ರಾಷ್ಟ್ರೀಯ

ಎಲ್ಲದಕ್ಕೂ ನೆಪ ಬೇಡ; ಸರ್ಕಾರ ನಡೆಸಿ: ಪ್ರಧಾನಿಗೆ ರಾಹುಲ್ ಪ್ರತಿಕ್ರಿಯೆ

Pinterest LinkedIn Tumblr

rahulನವದೆಹಲಿ: ದೇಶ ಬೆಳೆಸುವುದು ಪ್ರಧಾನಿಮಂತ್ರಿಯವರ ಕೆಲಸವಾಗಿದ್ದು, ನೆಪನೀಡುವುದು ಅವರ ಕೆಲಸವಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಶುಕ್ರವಾರ ಹೇಳಿದ್ದಾರೆ.

ಗಾಂಧಿ ಕುಟುಂಬದ ಕುರಿತಂತೆ ಇತ್ತೀಚೆಗಷ್ಟೇ ಪ್ರಧಾನಿ ಮೋದಿ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿರುವ ರಾಹುಲ್ ಗಾಂಧಿ ಅವರು, ಸರ್ಕಾರ ನಡೆಸುವುದು ಪ್ರಧಾನಿಯವರ ಕೆಲಸವಾಗಿದ್ದು, ಸಬೂಬು ನೀಡುವುದು ಅವರ ಕೆಲಸವಲ್ಲ. ಪ್ರಧಾನಿಯವರು ಅಧಿಕಾರಕ್ಕೆ ಬಂದು 18 ತಿಂಗಳಾಗಿದೆ. ಈ 18 ತಿಂಗಳು ಅವರು ಕ್ಷಮೆಯಾಚಿಸುದೇ ಆಗಿದೆ. ದೇಶದ ಆರ್ಥಿಕತೆ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲವೇಕೆ?…ರೈತರೇಕೆ ತಮ್ಮ ಬಾಕಿ ಹಣವನ್ನು ಪಡೆಯುತ್ತಿಲ್ಲ?…ಕಾರ್ಮಿಕರಿಗೆ ಸಿಗಬೇಕಾದದ್ದೇಕೆ ಅವರಿಗೆ ಸರಿಯಾದ ರೀತಿಯಲ್ಲಿ ಸಿಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ನೆಪವನ್ನು ನೀಡಲಿ ಎಂದು ಭಾರತ ಮೋದಿಯವರನ್ನು ಆಯ್ಕೆ ಮಾಡಿಲ್ಲ. ಭಾರತ ನಾಯಕನನ್ನು ಆಯ್ಕೆ ಮಾಡಿದ್ದಾರೆ. ನಾಯಕರು ನೆಪವನ್ನು ನೀಡಬಾರದು. ಜನರು ಯಾವ ಕಾರಣಕ್ಕೆ ಆಯ್ಕೆ ಮಾಡಿದ್ದಾರೋ ಅದರ ಕೆಲಸವನ್ನು ಅವರು ಮಾಡಬೇಕು. ಮೋದಿಯವರಿಗೆ ಪ್ರಧಾನಮಂತ್ರಿಯವರಿಗಿರುವ ಜವಾಬ್ದಾರಿ ಹಾಗೂ ಕೆಲಸ ಬಗ್ಗೆ ಅರಿವೇ ಇಲ್ಲದಿರುವುದು ನಿಜಕ್ಕೂ ಬೇಸರವಾಗುತ್ತಿದೆ. ಈಗಾಗಲಾದರೂ ಮೋದಿಯವರು ತಮ್ಮ ಜವಾಬ್ದಾರಿಯನ್ನು ಅರಿತು ದೇಶವನ್ನು ಬೆಳಸಬೇಕು ಎಂದು ಹೇಳಿದ್ದಾರೆ.

ಕೆಲವೊಮ್ಮೆ ಕಾಂಗ್ರೆಸ್ ಮೋದಿ ಸರ್ಕಾರ ಬಡ ಜನರು, ಕಾರ್ಮಿಕರು ಹಾಗೂ ರೈತರ ಪರವಾಗಿ ಕೆಲಸ ಮಾಡುತ್ತಿಲ್ಲ ಎಂಬುದರ ಬಗ್ಗೆ ಮಾತನಾಡುತ್ತದೆ. ಆದರೆ ನಿಜಕ್ಕೂ ತಿಳಿಯಬೇಕಿರುವ ವಿಷಯವೆಂದರೆ ನಮಗಿಂತಲೂ ಮೊದಲು ಕೈಗಾರಿಕೋದ್ಯಮಿಗಳು ಅಳುತ್ತಿದ್ದಾರೆ.

ಕೆಲವು ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳು ನಮ್ಮ ಬಳಿ ಬಂದು, ನಮಗಾಗಿ ಮೋದಿಯವರು ಸರ್ಕಾರವನ್ನು ಬೆಳೆಸುತ್ತಿದ್ದಾರೆ. ಆದರೆ, ನಮಗಾಗಿ ಯಾವುದೇ ಕೆಲಸವನ್ನು ಮಾಡುತ್ತಿಲ್ಲ ಎಂದು ಹೇಳಿಕೊಳ್ಳುತ್ತಾರೆ. ಸರ್ಕಾರ ಕೇವಲ ಮೂರು ಅಥವಾ ನಾಲ್ಕು ಬಂಡವಾಳಶಾಹಿ ಸ್ನೇಹಿತರಿಗಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.

ಪಿಸಿಸಿ ಅಧ್ಯಕ್ಷಕರು ಬಿಜೆಪಿಯ ಮುಖ್ಯಮಂತ್ರಿಗಳು, ಮೋದಿಯವರು ಹಾಗೂ ಆರ್ಎಸ್ಎಸ್ ಗಳ ಕುರಿತು ಮಾತನಾಡುತ್ತಿರುತ್ತಾರೆ. ಸರ್ಕಾರದ ನರೇಗಾ ಮತ್ತು ಅರಣ್ಯ ಹಕ್ಕು ಕಾಯ್ದೆಗಳಂತಹ ಯೋಜನೆಗಳನ್ನು ಯಾವ ರೀತಿಯಲ್ಲಿ ನಡೆಸುತ್ತಿದ್ದಾರೆ ಎಂಬುದರ ಬಗ್ಗೆ ಮಾತನಾಡುತ್ತಿರುತ್ತಾರೆ. ಈ ವೇಳೆ ಅಧ್ಯಕ್ಷರೇ ಬಡಜನರಿಗಾಗಿ ಕಾಂಗ್ರೆಸ್ ಜಾರಿಗೆ ತಂದ ಯೋಜನೆಗಳನ್ನು ಬಿಜೆಪಿ ಸರಿಯಾದ ರೀತಿಯಲ್ಲಿ ನಡೆಸುತ್ತಿಲ್ಲ ಎಂದು ಹೇಳಿಕೊಳ್ಳುತ್ತಾರೆ. ಭಾರತದಲ್ಲಿರುವ ರೈತರು ಹಾಗೂ ಕಾರ್ಮಿಕರ ನೋವುಗಳನ್ನು ಸರ್ಕಾರದ ಗಮನಕ್ಕೆ ತರುವ ಸಲುವಾಗಿ ಶೀಘ್ರದಲ್ಲೇ ಕಾಂಗ್ರೆಸ್ ಸರ್ಕಾರದ ಮೇಲೆ ಒತ್ತಡ ಹೇರಲಿದೆ ಎಂದು ಹೇಳಿದ್ದಾರೆ.

Write A Comment