ಅಹಮದಾಬಾದ್: ವಿವಾದಕ್ಕೆ ಎಡೆಮಾಡಿಕೊಡುತ್ತಿರುವ ಲವ್ ಜಿಹಾದ್ ಇದೀಗ ಗುಜರಾತ್ ರಾಜ್ಯದಲ್ಲಿ ಸದ್ದು ಮಾಡತೊಡಗಿದೆ. ಹೌದು ಬೇರೆ ಧರ್ಮದ ಯುವತಿಯರನ್ನು ಮದುವೆಯಾಗೋ ಮುಸ್ಲಿಮ್ ಯುವಕರಿಗೆ ಭಾರೀ ಮೊತ್ತದ ಹಣ ನೀಡುವ ಅಮಿಷವೊಡ್ಡುವ ಎಸ್ ಎಂಎಸ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಎಂದು ಮಾಧ್ಯಮದ ವರದಿಯೊಂದು ತಿಳಿಸಿದೆ.
ಮುಸ್ಲಿಮ್ ಯುವಕರು ಬೇರೆ, ಬೇರೆ ಧರ್ಮದ ಯುವತಿಯರನ್ನು ಮದುವೆಯಾದರೆ ಅವರಿಗೆ ಲಕ್ಷಾಂತರ ರೂಪಾಯಿ ಬಹುಮಾನ ಕೊಡುವ ಸಂದೇಶಯುಳ್ಳ ಎಸ್ಎಂಎಸ್ ವಾಟ್ಸಪ್ ಗಳಲ್ಲಿ ಹರಿದಾಡುತ್ತಿದೆ.
ಸ್ಟೂಡೆಂಟ್ಸ್ ಆಫ್ ಮುಸ್ಲಿಮ್ ಯೂತ್ ಫಾರಂ ಹೆಸರಿನಲ್ಲಿ ಈ ಸಂದೇಶ ಹರಿದಾಡುತ್ತಿದೆ. ಸಂದೇಶದ ಪ್ರಕಾರ, ಮುಸ್ಲಿಮ್ ಯುವಕರು ಬೇರೆ, ಬೇರೆ ಧರ್ಮದ ಯುವತಿಯರನ್ನು ತಮ್ಮ ಪ್ರೇಮದ ಬಲೆಯೊಳಗೆ ಬೀಳಿಸಿ ಅವರನ್ನು ಮದುವೆಯಾಗುವಂತೆ ಪ್ರೇರೇಪಿಸುತ್ತಿದೆ ಎಂದು ವರದಿ ವಿವರಿಸಿದೆ.
ಎಸ್ಎಂಎಸ್ ಸಂದೇಶದಲ್ಲಿ, ಒಂದು ವೇಳೆ ಮುಸ್ಲಿಮ್ ಯುವಕ ಹಿಂದೂ ಬ್ರಾಹ್ಮಣ ಯುವತಿಯನ್ನು ಮದುವೆಯಾದರೆ ಆತನಿಗೆ 5 ಲಕ್ಷ ರೂಪಾಯಿ ಇನಾಮು, ಅದೇ ರೀತಿ ಸಿಖ್ಖ್ ಪಂಜಾಬಿ ಯುವತಿಯನ್ನು ಮದುವೆಯಾದರೆ 7 ಲಕ್ಷ ರೂಪಾಯಿ ನಗದು ಸಿಗಲಿದೆ ಎಂದು ವಿವರಿಸಿದೆ.
ಎಷ್ಟೆಷ್ಟು ಹಣ ಸಿಗಲಿದೆ…
ಒಂದು ವೇಳೆ ಕ್ಷತ್ರಿಯ ಹಿಂದು ಸಮುದಾಯದ ಯುವತಿಯನ್ನು ಮದುವೆಯಾದರೆ 4.5 ಲಕ್ಷ ರೂಪಾಯಿ, ಗುಜರಾತಿ ಬ್ರಾಹ್ಮಿನ್ ಯುವತಿಯನ್ನು ಮದುವೆಯಾದರೆ 6 ಲಕ್ಷ, ಪಂಜಾಬಿ ಹಿಂದೂ ಯುವತಿಯನ್ನು ಮದುವೆಯಾದ್ರೆ 6 ಲಕ್ಷ, ಕ್ರಿಶ್ಚಿಯನ್ ರೋಮನ್ ಕ್ಯಾಥೋಲಿಕ್ ಯುವತಿಯನ್ನು ಮದುವೆಯಾದ್ರೆ 4ಲಕ್ಷ, ಕ್ರಿಶ್ಚಿಯನ್ ಪ್ರೊಟೆಸ್ಟೆಂಟ್ ಯುವತಿಯನ್ನು ಮದುವೆಯಾದರೆ 3 ಲಕ್ಷ, ಜೈನ್ ಯುವತಿಯನ್ನು ಮದುವೆಯಾದರೆ 3 ಲಕ್ಷ, ಗುಜರಾತಿ ಕುಛ್ ಯುವತಿಯನ್ನು ಮದುವೆಯಾದರೆ 3 ಲಕ್ಷ ಇನಾಮು ಮುಸ್ಲಿಮ್ ಯುವಕರಿಗೆ ಸಿಗಲಿದೆ ಎಂದು ಸಂದೇಶದಲ್ಲಿ ತಿಳಿಸಿರುವುದಾಗಿ ವರದಿ ಹೇಳಿದೆ.
ಈ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹರಿದಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ವಡೋದರ ಪೊಲೀಸ್, ಜನರು ಇಂತಹ ಸಂದೇಶವನ್ನು ನಿರ್ಲಕ್ಷಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಯಾವುದಾದರು ಕರೆ ಬಂದಲ್ಲಿ ಕೂಡಲೇ ಪೊಲೀಸರಿಗೆ ದೂರು ನೀಡುವಂತೆಯೂ ಪೊಲೀಸರು ವಿನಂತಿಸಿಕೊಂಡಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.
-ಉದಯವಾಣಿ