ಮಂಗಳೂರು, ಫೆ.14: ಪತಾಂಜಲಿ ಪ್ರತಿಷ್ಠಾನದ ವತಿಯಿಂದ 9ನೆ ವರ್ಷದ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮವು ನಗರದ ಕದ್ರಿ ದೇವಳದಲ್ಲಿ ರವಿವಾರ ಬೆಳಗ್ಗೆ ನಡೆಯಿತು.
ಪತಾಂಜಲಿ ಪ್ರತಿಷ್ಠಾನದ ಪದಾಧಿಕಾರಿಗಳು ಸೇರಿದಂತೆ ಸುಮಾರು 450 ಮಂದಿ ಈ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಊರ್ಧ್ವ ನಮನ ಆಸನ, ದಂಡಾಸನ, ಶಶಾಂಕಾಸನ, ಅಷ್ಟ ಅಂಗ ಪ್ರಾಣಿಪಾದಾಸನ, ಭುಜಂಗಾಸನ ಮೊದಲಾದ 12 ವೈವಿಧ್ಯಮಯ ಆಸನಗಳನ್ನು ನಿರ್ವಹಿಸಲಾಯಿತು.
ಪತಾಂಜಲಿ ಪ್ರತಿಷ್ಠಾನವು ಕಳೆದ ಏಳು ದಿನಗಳಲ್ಲಿ ನಗರದ ಆರು ಕಡೆಗಳಲ್ಲಿ ಸೂರ್ಯ ನಮಸ್ಕಾರವನ್ನು ಆಯೋಜಿಸಿತ್ತು. ಪ್ರತಿಷ್ಠಾನದ ಅಧ್ಯಕ್ಷ ನಾರಾಯಣ ಶೆಟ್ಟಿ ಹಾಗೂ ಧರ್ಮಸ್ಥಳದ ಶಾಂತಿವನ ಟ್ರಸ್ಟ್‌ನ ನಿರ್ದೇಶಕ ಡಾ.ಶಶಿಕಾಂತ್ ಜೈನ್ ಉಪಸ್ಥಿತರಿದ್ದರು