿದೆ. ವರ್ಷದ ಅನೇಕ ತಿಂಗಳು ಮನೆಗೆ ಬೀಗ ಹಾಕಿರುವುದು ಕಳ್ಳಕಾಕರಿಗೆ ಅನುಕೂಲವಾಗಿದೆ. ಪೊಲೀಸರು ಮನೆಗಳಿಗೆ ಸಿಸಿಟಿವಿ ಹಾಕಿಸಿಕೊಳ್ಳಲು ಎಲ್ಲಾ ಮನೆ ಮಾಲಿಕರಿಗೆ ಸೂಚಿಸಿದ್ದಾರೆ. ಸುದ್ದಿ ಬಹಿರಂಗಗೊಳ್ಳುತ್ತಿದ್ದಂತೆಯೇ ರಾಘವನ್ನನ್ನು ಪಕ್ಷವು ಉಚ್ಚಾಟಿಸಿದೆ. ಆತ ತಲೆ ತಲೆತಪ್ಪಿಸಿಕೊಂಡಿದ್ದಾನೆ.