ವ್ಯಾಲೆಂಟೈನ್ಸ್ ಡೇ. ಕೆಲವು ಜೋಡಿ ಹಕ್ಕಿಗಳು ಆಗಲೇ ಯೋಜನೆ ಸಿದ್ಧ ಮಾಡಿಟ್ಟುಕೊಂಡಿವೆ. ಇನ್ನು ಕೆಲವು ಜೋಡಿಗಳು ಆಗಲೇ ಹಾರಿ ಹೋಗಿವೆ. ಮತ್ತೂಂದಿಷ್ಟು ಮಂದಿ ನಗರದಲ್ಲೇ ಇದ್ದು ಹ್ಯಾಪಿಯಾಗಿ ಇಡೀ ದಿನ ಕಳೆಯುವ ಆಲೋಚನೆಯಲ್ಲಿದೆ. ಆದರೆ ಎಲ್ಲಿ ಹೋಗುವುದು, ಏನು ಮಾಡುವುದು ಅಂತ ಗೊತ್ತಿಲ್ಲ. ಫ್ರೆಂಡ್ಸ್ ಹತ್ತಿರ ಕೇಳಿದರೆ ಒಬ್ಬೊಬ್ಬರು ಒಂದೊಂದು ಹೇಳುತ್ತಾರೆ. ಅದರಲ್ಲಿ ಯಾವುದನ್ನು ಆರಿಸುವುದೇ ಎಂಬುದೇ ಗೊಂದಲ. ಕೊನೆಗೂ ಒಂದು ನಿರ್ಧಾರಕ್ಕೆ ಬರಲಾಗಿಲ್ಲ ಎನ್ನುವವರಿಗೆ ನಾಲ್ಕೈದು ಆಯಯ್ಕೆಗಳನ್ನು ನಾವು ನೀಡುತ್ತೇವೆ.
ರೊಮ್ಯಾಂಟಿಕ್ ಆಯ್ಕೆ
ರೊಮ್ಯಾಂಟಿಕ್ ಅಂದ ತಕ್ಷಣ ಒಂದು ಬೆಟ್ಟ, ಅದರ ತುದಿಯಲ್ಲಿ ಗಾಳಿಗೆ ಮೈಯೊಡ್ಡಿ ನಿಂತಿರುವ ಜೋಡಿಗಳ ಚಿತ್ರ ನೆನಪಾಗುತ್ತದೆ. ಅಂಥದ್ದೊಂದು ರೊಮ್ಯಾಂಟಿಕ್ ಆಯ್ಕೆ ಬೇಕೆಂದರೆ ನೇರವಾಗಿ ನಂದಿ ಬೆಟ್ಟಕ್ಕೆ ಹೋಗಬಹುದು. ನಂದಿ ಬೆಟ್ಟದ ದಾರಿ ನಗರದಿಂದ ಸ್ವಲ್ಪ ದೂರವೇ ಇದೆ. ಲಾಂಗ್ ರೈಡ್ ಆದಂತೆಯೂ ಆಗುತ್ತದೆ. ಅಲ್ಲಲ್ಲಿ ನಿಂತು ಅಕ್ಕಪಕ್ಕದ ತೋಟಗಳನ್ನು ನೋಡುತ್ತಾ ಇಡೀ ದಿನ ಕಳೆದು ಸಂಜೆ ಹೊತ್ತು ಬೆಟ್ಟದ ತುದಿಯಲ್ಲಿ ನಿಂತರೆ ಆಹಾ ಒಂದೊಳ್ಳೆ ದಿನವನ್ನು ಕಳೆಯುವುದು ನಿಶ್ಚಿತ. ಅದು ಬೇಡವೆಂದರೆ ಸಾವನದುರ್ಗಕ್ಕೆ ಹೋಗಿಬರಬಹುದು. ಇಲ್ಲವೋ ಶಿವಗಂಗೆ ಬೆಟ್ಟವಾದರೂ ಪರವಾಗಿಲ್ಲ.
