ರಾಷ್ಟ್ರೀಯ

ಪಚೌರಿ ವಿರುದ್ಧ ಮತ್ತೊಂದು ಲೈಂಗಿಕ ಆರೋಪ

Pinterest LinkedIn Tumblr

pachauri

ನವದೆಹಲಿ (ಪಿಟಿಐ): ಇಂಧನ ಮತ್ತು ಸಂಪನ್ಮೂಲ ಸಂಸ್ಥೆಯ (ಟೆರಿ) ಕಾರ್ಯನಿರ್ವಾಹಕ ಉಪಾಧ್ಯಕ್ಷ ಆರ್‌.ಕೆ. ಪಚೌರಿ ವಿರುದ್ಧ ಇನ್ನೊಂದು ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ.

‘10 ವರ್ಷಗಳ ಹಿಂದೆ ಪಚೌರಿ ನನಗೆ ಲೈಂಗಿಕ ಕಿರುಕುಳ ನೀಡಿದ್ದರು. ವಿವಿಧ ಕೆಲಸಗಳ ನೆಪ ಹೇಳಿ ನನ್ನನ್ನು ಕಚೇರಿಗೆ ಕರೆಸಿ ಅಸಭ್ಯವಾಗಿ ವರ್ತಿಸಿದ್ದರು. ಯಾವುದೇ ಕೆಲಸ ಇಲ್ಲದಿದ್ದರೂ ಮತ್ತೆ ಮತ್ತೆ ಕಚೇರಿಗೆ ಬರುವಂತೆ ಹೇಳುತ್ತಿದ್ದರು’ ಎಂದು ಸಂಸ್ಥೆಯ ಮಾಜಿ ಉದ್ಯೋಗಿಯೊಬ್ಬರು ಆರೋಪ ಮಾಡಿದ್ದಾರೆ.

‘ಈ ಬಗ್ಗೆ ಕಳೆದ ವರ್ಷ ಫೆಬ್ರುವರಿಯಲ್ಲಿ ಪೊಲೀಸರಿಗೆ ದೂರು ನೀಡಿದ್ದೆವು. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಪ್ರಕರಣವನ್ನು ಮಾಧ್ಯಮಗಳಿಗೆ ಬಹಿರಂಗಪಡಿಸಿದ್ದೇವೆ’ ಎಂದು ಆರೋಪ ಮಾಡಿರುವ ಮಹಿಳೆಯ ವಕೀಲೆ ವೃಂದಾ ಗ್ರೋವರ್‌ ತಿಳಿಸಿದ್ದಾರೆ.

‘ಟೆರಿ ಸಂಸ್ಥೆಗೆ ಸೇರಿದ ಕೆಲವೇ ದಿನಗಳಲ್ಲಿ ಪಚೌರಿ ನನ್ನನ್ನು ಲೈಂಗಿಕತೆ ಸೂಚಕವಾದ ಅಡ್ಡ ಹೆಸರಿನಿಂದ ಕರೆಯಲು ಶುರು ಮಾಡಿದ್ದರು. ನಿನಗೆ ಈ ಹೆಸರೇ ಸೂಕ್ತ ಎನ್ನುತ್ತಿದ್ದರು’ ಎಂದು ಆ ಮಹಿಳೆ ಹೇಳಿದ್ದಾರೆ.

Write A Comment