ಅಂತರಾಷ್ಟ್ರೀಯ

ಡೇಟಿಂಗ್‌ನಲ್ಲಿ ಪುರುಷರೇ ಮುಂದು!

Pinterest LinkedIn Tumblr

dating

ಇದು ನೆಟ್‌ ಯುಗ. ಬೆಳಿಗ್ಗೆ ಏಳುವುದರಿಂದ ರಾತ್ರಿ ಮಲಗುವವರೆಗೂ ಅಂತರ್ಜಾಲವಿಲ್ಲದೆ ಬದುಕಲು ಸಾಧ್ಯವೇ ಇಲ್ಲ ಎಂಬಂಥ ಸಂಕೀರ್ಣ ಚೌಕಟ್ಟನ್ನು ಕಟ್ಟಿಕೊಳ್ಳುವ ಕಾಲ. ಸಂಬಂಧಗಳಿಗೂ ‘ನೆಟ್‌’ ಬೆಸುಗೆ ಬಂದು ದಶಕಗಳೇ ಕಳೆದಿವೆ. ಪ್ರೀತಿಯಲ್ಲಿ ಇರೋ ಸುಖವನ್ನು ನೆಟ್‌ನಲ್ಲಿಯೇ ಕಂಡು, ನೆಟ್‌ನಲ್ಲಿಯೇ ಮರೆಯುವುದರಲ್ಲಿ ಈಗಿನ ಪೀಳಿಗೆ ಬಹಳ ಮುಂದು. ಆನ್‌ಲೈನ್‌ನಲ್ಲಿಯೇ ಪ್ರೀತಿ ಹುಟ್ಟುತ್ತದೆ. ಆನ್‌ಲೈನ್‌ನಲ್ಲಿಯೇ ಡೇಟಿಂಗ್, ಅಲ್ಲಿಯೇ ಮದುವೆ, ಕೊನೆಗೆ ಅಲ್ಲಿಯೇ ವಿಚ್ಛೇದನವನ್ನೂ ಪಡೆಯುತ್ತಾರೆ.

ಈ ಡೇಟಿಂಗ್‌ನ ಮೂಲ ಚಾಟಿಂಗ್ ಆದರೂ, ಇದು ಮೊದಲು ಶುರುವಾಗುವುದು ಪುರುಷರಿಂದಲೇ. ಡೇಟಿಂಗ್‌ಗೆ ಸಿದ್ಧ ಎಂಬ ಸಣ್ಣ ಸಂಕೇತಗಳನ್ನಷ್ಟೇ ಮಹಿಳೆಯರು ಕಳುಹಿಸುತ್ತಾರೆ. ಅವರು ಎಂದಿಗೂ ನೇರವಾಗಿ ಖಾಸಗಿ ಸಂದೇಶ ಕಳುಹಿಸುವುದಿಲ್ಲ. ಅವರ ಮನಸಿನಲ್ಲಿ ತಮ್ಮೊಂದಿಗೆ ಚಾಟ್‌ ಮಾಡುವ ಪುರುಷನೆಡೆಗೆ ಆಕರ್ಷಣೆ ಉಂಟಾದಾಗ, ತಮ್ಮ ಪ್ರೊಫೈಲ್‌ನ ಕೆಲವು ಮಾಹಿತಿ ಅವರಿಗೆ ಮುಕ್ತವಾಗುವಂತೆ ಮಾಡುತ್ತಾರಷ್ಟೇ. ಉಳಿದಂತೆ ಡೇಟಿಂಗ್‌ಗೆ ಚಾಲನೆ ದೊರಕುವುದು ಪುರುಷರಿಂದಲೇ ಎನ್ನುತ್ತದೆ ಅಧ್ಯಯನ.

ಸುಮಾರು ಒಂದು ಲಕ್ಷ ಜನರು ಇದಕ್ಕೆ ಸಂಬಂಧಿಸಿದ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು. ಇವರೆಲ್ಲರೂ ಅಂತರ್ಜಾಲದ ಹೊಸ ಬಳಕೆದಾರರು. ತಮಗೆ ಅಪರಿಚಿತವಾದ ಪ್ರೊಫೈಲ್‌ಗಳನ್ನು ಹೊಕ್ಕಿ ನೋಡುವಾಗ ಅವರಲ್ಲಿ ಹಿಂಜರಿಕೆಯಿರುತ್ತದೆ. ಅದು ಮಹಿಳೆಯರಲ್ಲಿ ಇನ್ನೂ ಹೆಚ್ಚು. ತಮ್ಮ ಪ್ರೊಫೈಲ್‌ಗೆ ಪದೇ ಪದೇ ಇಣುಕುವ ಪುರುಷರ ಬಗ್ಗೆ ನಿಧಾನವಾಗಿ ಮಹಿಳೆಯರಲ್ಲಿ ಕುತೂಹಲ ಮೂಡುತ್ತದೆ. ಅವರ ಕುರಿತು ತಿಳಿದುಕೊಳ್ಳಲು ನೇರವಾಗಿ ಮುಂದಾಗುವುದಿಲ್ಲ. ಅದಕ್ಕಾಗಿ ಒಂದೊಂದೇ ಸಂಗತಿಗಳನ್ನು ಅವರಿಗೆ ತಿಳಿಯುವಂತೆ ಮಾಡುತ್ತಾರೆ. ಮಹಿಳೆಯರಿಗಿಂತ ನಾಲ್ಕುಪಟ್ಟು ಹೆಚ್ಚು ಸಂದೇಶಗಳನ್ನು ಪುರುಷರು ಕಳುಹಿಸುತ್ತಾರೆ ಎಂದಿದೆ ಅಧ್ಯಯನ.

Write A Comment