ಮನೋರಂಜನೆ

ಹೇಗಿದ್ದ ಹೇಗಾದ ಗೊತ್ತಾ;ಸರಬ್ಜಿತ್ ಸಿನಿಮಾಕ್ಕಾಗಿ ನಟನ ರಿಯಲ್ ಕಸರತ್ತು

Pinterest LinkedIn Tumblr

Hoodaಮುಂಬೈ: ತಮ್ಮ ಸಿನಿಮಾ ಯಶಸ್ವಿಯಾಗಬೇಕು, ಸಿನಿಮಾದಲ್ಲಿ ವಿಭಿನ್ನವಾಗಿ ಕಾಣಿಸಬೇಕು, ಸಹಜವಾಗಿ ಮೂಡಿಬರಬೇಕು ಎಂಬ ಹಪಾಹಪಿ ನಟ, ನಟಿಯರಲ್ಲಿ ಸಹಜ. ಸಿನಿಮಾಕ್ಕಾಗಿ ಸಿಕ್ಸ್ ಪ್ಯಾಕ್, ತೂಕ ಹೆಚ್ಚಿಸಿಕೊಳ್ಳೋದು, ಗಡ್ಡ ಬಿಡೋದು, ರಿಯಲ್ ಸ್ಟಂಟ್ ಮಾಡೋದನ್ನು ಓದಿರುತ್ತೀರಿ. ಆದರೆ ಒಬ್ಬ ನಟ ಪಾತ್ರಕ್ಕೆ ಜೀವ ಹೀಗೂ ಜೀವ ತುಂಬಿಸಬಲ್ಲ ಎಂಬುದಕ್ಕೆ ನಟ ರಣದೀಪ್ ಹೂಡಾ ತಾಜಾ ಉದಾಹರಣೆ. ನೀವು ಹೂಡಾನ ಪಾತ್ರ ಕಂಡು ಮೂಕವಿಸ್ಮಿತರಾಗ್ತೀರಿ ಎಂಬುದರಲ್ಲಿ ಎರಡು ಮಾತಿಲ್ಲ.

ಹೌದು ಬಾಲಿವುಡ್ ನಲ್ಲಿ ಪಾಕಿಸ್ತಾನದ ಸೆರೆಮನೆಯಲ್ಲಿ ಮೃತಪಟ್ಟ ಭಾರತೀಯ ಖೈದಿ “ಸರಬ್‌ಜಿತ್‌’ ಜೀವನಚರಿತ್ರೆ ಆಧಾರಿತ ಸಿನಿಮಾವನ್ನು ಓಮುಂಗ್ ಕುಮಾರ್ ನಿರ್ದೇಶಿಸುತ್ತಿದ್ದಾರೆ.

ಸಿನಿಮಾದಲ್ಲಿ ನಟ ರಣದೀಪ್ ಹೂಡಾ ಸರಬ್ಜಿತ್ ಪಾತ್ರ ರಿಯಲ್ ಮೂಡಿಬರಬೇಕೆಂದು ಕಠಿಣ ಡಯಟ್ ಮೂಲಕ 28 ದಿನಗಳಲ್ಲಿ 18 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಫೋಟೋ ಗಮನಿಸಿದರೆ ಅಬ್ಬಾ…ಎನ್ನುವಂತೆ ಪಾತ್ರಕ್ಕೆ ಜೀವತುಂಬಿರುವುದು ಗಮನಕ್ಕೆ ಬರುತ್ತದೆ. ಆದರೆ ಈ ಲುಕ್ ನ ಎಲ್ಲಾ ಕ್ರೆಡಿಡ್ ನಿರ್ದೇಶಕ ಕುಮಾರ್ ಗೆ ಸಲ್ಲಬೇಕೆಂಬುದು ಹೂಡಾ ಬಿಚ್ಚುಮಾತು.

ಸುಮಾರು 23 ವರ್ಷಗಳ ಕಾಲ ಸರಬ್ಜಿತ್ ಸಿಂಗ್ ಪಾಕಿಸ್ತಾನದ ಜೈಲಿನಲ್ಲಿ ಕಳೆದಿದ್ದರು. ಕೋಮಾಸ್ಥಿತಿಗೆ ತಲುಪಿದ್ದ ಸಿಂಗ್ 2013ರಲ್ಲಿ ವಿಧಿವಶರಾಗಿದ್ದರು. ಇದೀಗ ಜೈಲುಕಂಬಿ ಹಿಂದೆ 23 ವರ್ಷಗಳ ಸುದೀರ್ಘ ಜೀವನ ಸವೆಸಿದ್ದ ಸರಬ್ಜಿತ್ ಕುರಿತ ಸಿನಿಮಾವನ್ನು ಕುಮಾರ್ ನಿರ್ದೇಶಿಸುತ್ತಿದ್ದಾರೆ.

ಸರಬ್ಜಿತ್ ಪಾತ್ರಕ್ಕೆ ಹೀಗೆ, ಹೀಗೀಗೆ ಇರಬೇಕೆಂದು ಮೊದಲೇ ಹೂಡಾಗೆ ಹೇಳಿದ್ದೆ. ಅದರಂತೆ ಹೂಡಾ ಕಠಿಣ ಡಯಟ್ ಮಾಡಿದ್ದರು. ರಣದೀಪ್ ಕೃಶಕಾಯರಾಗಿದ್ದಾರೆ. ಬರೇ ನೀರು ಕುಡಿದೇ ಕೆಲವು ದಿನ ಕಳೆದಿದ್ದರು. ನಿಜಕ್ಕೂ ಹೂಡಾ ನನ್ನ ನಿರೀಕ್ಷೆಯಂತೆ ಪಾತ್ರಕ್ಕೆ ಜೀವತುಂಬಿದ್ದಾರೆ ಎಂದು ನಿರ್ದೇಶಕ ಕುಮಾರ್ ಬಹುಪರಾಕ್ ಹೇಳಿದ್ದಾರೆ.
-ಉದಯವಾಣಿ

Write A Comment