ಮನೋರಂಜನೆ

ವಿರುಷ್ಕಾ’ ಪ್ರೇಮದಲ್ಲಿ ಬಿರುಕು..!?

Pinterest LinkedIn Tumblr

SPT11ಜೋಡಿ ಹಕ್ಕಿಗಳಾದ ಅನುಷ್ಕಾ ಹಾಗೂ ವಿರಾಟ್ ಕೊಹ್ಲಿ ಲವ್ ಬ್ರೇಕ್ ಆಪ್ ಆಗಿದೆಯಾ..? ಹೌದು ಎನ್ನುತ್ತಿದೆ ಜೋಡಿ ನಡುವಿನ ಆಪ್ತ ವಲಯ. ಕಳೆದೆರಡು ವರ್ಷದಿಂದ ಜತೆ ಜತೆಯಲ್ಲಿ ತಿರುಗಾಡುತ್ತಿದ್ದ ಈ ಜೋಡಿ, ವರ್ಷಾರಂಭದಿಂದಲೂ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಇದರ ಜತೆ ವಿರಾಟ್ ಕೊಹ್ಲಿ ಅವರು ಸಹ ತಮ್ಮ ಇನ್ ಸ್ಟಾಗ್ರಾಮ್‌ನಲ್ಲಿ ’ಹಾರ್ಟ್ ಬ್ರೊಕನ್’ ಎಂದು ಹಾಕಿಕೊಂಡು ನಂತರದಲ್ಲಿ ಡಿಲೀಟ್ ಮಾಡಿರುವುದು ಇಂತಹ ಪ್ರಶ್ನೆಗೆ ಕಾರಣವಾಗಿದೆ.

ಮೂಲಗಳ ಪ್ರಕಾರ ಮದುವೆ ವಿಚಾರದಲ್ಲಿ ಈ ಜೋಡಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ಅನುಷ್ಕಾ ಶರ್ಮಾ ಅವರೇ ಕೆಲ ವಿಚಾರಗಳ ಕಾರಣ ಕೊಹ್ಲಿ ಜತೆಗೆ ಅಂತರವನ್ನು ಕಾಯ್ದುಕೊಂಡಿದ್ದಾರೆ ಎನ್ನಲಾಗಿದೆ. ಕಳೆದ ವಾರ ಕೊಹ್ಲಿ ಅವರು ಮುಂಬೈನಲ್ಲಿ ಸ್ನೇಹಿತರೊಬ್ಬರ ಹುಟ್ಟುಹಬ್ಬದಲ್ಲಿ ಭಾಗವಹಿಸಿದ್ದಾರೆ. ಅಲ್ಲಿಗೆ ಆಗಮಿಸಿದ್ದ ಯುವತಿಯರ ಜತೆ ಕೊಹ್ಲಿ ಡ್ಯಾನ್ಸ್ ಮಾಡಿದ್ದಾರೆ. ನಾನು ಏಕಾಂಗಿ, ಯಾರೇನು ತಿಳಿದುಕೊಳ್ಳುವುದಿಲ್ಲ ಎಂದು ಯುವತಿಯರ ಜತೆ ಕೋಹ್ಲಿ ಡ್ಯಾನ್ಸ್ ಮಾಡಿದ್ದಾರೆ. ಇದರ ಜತೆ ಇನ್‌ಸ್ಟಾ ಗ್ರಾಮ್‌ನಲ್ಲಿ ಕೊಹ್ಲಿ ತಮ್ಮ ಸೆಲ್ಫಿಯೊಂದನ್ನು ಹಾಕಿಕೊಂಡಿದ್ದರು. ಅದರಲ್ಲಿ ’ಹಾರ್ಟ್ ಬ್ರೊಕನ್’ ಎಂದು ಬರೆದುಕೊಂಡಿದ್ದರು. ಆದರೆ ನಂತರದ ನಿಮಿಷದಲ್ಲೇ ಕೊಹ್ಲಿ ಅದನ್ನು ಅಳಿಸಿ ಹಾಕಿದ್ದಾರೆ. ಚಿತ್ರವನ್ನು ಹಾಕಿ ತೆಗೆದುಹಾಕಿದ್ದು, ನನಗೆ ಅಪರಾಧ ಮಾಡಿದಂತೆ ಅನಿಸುತ್ತಿದೆ ಎಂದು ನಂತರ ಕೊಹ್ಲಿ ಬರೆದುಕೊಂಡಿದ್ದಾರೆ.

ಅನುಷ್ಕಾಾ ಅವರಿಗೆ ಕೋಹ್ಲಿ ಅವರಿಗಿಂತಲೂ ಹೆಚ್ಚು ವಯಸ್ಸಾಗಿದೆ.ಭಾರತ ಕ್ರಿಕೆಟ್‌ನ ಮುಂಚೂಣಿ ಆಟಗಾರನಾಗಿರುವ ಕೊಹ್ಲಿ ಹಾಗೂ ನಟಿ ಅನುಷ್ಕಾ ಜತೆ ಕಳೆದ ಮೂರು ವರ್ಷಗಳ ಹಿಂದೆ ಪ್ರೇಮ ಏರ್ಪಟ್ಟಿತ್ತು. ನ್ಯೂಜಿಲೆಂಡ್‌ನಲ್ಲಿ ಈ ಜೋಡಿ ತಿರುಗಾಡುವುದು ದೊಡ್ಡ ಸುದ್ದಿಹಾಗಿತ್ತು. ಮುಂಬೈ ಹಾಗು ದೆಹಲಿಯ ಪಬ್, ಪಾರ್ಟಿಗಳಲ್ಲಿ ಈ ಜೋಡಿ ಕಾಣಿಸಿಕೊಂಡಿತ್ತು. ಅನುಷ್ಕಾ ತಂದೆ ಸಹ ವಿರಾಟ್ ಕೊಹ್ಲಿ ಅವರನ್ನು ರೆಸ್ಟೊರೆಂಟ್ ಒಂದರಲ್ಲಿ ಭೇಟಿಯಾಗಿದ್ದರು. ಇದಾದ ನಂತರ ಈ ಜೋಡಿ ಮದುವೆಯಾಗುವುದು ಪಕ್ಕಾ ಎನ್ನಲಾಗಿತ್ತು. ಆದರೀಗಾ ಜೋಡಿ ನಡುವೆ ಬಿರುಕು ಉಂಟಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

Write A Comment