ಕನ್ನಡ ವಾರ್ತೆಗಳು

ಫೆ.12 : ಕುಡ್ಲಕೆಫೆ’ ತುಳು ಚಲನಚಿತ್ರ ಕರಾವಳಿಯಾದ್ಯಂತ ಏಕಕಾಲದಲ್ಲಿ ಬಿಡುಗಡೆ

Pinterest LinkedIn Tumblr

kudla_kefe_meet_1

ಮಂಗಳೂರು,ಫೆ.10: ಯೋಧ ಮೋಷನ್ ಪಿಕ್ಚರ್ಸ್‌ ಲಾಂಛನದಲ್ಲಿ ಸೂರ್ಯ ಮೆನನ್ ನಿರ್ದೇಶನದಲ್ಲಿ ರಂಜನ್ ಶೆಟ್ಟಿ, ಸೂರ್ಯ ಮೆನನ್ ನಿರ್ಮಾಣದಲ್ಲಿ ತಯಾರಾದ ‘ಕುಡ್ಲಕೆಫೆ’ ತುಳು ಚಲನಚಿತ್ರವು ಫೆ.12 ರಂದು ಕರಾವಳಿ ಜಿಲ್ಲಾಯಾದ್ಯಂತ ಏಕಕಾಲದಲ್ಲಿ ತೆರೆಕಾಣಲಿದೆ ಎಂದು ಚಿತ್ರದ ನಿರ್ದೇಶಕ ಸೂರ್ಯ ಮೆನನ್ ತಿಳಿಸಿದ್ದಾರೆ.

ಬುಧವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿನಿಮಾ ಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದ್ದು, ಈ ಸಿನಿಮಾದಲ್ಲಿ ಮೂರು ಹಾಡುಗಳಿವೆ. ಪ್ರಥಮ ಬಾರಿಗೆ ಕಬಡ್ಡಿ ಕ್ರೀಡೆಯ ಕುರಿತು ಕಥೆಯನ್ನು ಅಳವಡಿಸಲಾಗಿದೆ. ಈ ಸಿನಿಮಾದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದ ಕಬಡ್ಡಿ ಆಟಗಾರರು ಅಭಿನಯಿಸಿರುವುದು ಸಿನಿಮಾದ ವಿಶೇಷತೆಯಾಗಿದೆ ಎಂದು ಹೇಳಿದರು.

kudla_kefe_meet_2 kudla_kefe_meet_3 kudla_kefe_meet_4 kudla_kefe_meet_5 kudla_kefe_meet_6

ನಟ ನವೀನ್ ಡಿ ಪಡೀಲ್ ಮಾತನಾಡಿ, ಸಿನಿಮಾ ಬಿಡುಗಡೆಗೆ ಮುನ್ನವೆ ಬೆಂಗಳೂರಿನಲ್ಲಿ ನಡೆದಿರುವ ಅಂತರಾಷ್ಟ್ರೀಯ ಸಿನಿಮೋತ್ಸವದ ವಿಶೇಷ ಪ್ರದರ್ಶನದ ವಿಭಾಗಕ್ಕೆ ಆಯ್ಕೆಗೊಂಡು ಫೆ.3 ರಂದು ಯಶಸ್ವಿ ಪ್ರದರ್ಶನಗೊಂಡು ಕಲಾಭಿಮಾನಿಗಳ ನಿರೀಕ್ಷೆಯನ್ನು ಇನ್ನಷ್ಟು ಇಮ್ಮಡಿಗೊಳಿಸಿದೆ ಎಂದು ಹೇಳಿದರು.

ತಾರಾಗಣದಲ್ಲಿ ಜ್ಯೋತಿಷ್ ಶೆಟ್ಟಿ, ಕುಸಲ್ದರಸೆ ನವೀನ್ ಡಿ.ಪಡೀಲ್, ರಘುಪಾಂಡೇಶ್ವರ, ಅಹಾನಾ ಕುಂಬ್ರಾ, ಶೈನ್ ಶೆಟ್ಟಿ, ಸಂತೋಷ್ ಶೆಟ್ಟಿ, ಸುಧೀರ್ ರಾಜ್ ಉರ್ವ, ಅಶೋಕ್ ಶೆಟ್ಟಿ ಅಂಬ್ಲಮೊಗರು, ಕಿಶೋರ್ ಕೊಟ್ಟಾರಿ, ಬಂಟ್ವಾಳ ಜಯರಾಮಾಚಾರ್, ತಿಮ್ಮಪ್ಪ ಕುಲಾಲ್, ಭವಾನಿ ಶಂಕರ್, ಶಶಿರಾಜ್ ಕಾವೂರು, ಮನೋಜ್ ಪುತ್ತೂರು, ಶ್ರುತಿ ಶೆಟ್ಟಿ, ಅನುಷಾ ಕೋಟ್ಯಾನ್, ಸನಮ್ ಅಮೀನ್, ಕಾರ್ತಿಕ್ ಕೊಟ್ಟಾರಿ, ಸೂರಜ್ ಸನಿಲ್, ನವೀನ್ ಶೆಟ್ಟಿ ಮಿಜಾರ್ ಮೊದಲಾದವರು ಅಭಿನಯಿಸಿದ್ದಾರೆ.

ಈ ಸಿನಿಮಾವನ್ನು ರಂಜನ್ ಶೆಟ್ಟಿ ಮತ್ತು ಸೂರ್ಯ ಮೆನನ್ ನಿರ್ಮಿಸಿದ್ದಾರೆ. ಸಹ ನಿರ್ಮಾಪಕರು ಶಿವಶಂಕರ್ ಮೆನೆನ್, ಕ್ರಿಯೇಟಿವ್ ಪ್ರೊಡ್ಯೂಸರ್ ಕುಡ್ಲ ಸಾಯಿ ಕೃಷ್ಣ, ಛಾಯಾಗ್ರಹಣ ಸಲೀಲ್ ಪಾಠಕ್, ಸಂಗೀತ ನಿರ್ದೇಶನ ಉಮಂಗ್ ಮತ್ತು ಅಕಾಶ್ ಪ್ರಜಾಪತಿ, ಸಂಕಲನ ಅಕ್ಷಯ ಮೆಹತಾ, ಸಾಹಿತ್ಯ ಶಶಿರಾಜ್ ರಾವ್ ಕಾವೂರ್, ಫೀಲಿಂಗ್ ಮೋಕೆ ಪ್ರೊಡಕ್ಷನ್ ಮ್ಯಾನೇಜರ್ ಸತೀಶ್ ಬ್ರಹ್ಮಾವರ.

kudla_kefe_meet_7 kudla_kefe_meet_8 kudla_kefe_meet_9 kudla_kefe_meet_10 kudla_kefe_meet_11 kudla_kefe_meet_12 kudla_kefe_meet_13 kudla_kefe_meet_14

ನಟ ಜ್ಯೋತಿಷ್ ಶೆಟ್ಟಿ, ರಂಜನ್ ಶೆಟ್ಟಿ ಹಾಗೂ ಶಶಿರಾಜ್ ಕಾವೂರು ಸಿನಿಮಾದ ಕುರಿತು ಪೂರಕ ಮಾಹಿತಿ ನೀಡಿದರು. ಕುಡ್ಲ ಸಾಯಿಕೃಷ್ಣ ಪರಿಚಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕಿಶೋರ್ ಕೊಟ್ಟಾರಿ, ಚಿತ್ರದ ಖಳನಟ ಮನೋಜ್ ಪುತ್ತೂರು ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು.

Write A Comment