ಅಡ್ವೆಂಚರ್ ಆಯ್ಕೆ
ಈಗೀಗ ಪ್ರೇಮಿಗಳಿಗೆ ಅಡ್ವೆಂಚರ್ ಆಯ್ಕೆಗಳೇ ಜಾಸ್ತಿ ಇಷ್ಟವಾಗುತ್ತದೆ. ಅಂಥವರಿಗೆಂದೇ ಅನೇಕ ಅಡ್ವೆಂಚರ್ ಸ್ಪಾಟ್‌ಗಳೂ ಇವೆ. ನೀವು ಡರ್ಟ್ ಮೇನಿಯಾ(http://www.dirtmania.in/) ನೆನಪಿಸಿಕೊಳ್ಳಬಹುದು. ಪ್ರೇಮಿಗಳ ದಿನದಂದು ಪ್ರೇಮಿಗಳು ಕ್ವಾಡ್ ಬೈಕ್ ರೈಡ್ ಮಾಡುವ ಒಳ್ಳೆ ಆಯ್ಕೆ ಇದೆ. ಕನಕಪುರ ರಸ್ತೆಯಲ್ಲಿ ಈ ಡರ್ಟ್‌ಮೇನಿಯಾ ಇದೆ. ಒಂಥರಾ ಮಜಾ ರೈಡಿಂಗ್ ಆಗುವುದು ಖಂಡಿತಾ. ಅದು ಬೇಡವೆಂದರೆ ಏರ್ ಬಲೂನಲ್ಲಿ ಹಾರಿ ಹೋಗಬಹುದು. ಏರೋನ್ಪೋರ್ಟ್ಸ್ (https://www.facebook.com/AERO-Adventures-336407049862635/timeline) ಟೀಮ್ ಅದಕ್ಕೆ ಅವಕಾಶ ಒದಗಿಸುತ್ತದೆ. ಹಾರುತ್ತಾ ಹಾರುತ್ತಾ ಪ್ರಪೋಸ್ ಮಾಡುವುದು ಕೂಡ ಒಂದೊಳ್ಳೆ ಐಡಿಯಾ ಅಲ್ವೇ.
ಆಟದ ಆಯ್ಕೆ
ಬೆಂಗಳೂರಲ್ಲಿ ಈಗೀಗ ವಿಭಿನ್ನ ಆಟಗಳಿವೆ. ಗನ್ ಹಿಡಿದು ಆಟ ಆಡುವುದರಿಂದ ಹಿಡಿದು ಬ್ರೇನ್ ಗೇಮ್‌ವರೆಗೂ ಸಿಕ್ಕಾಪಟ್ಟೆ ಆಯ್ಕೆಗಳಿವೆ. ಪೇಂಟ್‌ಬಾಲ್ ಆಡಲು ಆಸಕ್ತಿ ಇರುವವರಿಗೆ ಪೇಂಟ್‌ಬಾಲ್ ಎಕ್ಸ್ (http://paintballx.in/) ಇದೆ. ಈ ಆಯ್ಕೆ ಗುಂಪಾಗಿ ಹೋಗುವವರಿದ್ದರೆ ಮಾತ್ರ ಸಹಾಯವಾಗುತ್ತದೆ. ಅದನ್ನು ಹೊರತು ಪಡಿಸಿದರೆ ಟಾಕ್ ಟು ದಿ ಹ್ಯಾಂಡ್ (http://www.talktothehand.in/) ಇದೆ. ಇಲ್ಲಿ ಲೇಸರ್ ಗನ್‌ಗಳ ಜೊತೆ ಆಟ ಆಡಬಹುದು. ಇನ್ನು ಬ್ರೇನ್‌ಗೆàಮ್ ಇಷ್ಟ ಅನ್ನುವವರಿಗೆ ರಿಡಲ್ ರೂಮ್ (http://www.riddleroom.in/) ಇದೆ. ಬ್ರೇಕ್‌ಔಟ್ (http://www.breakout.co.in/) ಇದೆ. ಎಸ್ಕೇಪ್‌ರೂಮ್ (http://www.escaperoom.com/bangalore/) ಇದೆ. ಯಾವುದು ಬೇಕಾದರೂ ಇಷ್ಟ ಪಡಬಹುದು.
-ಉದಯವಾಣಿ