ಮೂಡುಬಿದರೆ,ಫೆ.12: ಗುವಾಹಟಿ (ಗೌಹಾಟಿ)ಯಲ್ಲಿ ನಡೆಯುತ್ತಿರುವ ಸೌತ್ ಏಶಿಯನ್ ಗೇಮ್ಸ್‍ನಲ್ಲಿ ಭಾರತವನ್ನು ಪ್ರತಿನಿಧಿಸಿರುವ, ಮೂಡುಬಿದರೆ ಆಳ್ವಾಸ್ ಕಾಲೇಜಿನ ಪ್ರ. ಬಿಕಾಂ ವಿದ್ಯಾರ್ಥಿ ಧಾರುಣ್ ಪುರುಷರ 400 ಮೀ. ಹರ್ಡಲ್ಸ್ ನಲ್ಲಿ (50.54 ಸೆ.) ಚಿನ್ನ ದ ಪದಕ ಗೆದ್ದಿದ್ದಾರೆ.
20ರ ಹರೆಯದ ಧಾರುಣ್ ಇತ್ತೀಚೆಗೆ ಪಾಟಿಯಾಲದಲ್ಲಿ ನಡೆದ ಅಂತರ್ ವಿ.ವಿ. ಕ್ರೀಡಾಕೂಟದಲ್ಲೂ ಪುರುಷರ 400 ಮೀ. ಹರ್ಡಲ್ಸ್‍ನ್ನು 51.34ಸೆ.ನಲ್ಲಿ ಕ್ರಮಿಸಿ ಹೊಸ ಕೂಟ ದಾಖಲೆ ಮಾಡಿ ಗಮನ ಸೆಳೆದಿದ್ದರು.
ಈ ಕುರಿತು ಪತ್ರಿಕೆ ಪ್ರತಿಕ್ರಿಯಿಸಿರುವ ಡಾ.ಎಂ.ಮೋಹನ ಆಳ್ವ, ಈ ಸಾಧನೆ ಕ್ರೀಡಾ ಕ್ಷೇತ್ರದಲ್ಲಿ ತಮ್ಮ ಪರಿಶ್ರಮಕ್ಕೆ ಸಂತೃಪ್ತಿಯನ್ನು ನೀಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಆಳ್ವಾಸ್ ಕ್ರೀಡಾಪಟುಗಳು ಒಲಿಂಪಿಕ್ಸ್‍ನಲ್ಲೂ ಮಿಂಚುವಂತಾಗಬೇಕು ಎಂದರು.